ಭಾರತದಲ್ಲಿ 'ಒನ್‌ಪ್ಲಸ್‌ 7T' ಸೇಲ್‌ ಆರಂಭ!..ಬೆಲೆ ಮತ್ತು ಆಫರ್ ತಿಳಿಯಿರಿ!

|

ಗ್ರಾಹಕರಲ್ಲಿ ಬಾರಿ ಕುತೂಹಲ ಮೂಡಿಸಿದ್ದ 'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದಿನಿಂದ ಸೇಲ್ ಆರಂಭಿಸಿದ್ದು, ಇಂದು (ಸೆ.28) ಮಧ್ಯಾಹ್ನ 12ರಿಂದ ಇ ಕಾಮರ್ಸ್ ದೈತ್ಯ ಅಮೆಜಾನ್ ಸ್ಮಾರ್ಟ್‌ಫೋನ್ ಖರೀದಿಗೆ ಮುಕ್ತವಾಗಿದೆ. ಹಾಗೆಯೇ ಸದ್ಯ ಅಮೆಜಾನ್‌ನಲ್ಲಿ ಗ್ರೇಟ್‌ ಇಂಡಿಯನ್ ಸೇಲ್‌ ಮೇಳವು ಆರಂಭವು ಇದೆ. ಹೀಗಾಗಿ ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್‌ಗೆ ಭರ್ಜರಿ ಓಪೆನಿಂಗ್ ಜೊತೆಗೆ ರಿಯಾಯಿತಿಗಳು ಸಿಗಲಿವೆ.

ಒನ್‌ಪ್ಲಸ್‌ 7T

ಹೌದು, 'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ತ್ರಿವಳಿ ಕ್ಯಾಮೆರಾ ಜೊತೆಗೆ 8GB RAM ಮತ್ತು 256GB ಸ್ಟೋರೇಜ್ ಸ್ಥಳಾವಕಾಶ ರೀಚ್ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಫೋನಿನ 8GB RAM ಮತ್ತು 128GB ವೇರಿಯಂಟ್‌ 37,999ರೂ.ಗಳಿಗೆ ಲಭ್ಯವಾಗಲಿದ್ದು, ಹಾಗೆಯೇ 8GB RAM ಮತ್ತು 256GB ವೇರಿಯಂಟ್‌ 39,999ರೂ.ಗಳಿಗೆ ದೊರೆಯಲಿದೆ. ಗ್ರಾಹಕರು ಅಮೆಜಾನ್ ಮತ್ತು ಒನ್‌ಪ್ಲಸ್‌ ತಾಣಗಳಲ್ಲಿ ಖರೀದಿಸಬಹುದು.

ಒನ್‌ಪ್ಲಸ್‌ ಕೇರ್ ಪ್ರೋಗ್ರಾಂ

ಒನ್‌ಪ್ಲಸ್‌ ಕಂಪನಿಯು ಒನ್‌ಪ್ಲಸ್‌ ಕೇರ್ ಪ್ರೋಗ್ರಾಂ ಪರಿಚಯಿಸಿದ್ದು, ಗ್ರಾಹಕರಿಗೆ ಒಂದು ವರ್ಷದ ಹೆಚ್ಚುವರಿ ವಾರಂಟಿ ದೊರೆಯಲಿದೆ. ಹಾಗೆಯೇ 50 ಪರ್ಸೆಂಟ್ ಬ್ಯಾಟರಿ ರಿಪ್ಲೆಸ್‌ಮೆಂಟ್ ಸೌಲಭ್ಯ ನೀಡಲಿದೆ. ಇನ್ನು ಎಸ್‌ಬಿಐ ಡೆಬಿಟ್‌ ಮತ್ತು ಕ್ರೆಡಿಟ್‌ ಗ್ರಾಹಕರಿಗೆ ಶೇ.10% ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಹಾಗಾದರೇ ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 2,400 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಫ್ಲ್ಯೂಡ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಇದರೊಂದಿಗೆ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 402 PPI ಆಗಿದ್ದು, ಡಿಸ್‌ಪ್ಲೇಯ ರಿಫ್ರೇಶ್‌ ರೇಟ್ 90Hz ಆಗಿದೆ. ಹಾಗೆಯೇ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ಅನ್ನು ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್‌ 10 ಆಧಾರಿತ ಆಕ್ಸಿಜನ್ ಓಎಸ್‌ 10 ಬೆಂಬಲವನ್ನು ಒಳಗೊಂಡಿದೆ. ಜೊತೆಗೆ ಆಂಡ್ರಿನೊ 640 GPU ಸಹ ನೀಡಲಾಗಿದೆ. ಇನ್ನು ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಹಾಗೂ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಗಿದೆ.

ಮೂರು ಕ್ಯಾಮೆರಾ

ಮೂರು ಕ್ಯಾಮೆರಾ

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸೋನಿಯ IMX586 ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್‌ ಟೆಲಿಪೋಟೋ ಲೆನ್ಸ್‌ ಪಡೆದಿದ್ದು, ತೃತೀಯ ಕ್ಯಾಮೆರಾವು 16ಎಂಪಿಯ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಸೋನಿಯ IMX471 ಸೆನ್ಸಾರ್ ಪಡೆದಿದೆ. 4K ವಿಡಿಯೊ ಬೆಂಬಲಿಸುತ್ತದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 3,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಹೊಂದಿದ್ದು, ಇದರೊಂದಿಗೆ ವ್ರಾಪ್‌ ಚಾರ್ಜ್‌ 30T ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಒಳಗೊಂಡಿದೆ. ಈ ಚಾರ್ಜರ್ ನೆರವಿನಿಂದ ಕೇವಲ 30 ನಿಮಿಷದಲ್ಲಿ ಸ್ಮಾರ್ಟ್‌ಫೋನ್ 0 ಯಿಂದ 70 ಪರ್ಸೆಂಟ್ ವರೆಗೂ ಚಾರ್ಜ್ ಪಡೆದುಕೊಳ್ಳುತ್ತದೆ. ಬ್ಯಾಟರಿ ಬ್ಯಾಕ್‌ಅಪ್‌ ಸಹ ಅತ್ಯುತ್ತಮವಾಗಿ ನೀಡಬಲ್ಲದು.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ವರ್ಕ್‌ ಲೈಫ್ ಬ್ಯಾಲೆನ್ಸ್‌ ಹೆಸರಿನ ಸಾಫ್ಟ್‌ವೇರ್ ಫೀಚರ್‌ ಹೊಂದಿದ್ದು, ಸ್ಮಾರ್ಟ್‌ ಎಸ್‌ಎಮ್‌ಎಸ್ ಫೀಚರ್ ಮತ್ತು ಒನ್‌ಪ್ಲಸ್‌ ಮೆಸೆಜ್ ಆಪ್‌ಗಳನ್ನು ಒಳಗೊಂಡಿದೆ. ಹಾಗೆಯೇ ಒನ್‌ಪ್ಲಸ್‌ ಕ್ಲೌಡ್‌ ಗ್ಯಾಲರಿ ಸ್ಟೋರೇಜ್ ಆಯ್ಕೆಯನ್ನು ಒದಗಿಸಿಲಾಗಿದ್ದು, ಇದರೊಂದಿಗೆ ಬ್ಲೂಟೂತ್, ವೈಫೈ, ಎಲೆಕ್ಟ್ರಿಕ್ ಕಂಪಾಸ್, ಆಂಬಿಯಂಟ್ ಲೈಟ್‌, ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಕೋರ್ ಸೆನ್ಸಾರ್‌ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
OnePlus 7T go on sale on Amazon India today at 12:00 PM.available on Amazon India and the OnePlus website. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X