Home
ಸುದ್ದಿಜಾಲ

OnePlus 8: ಒನ್‌ಪ್ಲಸ್‌ 8 ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್ ಲಾಂಚ್!

ಚೀನಾ ಮೂಲದ ಒನ್‌ಪ್ಲಸ್‌ ಸಂಸ್ಥೆಯ ತನ್ನ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಸರಣಿ ಮಾ.14ರಂದು (ನೆನ್ನೆ) ಬಿಡುಗಡೆ ಆಗಿದೆ. ಈ ಸರಣಿಯು ನಿರೀಕ್ಷೆಯಂತೆ ಒನ್‌ಪ್ಲಸ್‌ 8 ಮತ್ತು ಒನ್‌ಪ್ಲಸ್‌ 8 ಪ್ರೊ ಎರಡು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ 48ಎಂಪಿ ಸೆನ್ಸಾರ್‌, ಬ್ಯಾಟರಿ, ವೇಗದ ಪ್ರೊಸೆಸರ್‌ಗಳೊಂದಿಗೆ ಹಲವು ಅಪ್‌ಡೇಟ್‌ ಫೀಚರ್ಸ್‌ಗಳಿಂದ ನೆಕ್ಸ್ಟ್ ಜನರೇಶನ್ ಫೋನ್ ಎಂದು ಬಿಂಬಿತವಾಗಿದೆ.

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್

ಹೌದು, ಕೊರೊನಾ ವೈರಸ್‌ ಎಫೆಕ್ಟ್‌ನಿಂದಾಗಿ ಒನ್‌ಪ್ಲಸ್‌ ಸಂಸ್ಥೆಯು ಆನ್‌ಲೈನ್‌ ಲೈವ್ ಕಾರ್ಯಕ್ರಮದ ಮೂಲಕ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಈ ಫೋನ್‌ ಒನ್‌ಪ್ಲಸ್‌ 7 ಸರಣಿಗಿಂತ ಸಾಕಷ್ಟು ಅಪ್‌ಡೇಟ್ ಆಗಿದ್ದು, ಸೂಪರ್ AMOLED ಡಿಸ್‌ಪ್ಲೇ, ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌, ಬಿಗ್ ಬ್ಯಾಟರಿ, ಆಂಡ್ರಾಯ್ಡ್ 10 ಓಎಸ್‌ ಸಫೋರ್ಟ್‌ ಸೌಲಭ್ಯಗಳನ್ನು ಒಳಗೊಂಡಿದೆ. ಬ್ಲೂ, ಬ್ಲ್ಯಾಕ್, ಗ್ರೀನ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ. ಹಾಗಾದರೆ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 865 SoC ಪ್ರೊಸೆಸರ್ ಹೊಂದಿದ್ದು, ಜೊತೆಗೆ Adreno 650 GPU ಹೊಂದಿದೆ. ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಇದೆ. ಹಾಗೆಯೇ ಈ ಫೋನ್ 8GB/12GB RAM ಮತ್ತು 128GB/256GB ಸ್ಟೋರೇಜ್‌ನ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಹಾಗೂ ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಆಕರ್ಷಕ ಎಡಿಟಿಂಗ್ ಫೀಚರ್ಸ್‌ಗಳು ಇವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ 4,300mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಜಿಪಿಎಸ್, ಬ್ಲೂಟೂತ್, ವೈಫೈ, IP68 ವಾಟರ್‌ಪ್ರೂಫ್ ರಚನೆ, ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಸೌಂಡ್‌ ಸೌಲಭ್ಯ ಸೇರಿದಂದೆ ಇತ್ತೀಚಿಗಿನ ಅಗತ್ಯ ಸೌಲಭ್ಯಗಳು ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, 8GB/12GB RAM ಸ್ಟೋರೇಜ್‌ನ ಬೇಸ್‌ ವೇರಿಯಂಟ್‌ ಬೆಲೆಯು $699 ಆಗಿದೆ(ಭಾರತದಲ್ಲಿ ಅಂದಾಜು 53,090ರೂ). ಹಾಗೆಯೇ ಹೈ ವೇರಿಯಂಟ್ 12GB RAM + 256GB ಬೆಲೆಯು $799ಆಗಿದೆ(ಭಾರತದಲ್ಲಿ ಅಂದಾಜು 60,690ರೂ). ಸಂಸ್ಥೆಯು ಇದೇ ಏಪ್ರಿಲ್ 29ರಂದು ಯುಎಸ್‌ನಲ್ಲಿ ಫಸ್ಟ್ ಸೇಲ್ ಆರಂಭಿಸಲಿದೆ. ಆದರೆ ಭಾರತದಲ್ಲಿ ಯಾವಾಗ ಸೇಲ್ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

Best Mobiles in India

English summary
The OnePlus 8 is available at a starting price of $699 for its 8GB RAM And 128GB internal storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+