ಬಹುನಿರೀಕ್ಷಿತ 'ಒನ್‌ಪ್ಲಸ್‌ 8' ಸ್ಮಾರ್ಟ್‌ಫೋನ್ ಸರಣಿ ಲಾಂಚ್!

|

ಒನ್‌ಪ್ಲಸ್‌ ಸಂಸ್ಥೆಯ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಸರಣಿ ಮಾ.14ರಂದು (ನೆನ್ನೆ) ಬಿಡುಗಡೆ ಆಗಿದೆ. ಈ ಸರಣಿಯು ನಿರೀಕ್ಷೆಯಂತೆ ಒನ್‌ಪ್ಲಸ್‌ 8 ಮತ್ತು ಒನ್‌ಪ್ಲಸ್‌ 8 ಪ್ರೊ ಎರಡು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ಹಿಂದಿನ ಒನ್‌ಪ್ಲಸ್‌ 7 ಸರಣಿಗಿಂತ ಅಪ್‌ಡೇಟ್‌ ಫೀಚರ್ಸ್‌ಗಳಿದ್ದು, ಮುಖ್ಯವಾಗಿ ಕ್ಯಾಮೆರಾ, ಮೆಮೊರಿ, ಪ್ರೊಸೆಸರ್‌, ಬ್ಯಾಟರಿ ಹಾಗೂ ಡಿಸೈನ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆಯಲಿದೆ.

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್

ಹೌದು, ಕೊರೊನಾ ವೈರಸ್ ಹಾವಳಿ ಇರುವುದರಿಂದ ಒನ್‌ಪ್ಲಸ್‌ ಸಂಸ್ಥೆಯು ಆನ್‌ಲೈನ್‌ ಲೈವ್ ಕಾರ್ಯಕ್ರಮದ ಮೂಲಕ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು 8GB/12GB RAM ಮತ್ತು 128GB/256GB ವೇರಿಯಂಟ್‌ ಆಯ್ಕೆ ಒಳಗೊಂಡಿದ್ದು, 48ಎಂಪಿ ಸೆನ್ಸಾರ್‌ನ ರಿಯರ್‌ ಕ್ಯಾಮೆರಾ ಸೌಲಭ್ಯ ಪಡೆದಿವೆ. ಗ್ಲೋ, ಬ್ಲ್ಯಾಕ್ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿವೆ. ಹಾಗಾದರೆ ಒನ್‌ಪ್ಲಸ್‌ 8 ಮತ್ತು ಒನ್‌ಪ್ಲಸ್‌ 8 ಪ್ರೊ ಫೀಚರ್ಸ್‌ಗಳು ಹೇಗಿವೆ ಹಾಗೂ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಸ್ನ್ಯಾಪ್‌ಡ್ರಾಗನ್‌ 865 SoC ಜೊತೆಗೆ Adreno 650 GPU ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಇದೆ. ಹಾಗೆಯೇ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಆಗಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಹಾಗೂ 2ಎಂಪಿ ಸೆನ್ಸಾರ್‌ ಕ್ಯಾಮೆರಾ ಸಹ ಇದೆ. ಇನ್ನು ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಒದಗಿಸಲಾಗಿದೆ. ಈ ಫೋನ್ 4,300mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಜೊತೆಗೆ QHD+ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇನ್ನು ಈ ಫೋನ್ 120Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಸ್ನ್ಯಾಪ್‌ಡ್ರಾಗನ್‌ 865 SoC ಜೊತೆಗೆ Adreno 650 GPU ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಇದೆ. ಇದರೊಂದಿಗೆ ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಆಗಿದೆ. ಸೆಕೆಂಡರಿ ಕ್ಯಾಮೆರಾವು ಸಹ 48ಎಂಪಿ ಸೆನ್ಸಾರ್ ಪಡೆದದ್ದು, ಉಳಿದೆರಡು ಕ್ಯಾಮೆರಾಗಳು 8ಎಂಪಿ ಮತ್ತು 5ಎಂಪಿ ಸೆನ್ಸಾರ್ ಬಲದಲ್ಲಿವೆ. ಇನ್ನು ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಒದಗಿಸಲಾಗಿದೆ. ಈ ಫೋನ್ 4,510mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಬೆಲೆ ಎಷ್ಟು ?

ಬೆಲೆ ಎಷ್ಟು ?

ಒನ್‌ಪ್ಲಸ್‌ 8 ಆರಂಭಿಕ ವೇರಿಯಂಟ್ 8GB/12GB RAM ಬೆಲೆಯು $699 ಆಗಿದೆ(ಭಾರತದಲ್ಲಿ ಅಂದಾಜು 53,090ರೂ). ಹಾಗೆಯೇ 12GB RAM + 256GB ವೇರಿಯಂಟ್ ಬೆಲೆಯು $799ಆಗಿದೆ(ಭಾರತದಲ್ಲಿ ಅಂದಾಜು 60,690ರೂ) ಅದೇ ರೀತಿ 8GB/12GB RAM ಸ್ಟೋರೇಜ್‌ನ ಆರಂಭಿಕ ಒನ್‌ಪ್ಲಸ್‌ 8 ಪ್ರೊ ಬೆಲೆಯು $899 (ಭಾರತದಲ್ಲಿ ಅಂದಾಜು 68,280ರೂ) ಇನ್ನು 8GB/12GB RAM ವೇರಿಯಂಟ್ ಬೆಲೆಯು $999 (ಭಾರತದಲ್ಲಿ ಅಂದಾಜು 75,880ರೂ) ಎನ್ನಲಾಗಿದೆ.

Best Mobiles in India

English summary
OnePlus 8 series was launched through an exclusive live streaming owing the novel coronavirus outbreak in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X