OnePlus 8 ಸರಣಿ ಬಿಡುಗಡೆಗೆ ಸಜ್ಜು!..ಫೀಚರ್ಸ್‌ ಏನು?..ಬೆಲೆ ಎಷ್ಟು?

|

ಒನ್‌ಪ್ಲಸ್‌ ಮೊಬೈಲ್ ಸಂಸ್ಥೆಯು ಸದ್ಯ ಗ್ರಾಹಕರ ಅಚ್ಚುಮೆಚ್ಚಿನ ಮೊಬೈಲ್ ಬ್ರ್ಯಾಂಡ್‌ಗಳಲ್ಲೊಂದಾಗಿದ್ದು, ಕಂಫನಿಯು ಅತೀ ಕಡಿಮೆ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಭದ್ರಸ್ಥಾನ ಕಂಡುಕೊಂಡಿದೆ. ಕಂಪನಿಯ ಇತ್ತೀಚಿನ 'ಒನ್‌ಪ್ಲಸ್‌ 7' ಫೋನ್ ಸರಣಿಯು ಭಾರಿ ಸದ್ದು ಮಾಡಿದ್ದು, ಕಂಪನಿಗೆ ಮತ್ತಷ್ಟು ಹೆಸರನ್ನು ತಂದುಕೊಟ್ಟಿದೆ. ಇದರ ಬೆನ್ನಲ್ಲೇ ಕಂಪನಿಯು ಇದೀಗ ಒನ್‌ಪ್ಲಸ್‌ 8 ಸರಣಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಒನ್‌ಪ್ಲಸ್‌ 8

ಹೌದು, ಕ್ಯಾಮೆರಾ, ಬ್ಯಾಟರಿ, ಡಿಸೈನ್, ವೇಗ ಇಂತಹ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರ ಮನಗೆದ್ದಿರುವ ಒನ್‌ಪ್ಲಸ್‌ ಸಂಸ್ಥೆಯು ಈಗ ಒನ್‌ಪ್ಲಸ್‌ 8 ಸರಣಿ ಲಾಂಚ್‌ಗೆ ತಯಾರಾಗುತ್ತಿದೆ. ಇನ್ನು ಈ ಸರಣಿಯು ಒನ್‌ಪ್ಲಸ್ 8 ಲೈಟ್, ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್‌ ಮಾದರಿಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಈ ಫೋನ್‌ಗಳು ಭಿನ್ನ ಫೀಚರ್ಸ್‌ಗಳು ಮತ್ತು ಭಿನ್ನ ಪ್ರೈಸ್‌ಟ್ಯಾಗ್‌ ಹೊಂದಿರಲಿವೆ.

ಸ್ಮಾರ್ಟ್‌ಫೋನ್‌ಗಳು

ಒನ್‌ಪ್ಲಸ್‌ 8 ಸರಣಿಯ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಬಿಡುಗಡೆ ಆಗುವುದು ಖಚಿತವಾಗಿದ್ದು, ಬರಲಿರುವ ಫೋನ್‌ಗಳ ಬಗ್ಗೆ ನಿರೀಕ್ಷೆಗಳು ಇಮ್ಮಡಿ ಆಗುತ್ತಿವೆ. ಪ್ರಸಕ್ತ ವರ್ಷ ನೀವೆನಾದರು ಹೊಸ ಒನ್‌ಪ್ಲಸ್‌ 8 ಸರಣಿಯ ಫೋನ್‌ ಖರೀದಿಸುವ ಆಲೋಚನೆಯಲ್ಲಿದ್ದರೇ, ಆ ಬಗ್ಗೆ ಕೆಲವು ಸಂಗತಿಗಳನ್ನು ನೀವು ತಿಳಿಲೇಬೇಕು. ಅದಕ್ಕಾಗಿ ಇಂದಿನ ಈ ಲೇಖನದಲ್ಲಿ ಒನ್‌ಪ್ಲಸ್‌ 8 ಸರಣಿ ಫೋನ್‌ ಫೀಚರ್ಸ್‌ ಕುರಿತಾಗಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ

ಒನ್‌ಪ್ಲಸ್‌ 8 ಲೈಟ್‌

ಒನ್‌ಪ್ಲಸ್‌ 8 ಲೈಟ್‌

ಒನ್‌ಪ್ಲಸ್‌ 8 ಸರಣಿಯಲ್ಲಿಲ್ಲಿ ಒನ್‌ಪ್ಲಸ್‌ 8 ಲೈಟ್ ಸಹ ಒಂದಾಗಿರಲಿದೆ. ಇನ್ನು ಈ ಫೋನ್ ಬಹುತೇಕ ಒನ್‌ಪ್ಲಸ್‌ 7T ಫೋನಿನಂತೆ ಇರಲಿದೆ ಎನ್ನಲಾಗಿದೆ. 5G ನೆಟವರ್ಕ್ ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಹಾಗೂ ಈ ಫೋನ್ 1000 Dimensity ಸಾಮರ್ಥ್ಯದ ಮೀಡಿಯಾ ಟೆಕ್ ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. 6.4 ಇಂಚಿನ ಡಿಸ್ಪ್ಲೇ ಹೊಂದಿರಲಿದ್ದು, ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿರುತ್ತದೆ. ಮುಖ್ಯ ಕ್ಯಾಮೆರಾವು 48ಎಂಪಿ ಇರುವ ಸಾಧ್ಯತೆಗಳಿವೆ. ಇನ್ನು ಇದೊಂದು ಅತ್ಯುತ್ತಮ ಫ್ಲ್ಯಾಗ್‌ಶಿಫ್ ಫೋನ್ ಎಂಬ ಹೆಗ್ಗಳಿಕೆ ಗಳಿಸಲಿದೆಯೇ ಎನ್ನುವುದು ಕಾದು ನೋಡಬೇಕಿದೆ.

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8 ಫೋನ್ ಸಾಕಷ್ಟು ಹೊಸ ಅಪ್‌ಡೇಟ್ ವರ್ಷನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್‌ ಒಳಗೊಂಡಿರಲಿದ್ದು, ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 60ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದ್ದು, ಹೆಚ್ಚಿನ ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡುವ ಲಕ್ಷಣಗಳಿವೆ. AMOLED ಮಾದರಿಯ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇ ರೀಫ್ರೇಶ ರೇಟ್ 90Hz ಆಗಿರಲಿದೆ.

ಒನ್‌ಪ್ಲಸ್‌ 8 ಪ್ರೊ

ಒನ್‌ಪ್ಲಸ್‌ 8 ಪ್ರೊ

ಇಲ್ಲಿಯ ವರೆಗಿನ ಎಲ್ಲ ಒನ್‌ಪ್ಲಸ್‌ ಫೋನ್‌ಗಳಿಗಿಂತ ಭಾರಿ ವಿಶೇಷತೆಗಳೊಂದಿಗೆ ಹೊಸ ಒನ್‌ಪ್ಲಸ್‌ 8 ಪ್ರೊ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ 6.7 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇ ರೀಫ್ರೇಸ್ ರೇಟ್ 120Hz ಆಗಿರಲಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3D ಫೇಶಿಯಲ್ ರಿಕಗ್ನೇಸ್‌ ಆಯ್ಕೆ, ToF, ಕರ್ವ್ ಎಡ್ಜ್ ರಚನೆ ಇರಲಿವೆ. ಇನ್ನು ಈ ಫೋನಿನ ಮೇನ್ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದ್ದು, 4500mAh ಸಾಮರ್ಥ್ಯ ಬ್ಯಾಟರಿ ನಿರೀಕ್ಷಿಸಲಾಗುತ್ತಿದೆ.

Best Mobiles in India

English summary
Here is a brief of everything we know about the upcoming OnePlus 8 series. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X