ಒನ್‌ಪ್ಲಸ್ 7T ಪ್ರೊ ಬೆಲೆಯಲ್ಲಿ ಭಾರಿ ಇಳಿಕೆ!
ಒನ್‌ಪ್ಲಸ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ ಸರಣಿಯ ಬೆಲೆಯನ್ನು ಘೋಷಿಸಿದೆ. ಅದರ ಬೆನ್ನಲ್ಲೇ ಈಗ ತನ್ನ ಜನಪ್ರಿಯ ಒನ್‌ಪ್ಲಸ್ 7T ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಸರ್‌ಪ್ರೈಸ್ ನೀಡಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ನೂತನ ಒನ್‌ಪ್ಲಸ್ 8 ಫೋನಿನ ಆರಂಭಿಕ ಬೆಲೆಯು 41,999ರೂ. ಆಗಿದೆ. ಹಾಗೆಯೇ ಒನ್‌ಪ್ಲಸ್ 8 ಪ್ರೊ ಫೋನಿನ ಆರಂಭಿಕ ಬೆಲೆಯು 54,999ರೂ.ಪ್ರೈಸ್‌ಟ್ಯಾಗ್ ಹೊಂದಿದೆ.

ಹೌದು, ಒನ್‌ಪ್ಲಸ್ ಸಂಸ್ಥೆಯು ಒನ್‌ಪ್ಲಸ್ 8 ಸರಣಿ ಲಾಂಚ್ ಮಾಡಿದ್ದು, ಭಾರತದಲ್ಲಿ ಫೋನ್‌ಗಳ ಬೆಲೆಯನ್ನು ಘೋಷಿಸಿದೆ. ಹಾಗೆಯೇ ತನ್ನ ಒನ್‌ಪ್ಲಸ್ 7T ಪ್ರೊ ಫೋನಿನ ಬೆಲೆಯಲ್ಲಿ 6000ರೂ.ಗಳನ್ನು ಕಡಿತ ಮಾಡಿದೆ. ಈ ಫೋನ್ ಇದೀಗ 47,999ರೂ.ಗಳಿಗೆ ಲಭ್ಯವಾಗಲಿದೆ. ದರ ಕಡಿತದ ನಂತರದ ಬೆಲೆಯನ್ನು ಸಂಸ್ಥೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಹಾಗಾದರೆ ಒನ್‌ಪ್ಲಸ್ 7T ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ರಚನೆ
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ 1,440 x 3,120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ QHD ಫ್ಲ್ಯುಡ್ AMOLED ಡಿಸ್‌ಪ್ಲೇ ಪ್ಯಾನೆಲ್ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 90Hz ರೀಫ್ರೆಶ್ ರೇಟ್ ಹೊಂದಿದೆ. ಡಿಸ್‌ಪ್ಲೇಯು HDR10+ ಮತ್ತು DCI-P3 ಸೌಲಭ್ಯಗಳ ಸಪೋರ್ಟ್ ಪಡೆದುಕೊಂಡಿದೆ. ಡಿಸ್‌ಪ್ಲೇ ಅತ್ಯುತ್ತಮ ಪ್ರಖರತೆ ಹೊಂದಿದ್ದು, ಗೇಮಿಂಗ್‌ಗೆ ಮತ್ತು ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಿಲಿದೆ.

ಪ್ರೊಸೆಸರ್ ಸಾಮರ್ಥ್ಯ
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇತ್ತೀಚಿನ ಹೊಸ ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಅಡ್ರಿನೊ 640 GPU ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನಿನಲ್ಲಿ 8GB RAM ಸಾಮರ್ಥ್ಯದ ಜೊತೆಗೆ 256GB ಆಂತರಿಕ ಸಂಗ್ರಹ ಅವಕಾಶವನ್ನು ಕಾಣಬಹುದಾಗಿದೆ.

ವಿಶೇಷ ಕ್ಯಾಮೆರಾ
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು f/1.6 ಅಪರ್ಚರ್ನೊಂದಿಗೆ OIS ಸಹಿತ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಹೊಂದಿದ್ದು, ತೃತೀಯ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ಬ್ಯಾಟರಿ ಪವರ್
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ 4085mAh ಸಾಮರ್ಥ್ಯದ ಬ್ಯಾಟರಿ ಲೈಫ್ ಅನ್ನು ಪಡೆದಿದ್ದು, 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್ 5, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ, ಯುಎಸ್‌ಬಿ 3.1 ಪ್ರೊಟೊಕಾಲ್, ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಸಹ ಪಡೆದಿದೆ.


Click it and Unblock the Notifications








