Home
ಸುದ್ದಿಜಾಲ

ಭಾರತದಲ್ಲಿ 'ಒನ್‌ಪ್ಲಸ್‌ 8' ಮತ್ತು 'ಒನ್‌ಪ್ಲಸ್‌ 8 ಪ್ರೊ' ಫೋನ್‌ಗಳ ಬೆಲೆ ಘೋಷಣೆ!

ಇತ್ತೀಚಿಗಷ್ಟೆ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಬಹುನಿರೀಕ್ಷಿತ 'ಒನ್‌ಪ್ಲಸ್‌ 8' ಸ್ಮಾರ್ಟ್‌ಫೋನ್ ಸರಣಿ ಇದೀಗ ಭಾರತೀಯ ಮಾರುಕಟ್ಟೆಗೆ ಅನಾವರಣ ಆಗಿದೆ. ಈ ಸರಣಿಯು ಹೈ ಎಂಡ್ ಕ್ಯಾಮೆರಾ ಸೆನ್ಸಾರ್, ಅಧಿಕ ಬ್ಯಾಟರಿ, ವೇಗದ ಪ್ರೊಸೆಸರ್‌ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಸಂಸ್ಥೆಯು ಈಗ ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ದೇಶಿಯ ಮಾರುಕಟ್ಟೆಯ ಬೆಲೆಯನ್ನು ರಿವೀಲ್ ಮಾಡಿದೆ.

ಒನ್‌ಪ್ಲಸ್‌ ಸಂಸ್ಥೆ

ಹೌದು, ಚೀನಾ ಮೂಲದ ಒನ್‌ಪ್ಲಸ್‌ ಸಂಸ್ಥೆಯು ಅಧಿಕೃತವಾಗಿ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಸರಣಿಯ ಬೆಲೆಗಳನ್ನು ಅನಾವರಣ ಮಾಡಿದೆ. ಅಂದಹಾಗೆ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಸರಣಿಯ ಒನ್‌ಪ್ಲಸ್‌ 8 ಮತ್ತು ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ ಮಾದರಿಗಳನ್ನು ಒಳಗೊಂಡಿದೆ. ಒನ್‌ಪ್ಲಸ್‌ 8 ಫೋನಿನ ಆರಂಭಿಕ ಬೆಲೆಯು 41,999ರೂ. ಆಗಿದೆ. ಹಾಗೆಯೇ ಒನ್‌ಪ್ಲಸ್‌ 8 ಪ್ರೊ ಫೋನಿನ ಆರಂಭಿಕ ಬೆಲೆಯು 54,999ರೂ.ಪ್ರೈಸ್‌ಟ್ಯಾಗ್ ಹೊಂದಿದೆ. ಹಾಗಾದರೆ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹೇಗಿವೆ, ಇತರೆ ವೇರಿಯಂಟ್ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 8-ಡಿಸ್‌ಪ್ಲೇ

ಒನ್‌ಪ್ಲಸ್‌ 8-ಡಿಸ್‌ಪ್ಲೇ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ.

ಒನ್‌ಪ್ಲಸ್‌ 8 ಪ್ರೊ- ಡಿಸ್‌ಪ್ಲೇ

ಒನ್‌ಪ್ಲಸ್‌ 8 ಪ್ರೊ- ಡಿಸ್‌ಪ್ಲೇ

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಜೊತೆಗೆ QHD+ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇನ್ನು ಈ ಫೋನ್ 120Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ.

ಒನ್‌ಪ್ಲಸ್‌ 8- ಪ್ರೊಸೆಸರ್

ಒನ್‌ಪ್ಲಸ್‌ 8- ಪ್ರೊಸೆಸರ್

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 865 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 650 GPU ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್‌ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಮೂರು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 6GB+128GB, 8GB/12GB RAM ಮತ್ತು 128GB/256GB ಆಗಿವೆ.

ಒನ್‌ಪ್ಲಸ್‌ 8 ಪ್ರೊ- ಪ್ರೊಸೆಸರ್

ಒನ್‌ಪ್ಲಸ್‌ 8 ಪ್ರೊ- ಪ್ರೊಸೆಸರ್

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 865 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 650 GPU ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್‌ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.

ಒನ್‌ಪ್ಲಸ್‌ 8- ಕ್ಯಾಮೆರಾ

ಒನ್‌ಪ್ಲಸ್‌ 8- ಕ್ಯಾಮೆರಾ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಹಾಗೂ ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಒನ್‌ಪ್ಲಸ್‌ 8 ಪ್ರೊ- ಕ್ಯಾಮೆರಾ

ಒನ್‌ಪ್ಲಸ್‌ 8 ಪ್ರೊ- ಕ್ಯಾಮೆರಾ

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾ ಎರಡು 48ಎಂಪಿ ಸೆನ್ಸಾರ್ನಲ್ಲಿವೆ. ಹಾಗೆಯೇ ಇನ್ನುಳಿದೆರಡು ಕ್ಯಾಮೆರಾಗಳು 8ಎಂಪಿ ಮತ್ತು 5ಎಂಪಿ ಸೆನ್ಸಾರ್ ಪಡೆದಿವೆ. ಈ ಫೋನ್ ಸಹ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಪಡೆದಿದೆ.

ಒನ್‌ಪ್ಲಸ್‌ 8 - ಬ್ಯಾಟರಿ

ಒನ್‌ಪ್ಲಸ್‌ 8 - ಬ್ಯಾಟರಿ

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ 4,300mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.

ಒನ್‌ಪ್ಲಸ್‌ 8 ಪ್ರೊ- ಬ್ಯಾಟರಿ

ಒನ್‌ಪ್ಲಸ್‌ 8 ಪ್ರೊ- ಬ್ಯಾಟರಿ

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ 4,510mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಈ ಫೋನ್ ಸಹ 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಒನ್‌ಪ್ಲಸ್‌ 8 ಸರಣಿಯಲ್ಲಿ ಒನ್‌ಪ್ಲಸ್‌ 8 ಫೋನ್ ಮತ್ತು ಒನ್‌ಪ್ಲಸ್‌ 8 ಪ್ರೊ ಫೋನ್ ಲಾಂಚ್ ಆಗಿವೆ. ಹಾಗೆಯೇ ಬುಲೆಟ್ ವಾಯರ್‌ಲೆಸ್ Z ಇಯರ್‌ಫೋನ್ ಸಹ ಬಿಡುಗಡೆ ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆಯನ್ನು ಕಂಪನಿಯು ಅಧಿಕೃತವಾಗಿ ತಿಳಿಸಿದೆ. ಒನ್‌ಪ್ಲಸ್‌ 8 ಫೋನಿನ (6GB+128GB) ಆರಂಭಿಕ ಬೆಲೆಯು 41,999ರೂ. ಆಗಿದೆ. 8GB+128GB ವೇರಿಯಂಟ್ ಬೆಲೆಯು 44,999ರೂ ಹಾಗೂ 12GB+256GB ವೇರಿಯಂಟ್ ಬೆಲೆಯು 49,999ರೂ ಆಗಿದೆ. ಹಾಗೆಯೇ 8GB+128GB ವೇರಿಯಂಟ್‌ನ ಒನ್‌ಪ್ಲಸ್‌ 8 ಪ್ರೊ ಫೋನಿನ ಆರಂಭಿಕ ಬೆಲೆಯು 54,999ರೂ. ಆಗಿದ್ದು, 12GB+256GB ವೇರಿಯಂಟ್ ಬೆಲೆಯು 59,999ರೂ. ಆಗಿದೆ. ಇನ್ನು ಬುಲೆಟ್ ವಾಯರ್‌ಲೆಸ್ Z ಇಯರ್‌ಫೋನ್ 1,999ರೂ. ಪ್ರೈಸ್‌ಟ್ಯಾಗ್ ಹೊಂದಿದೆ.

Best Mobiles in India

English summary
OnePlus has officially announced the prices of OnePlus 8 series and they are surprisingly on the affordable side.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+