Home
ಸುದ್ದಿಜಾಲ

ಪಾಪ್‌ಅಪ್‌ ಕ್ಯಾಮೆರಾ ಟ್ರೆಂಡ್‌ ಇನ್ನು ಮುಗಿದಂತೆ!.ಇನ್ಮೇಲೆ ಪಂಚ್‌ಹೋಲ್‌ ಕ್ಯಾಮೆರಾ!

ಸ್ಮಾರ್ಟ್‌ಫೋನ್‌ಗಳ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಇತ್ತೀಚಿಗೆ ಭಾರಿ ಟ್ರೆಂಡ್‌ ಹುಟ್ಟುಹಾಕಿದ್ದು, ಬಹುತೇಕ ನೂತನ ಸ್ಮಾರ್ಟ್‌ಫೋನ್‌ಗಳು ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿವೆ. ಪಾಪ್‌ಅಪ್‌ ಮಾದರಿಯ ಕ್ಯಾಮೆರಾ ಫೀಚರ್‌ ಗ್ರಾಹಕರನ್ನುಆಕರ್ಷಿಸಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು. ಆದರೆ ಇದೀಗ ಪಾಪ್‌ಅಪ್‌ ಕ್ಯಾಮೆರಾ ಟ್ರೆಂಡ್‌ ಯುಗಾಂತ್ಯವಾಗುವ ಹಂತಕ್ಕೆ ಬಂದು ನಿಂತಿದೆ.

ಕ್ಯಾಮೆರಾ ಫೀಚರ್

ಹೌದು, ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಫೀಚರ್ ಅತೀ ಪ್ರಮುಖವಾಗಿದ್ದು, ಅದರಲ್ಲಿಯೂ ಸೆಲ್ಫಿ ಕ್ಯಾಮೆರಾಕ್ಕೆ ವಿಶೇಷ ಆದ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಕಂಪನಿಗಳು ಇತ್ತೀಚಿಗೆ ಕೆಲವು ಫೋನ್‌ಗಳಿಲ್ಲಿ ಪಾಪಾಅಪ್‌ ಸೆಲ್ಫಿ ಕ್ಯಾಮೆರಾಕ್ಕೆ ಅಧಿಕ ಒತ್ತು ನೀಡಿವೆ. ಆದರೆ ಈ ಪಾಪ್‌ಅಪ್‌ ಕ್ಯಾಮೆರಾ ಫೀಚರ್‌ ಇದೀಗ ಹಿಂದೆಸರಿಯುವ ಲಕ್ಷಣಗಳು ಕಂಡುಬರುತ್ತಿದ್ದು, ಈಗೇನಿದ್ದರೂ ಪಂಚ್‌ಹೋಲ್ ಕ್ಯಾಮೆರಾ ಹೊಸ ಅಲೆ ಎಬ್ಬಿಸುವ ಸೂಚನೆ ನೀಡಿವೆ.

ಪಾಪ್‌ಅಪ್‌ ಸೆಲ್ಫಿ

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾಗಳು ಹೆಚ್ಚು ರಿಸ್ಕ್‌ ಆಗಿದ್ದು, ಬಿದ್ದರೇ ಹಾಳಾಗುವ ಸಾಧ್ಯತೆಗಳು ಅಧಿಕ. ಅಲ್ಲದೇ ಪಾಪ್‌ಅಪ್‌ ಕ್ಯಾಮೆರಾಗಳ ಡಿಸೈನ್‌ ಸ್ಮಾರ್ಟ್‌ಫೋನಿನ ಲುಕ್‌ಗೆ ಸೂಕ್ತವೆನಿಸುವುದಿಲ್ಲ ಎನ್ನುವ ಅಭಿಪ್ರಾಯಗಳನ್ನು ಕೆಲವು ಚೀನಾ ಮೊಬೈಲ್ ಕಂಪನಿಗಳು ಹೊಂದಿದ್ದು, ಅದಕ್ಕೆ ಪರ್ಯಾಯವಾಗಿ ಪಂಚ್‌ಹೋಲ್‌ ಕ್ಯಾಮೆರಾ ಉತ್ತಮ ಎನ್ನುವ ನಿಲುವನ್ನು ಹೊಂದಿವೆ. ಹಾಗಾದರೇ ಪಂಚ್‌ಹೋಲ್ ಕ್ಯಾಮೆರಾ ಒಳಗೊಂಡು ಲಾಂಚ್ ಆಗಲಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ 8 ಪ್ರೊ

ಒನ್‌ಪ್ಲಸ್‌ 8 ಪ್ರೊ

ಒನ್‌ಪ್ಲಸ್‌ ಸಂಸ್ಥೆಯು ತನ್ನ 'ಒನ್‌ಪ್ಲಸ್‌ 7 ಪ್ರೊ' ಯಶಸ್ಸಿನ ನಂತರ ಕಂಪನಿಯು ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಪಂಚ್‌ಹೋಲ್‌ ಡಿಸ್‌ಪ್ಲೇ ಕ್ಯಾಮೆರಾ ಫೀಚರ್ ಹೊಂದಿರಲಿದೆ. ಇದರೊಂದಿಗೆ ಹೈ ಎಂಡ್‌ ಫೀಚರ್ಸ್‌ಗಳೊಂದಿಗೆ ಮೇ,2020ಗೆ ಬಿಡುಗಡೆ ಆಗುವ ಸಾಧ್ಯತೆಗಳಿವೆ.

ರೆಡ್ಮಿ ಕೆ30 ಪ್ರೊ

ರೆಡ್ಮಿ ಕೆ30 ಪ್ರೊ

ಶಿಯೋಮಿ ಸಂಸ್ಥೆಯು 'ರೆಡ್ಮಿ ಕೆ30 ಪ್ರೊ' ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 10ರಂದು ಲಾಂಚ್ ಆಗುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್‌ಫೋನ್‌ ಪಂಚ್‌ಹೋಲ್ ಮಾದರಿಯ ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಒಳಗೊಂಡಿರಲಿದೆ. ಗ್ಯಾಲ್ಯಾಕ್ಸಿ ಎಸ್‌10+ ನಂತೆ ಇರಲಿದೆ ಎನ್ನಲಾಗಿದೆ.

ರಿಯಲ್‌ ಮಿ X50 5G

ರಿಯಲ್‌ ಮಿ X50 5G

ರಿಯಲ್‌ ಮಿ ಸಂಸ್ಥೆಯು ಇತ್ತೀಚಿಗೆ ರಿಯಲ್‌ ಮಿ X2 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಸದ್ದಿನಲ್ಲಿದೆ. ಈಗ 'ರಿಯಲ್‌ ಮಿ X50 5G' ಹೆಸರಿನ ಮತ್ತೊಂದು ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತಯಾರಾಗಿದೆ. ಬರಲಿರುವ ಹೊಸ ಫೋನ್ ಡ್ಯುಯಲ್‌ ಪಂಚ್‌ಹೋಲ್‌ ಕ್ಯಾಮೆರಾ ಹೊಂದಿರಲಿದ್ದು, ಈ ಮೂಲಕ 'ರಿಯಲ್‌ ಮಿ' ಮೊದಲ ಬಾರಿ ಪಂಚ್‌ಹೋಲ್ ಕ್ಯಾಮೆರಾ ಪರಿಚಯಿಸಲಿದೆ.

ವಿವೋ X30

ವಿವೋ X30

ವಿವೋ ಸಂಸ್ಥೆಯು ಸಹ 'ವಿವೋ X30' ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ರಿಲೀಸ್‌ ಮಾಡಲಿದ್ದು, ಈ ಸ್ಮಾರ್ಟ್‌ಫೋನೂ ಪಂಚ್‌ಹೋಲ್ ಕ್ಯಾಮೆರಾ ಸೌಲಭ್ಯವನ್ನು ಪಡೆದಿರಲಿದೆ. ಈಗಾಗಲೇ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾಗಳಿಂದ ಗುರುತಿಸಿಕೊಂಡಿರುವ ವಿವೋ ಕಂಪನಿಯು ಇನ್ನು ವಿವೋ X30 ಮೂಲಕ ಪಂಚ್‌ಹೋಲ್ ಕ್ಯಾಮೆರಾಗೆ ಹೊಸ ಅಧ್ಯಾಯ ಬರೆಯಲಿದೆ.

Best Mobiles in India

English summary
Chinese smartphone makers are quickly turning to hole-punch displays for their next flagships. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+