Home
ಸುದ್ದಿಜಾಲ

ಒನ್‌ಪ್ಲಸ್‌ 8 ಪ್ರೊ ಫೀಚರ್ಸ್‌ ಲೀಕ್!..ಬೆಲೆ ಎಷ್ಟು ಅಂತೀರಾ?

ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ ಕಂಪನಿಗಳಲ್ಲಿ ಒಂದಾಗಿರುವ ಒನ್‌ಪ್ಲಸ್‌ ಇತ್ತೀಚಿಗೆ ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಭಾರಿ ಮಾಡಿದೆ. ಅದರ ಬೆನ್ನಲೇ ಇದೀಗ ಕಂಪನಿಯು ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೊಬೈಲ್‌ ವಲಯದಲ್ಲಿ ಈಗಾಗಲೆ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಒನ್‌ಪ್ಲಸ್‌ ಸಂಸ್ಥೆ

ಹೌದು, ಒನ್‌ಪ್ಲಸ್‌ ಸಂಸ್ಥೆಯು ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ ಮಾಡಿವುದು ಖಚಿತ. ಈ ಸರಣಿಯು ಒನ್‌ಪ್ಲಸ್‌ 8, ಒನ್‌ಪ್ಲಸ್‌ 8 ಲೈಟ್‌ ಹಾಗೂ ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್‌ ಮಾದರಿಗಳನ್ನು ಹೊಂದಿರಲಿದೆ. ಅವುಗಳಲ್ಲಿ ಒನ್‌ಪ್ಲಸ್‌ 8 ಪ್ರೊ ಸಂಸ್ಥೆಯ ಈ ವರ್ಷದ ಟಾಪ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಳ್ಳಲಿದೆ. ಇದೀಗ ಒನ್‌ಪ್ಲಸ್‌ 8 ಪ್ರೊ ಫೋನಿನ ಫೀಚರ್ಸ್‌ ಹೇಗಿವೆ ಎನ್ನುವುದು ಮಾಹಿತಿ ಲೀಕ್ ಆಗಿವೆ. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 8 ಪ್ರೊ

ಒನ್‌ಪ್ಲಸ್‌ 8 ಪ್ರೊ

ಬರಲಿರುವ ಹೊಸ ಒನ್‌ಪ್ಲಸ್‌ 8 ಪ್ರೊ ಫೋನ್ 6.7 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇ ರೀಫ್ರೇಸ್ ರೇಟ್ 120Hz ಆಗಿರಲಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3D ಫೇಶಿಯಲ್ ರಿಕಗ್ನೇಸ್‌ ಆಯ್ಕೆ, ToF, ಕರ್ವ್ ಎಡ್ಜ್ ರಚನೆ ಇರಲಿವೆ. ಇನ್ನು ಈ ಫೋನಿನ ಮೇನ್ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದ್ದು, 4500mAh ಸಾಮರ್ಥ್ಯ ಬ್ಯಾಟರಿ ಹೊಂದಿರಲಿದೆ.

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8 ಫೋನ್ ಸಾಕಷ್ಟು ಹೊಸ ಅಪ್‌ಡೇಟ್ ವರ್ಷನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್‌ ಒಳಗೊಂಡಿರಲಿದ್ದು, ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 60ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದ್ದು, ಹೆಚ್ಚಿನ ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡುವ ಲಕ್ಷಣಗಳಿವೆ. AMOLED ಮಾದರಿಯ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇ ರೀಫ್ರೇಶ ರೇಟ್ 90Hz ಆಗಿರಲಿದೆ.

ಒನ್‌ಪ್ಲಸ್‌ 8 ಲೈಟ್

ಒನ್‌ಪ್ಲಸ್‌ 8 ಲೈಟ್

ಒನ್‌ಪ್ಲಸ್‌ 8 ಲೈಟ್ ಫೋನ್ ಬಹುತೇಕ ಒನ್‌ಪ್ಲಸ್‌ 7T ಫೋನಿನಂತೆ ಇರಲಿದೆ ಎನ್ನಲಾಗಿದೆ. 5G ನೆಟವರ್ಕ್ ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಹಾಗೂ ಈ ಫೋನ್ 1000 Dimensity ಸಾಮರ್ಥ್ಯದ ಮೀಡಿಯಾ ಟೆಕ್ ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. 6.4 ಇಂಚಿನ ಡಿಸ್ಪ್ಲೇ ಹೊಂದಿರಲಿದ್ದು, ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿರುತ್ತದೆ. ಮುಖ್ಯ ಕ್ಯಾಮೆರಾವು 48ಎಂಪಿ ಇರುವ ಸಾಧ್ಯತೆಗಳಿವೆ ಎನ್ನುತ್ತಿವೆ ಲೀಕ್ ಮಾಹಿತಿಗಳು.

ಬೆಲೆ ಎಷ್ಟು?

ಬೆಲೆ ಎಷ್ಟು?

ಒನ್‌ಪ್ಲಸ್‌ 8 ಫೋನ್‌ CNY 3,699(ಭಾರತದಲ್ಲಿ ಅಂದಾಜು 37,500ರೂ), ಒನ್‌ಪ್ಲಸ್‌ 8 ಲೈಟ್ ಫೋನ್ ಬೆಲೆಯು CNY 2,999 (ಭಾರತದಲ್ಲಿ ಅಂದಾಜು 30,400ರೂ) ಹಾಗೂ ಒನ್‌ಪ್ಲಸ್‌ 8 ಪ್ರೊ ಫೋನ್ ಬೆಲೆಯು CNY 4,999 (ಭಾರತದಲ್ಲಿ ಅಂದಾಜು 51,000ರೂ) ಆಗಿರಲಿವೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
OnePlus is aiming to launch its 2020 flagship smartphones sometime in the second quarter. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+