ಇದೇ ಏಪ್ರಿಲ್ 15ಕ್ಕೆ 'ಒನ್‌ಪ್ಲಸ್ 8' ಸ್ಮಾರ್ಟ್‌ಫೋನ್ ಲಾಂಚ್ ಪಕ್ಕಾ!
ಬಹುಬೇಗನೆ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನ ಪಡೆದ ಒನ್‌ಪ್ಲಸ್ ಮೊಬೈಲ್ ಸಂಸ್ಥೆಯು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಸಂಸ್ಥೆಯು ಬಿಡುಗಡೆ ಮಾಡಿರುವ ಒನ್‌ಪ್ಲಸ್ 6 ಸರಣಿ ಮತ್ತು ಒನ್‌ಪ್ಲಸ್ 7 ಸರಣಿ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಭಾರಿ ಸದ್ದು ಮಾಡಿವೆ. ಆದ್ರೆ ಬಹುತೇಕ ಗ್ರಾಹಕರು ಪ್ರಸ್ತುತ ಒನ್‌ಪ್ಲಸ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಎದುರು ನೋಡುತ್ತಿದ್ದಾರೆ ಅನ್ನೊದು ಪಕ್ಕಾ ಆಗಿದೆ.

ಹೌದು, ಒನ್‌ಪ್ಲಸ್ 8 ಸರಣಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಇದೀಗ ಸಿಹಿಸುದ್ದಿ. ಅದೆನೆಂದರೇ ಒನ್‌ಪ್ಲಸ್ 8 ಸರಣಿ ಸ್ಮಾರ್ಟ್‌ಫೋನ್ ಬಿಡುಗಡೆಗೆ ಅಧಿಕೃತ ದಿನಾಂಕ ಕನ್ಫರ್ಮ್ ಆಗಿದ್ದು, ಇದೇ ಏಪ್ರಿಲ್ 15 ರಂದು ಮಾರುಕಟ್ಟೆಗೆ ಲಾಂಚ್ ಆಗಲಿದೆ. ನಿರೀಕ್ಷೆಯಂತೆ ಈ ಸರಣಿಯು ಸಹ ಒಟ್ಟು ಮೂರು ಮಾದರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತವಾಗಿದೆ. ಅದಾಗ್ಯೂ ಒನ್‌ಪ್ಲಸ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.ಮುಂದೆ ಓದಿರಿ.

ಒನ್‌ಪ್ಲಸ್ 8 ಲೈಟ್
ಒನ್‌ಪ್ಲಸ್ 8 ಸರಣಿಯಲ್ಲಿ ಒನ್‌ಪ್ಲಸ್ 8 ಲೈಟ್ ಸಹ ಒಂದಾಗಿರಲಿದೆ. ಇನ್ನು ಈ ಫೋನ್ ಬಹುತೇಕ ಒನ್‌ಪ್ಲಸ್ 7T ಫೋನಿನಂತೆ ಇರಲಿದೆ ಎನ್ನಲಾಗಿದೆ. 5G ನೆಟವರ್ಕ್ ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಹಾಗೂ ಈ ಫೋನ್ 1000 Dimensity ಸಾಮರ್ಥ್ಯದ ಮೀಡಿಯಾ ಟೆಕ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. 6.4 ಇಂಚಿನ ಡಿಸ್ಪ್ಲೇ ಹೊಂದಿರಲಿದ್ದು, ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿರುತ್ತದೆ. ಮುಖ್ಯ ಕ್ಯಾಮೆರಾವು 48ಎಂಪಿ ಇರುವ ಸಾಧ್ಯತೆಗಳಿವೆ. ಇನ್ನು ಇದೊಂದು ಅತ್ಯುತ್ತಮ ಫ್ಲ್ಯಾಗ್‌ಶಿಫ್ ಫೋನ್ ಎಂಬ ಹೆಗ್ಗಳಿಕೆ ಗಳಿಸಲಿದೆಯೇ ಎನ್ನುವುದು ಕಾದು ನೋಡಬೇಕಿದೆ.

ಒನ್‌ಪ್ಲಸ್ 8
ಒನ್‌ಪ್ಲಸ್ 8 ಫೋನ್ ಸಾಕಷ್ಟು ಹೊಸ ಅಪ್‌ಡೇಟ್ ವರ್ಷನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಒಳಗೊಂಡಿರಲಿದ್ದು, ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 60ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದ್ದು, ಹೆಚ್ಚಿನ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡುವ ಲಕ್ಷಣಗಳಿವೆ. AMOLED ಮಾದರಿಯ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇ ರೀಫ್ರೇಶ ರೇಟ್ 90Hz ಆಗಿರಲಿದೆ.

ಒನ್‌ಪ್ಲಸ್ 8 ಪ್ರೊ
ಇಲ್ಲಿಯ ವರೆಗಿನ ಎಲ್ಲ ಒನ್‌ಪ್ಲಸ್ ಫೋನ್‌ಗಳಿಗಿಂತ ಭಾರಿ ವಿಶೇಷತೆಗಳೊಂದಿಗೆ ಹೊಸ ಒನ್‌ಪ್ಲಸ್ 8 ಪ್ರೊ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ 6.7 ಇಂಚಿನ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇ ರೀಫ್ರೇಸ್ ರೇಟ್ 120Hz ಆಗಿರಲಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3D ಫೇಶಿಯಲ್ ರಿಕಗ್ನೇಸ್ ಆಯ್ಕೆ, ToF, ಕರ್ವ್ ಎಡ್ಜ್ ರಚನೆ ಇರಲಿವೆ. ಇನ್ನು ಈ ಫೋನಿನ ಮೇನ್ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದ್ದು, 4500mAh ಸಾಮರ್ಥ್ಯ ಬ್ಯಾಟರಿ ನಿರೀಕ್ಷಿಸಲಾಗುತ್ತಿದೆ.


Click it and Unblock the Notifications








