ಇಂದು ಒನ್‌ಪ್ಲಸ್ 8 ಪ್ರೊ ಫ್ಲ್ಯಾಗ್‌ಶಿಪ್ ಫೋನಿನ ಫ್ಲ್ಯಾಶ್ ಸೇಲ್!
ಒನ್‌ಪ್ಲಸ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ 'ಒನ್‌ಪ್ಲಸ್ 8 ಪ್ರೊ' ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಈಗಾಗಲೇ ಫ್ಲ್ಯಾಶ್ ಸೇಲ್ ಕಂಡಿದೆ. ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಇಂದು ಮತ್ತೆ (ಜುಲೈ 2) ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಅಧಿಕೃತ ಒನ್‌ಪ್ಲಸ್ ವೆಬ್‌ಸೈಟ್ ತಾಣದಲ್ಲಿ ಮಧ್ಯಾಹ್ನ 12ರಂದು ಸೇಲ್ ಆರಂಭಿಸಲಿದೆ. ಇನ್ನು ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 54,999ರೂ.ಗಳಾಗಿದೆ.

ಒನ್‌ಪ್ಲಸ್ 8 ಪ್ರೊ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಇಂದು ಮತ್ತೆ ಫ್ಲ್ಯಾಶ್ ನಡೆಯಲಿದೆ. ಇನ್ನು ಕ್ವಾಡ್ ಕ್ಯಾಮೆರಾ ಸೆಟ್ಅಪ್, ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್, 4,510mAh ಬ್ಯಾಟರಿ ಬ್ಯಾಕ್‌ಅಪ್ ಫೀಚರ್ಸ್‌ಗಳು ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಬೇಸ್ ವೇರಿಯಂಟ್ 8GB + 128GB ಸ್ಟೋರೇಜ್ ಪಡೆದಿದೆ. ಉಳಿದಂತೆ ಯಾವೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ಮುಂದೆ ತಿಳಿಯೋಣ.

ಒನ್‌ಪ್ಲಸ್ 8 ಪ್ರೊ- ಡಿಸ್‌ಪ್ಲೇ
ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್ ಜೊತೆಗೆ QHD+ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇನ್ನು ಈ ಫೋನ್ 120Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ.

ಒನ್‌ಪ್ಲಸ್ 8 ಪ್ರೊ- ಪ್ರೊಸೆಸರ್
ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 650 GPU ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್ ಆಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.

ಒನ್‌ಪ್ಲಸ್ 8 ಪ್ರೊ- ಕ್ಯಾಮೆರಾ
ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾ ಎರಡು 48ಎಂಪಿ ಸೆನ್ಸಾರ್ನಲ್ಲಿವೆ. ಹಾಗೆಯೇ ಇನ್ನುಳಿದೆರಡು ಕ್ಯಾಮೆರಾಗಳು 8ಎಂಪಿ ಮತ್ತು 5ಎಂಪಿ ಸೆನ್ಸಾರ್ ಪಡೆದಿವೆ. ಈ ಫೋನ್ ಸಹ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಪಡೆದಿದೆ.

ಒನ್‌ಪ್ಲಸ್ 8 ಪ್ರೊ- ಬ್ಯಾಟರಿ
ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ 4,510mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಈ ಫೋನ್ ಸಹ 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಎಷ್ಟು?
ಒನ್‌ಪ್ಲಸ್ 8 ಪ್ರೊ 8GB+128GB ವೇರಿಯಂಟ್‌ನ ಫೋನಿನ ಆರಂಭಿಕ ಬೆಲೆಯು 54,999ರೂ. ಆಗಿದ್ದು, 12GB+256GB ವೇರಿಯಂಟ್ ಬೆಲೆಯು 59,999ರೂ. ಆಗಿದೆ. ಇನ್ನು ಈ ಫೋನ್ ಇಂದು ಅಮೆಜಾನ್ ಹಾಗೂ ಒನ್‌ಪ್ಲಸ್ ತಾಣಗಳಲ್ಲಿ ಸೇಲ್ ಆರಂಭಿಸಲಿದೆ.


Click it and Unblock the Notifications








