ಬಹುನಿರೀಕ್ಷಿತ ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9 ಪ್ರೊ ಲಾಂಚ್!..ಜಬರ್ದಸ್ತ್ ಲುಕ್!
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲೊಂದಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಒನ್‌ಪ್ಲಸ್ 9 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಒಟ್ಟು ಮೂರು ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಒನ್‌ಪ್ಲಸ್ 9, ಒನ್‌ಪ್ಲಸ್ 9 ಪ್ರೊ ಹಾಗೂ ಒನ್‌ಪ್ಲಸ್ 9R ಆಗಿವೆ. ಇವುಗಳಲ್ಲಿ ಒನ್‌ಪ್ಲಸ್ 9, ಒನ್‌ಪ್ಲಸ್ 9 ಪ್ರೊ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿವೆ.

ಹೌದು, ಒನ್‌ಪ್ಲಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸರಣಿಯನ್ನು ಅನಾವರಣ ಮಾಡಿದೆ. ಈ ಒನ್‌ಪ್ಲಸ್ 9 ಸರಣಿಯು ಹಿಂದಿನ ಒನ್‌ಪ್ಲಸ್ 8 ಸರಣಿಯ ಮುಂದುವರಿದ ಆವೃತ್ತಿ ಆಗಿದ್ದು, ಹಲವು ಆಕರ್ಷಕ ಫೀಚರ್ಸ್‌ಗಳಿಂದ ಈ ಸರಣಿಯು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿವೆ. ಹಾಗಾದರೆ ಒನ್‌ಪ್ಲಸ್ 9, ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಹೇಗಿವೆ, ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಒನ್‌ಪ್ಲಸ್ 9 ಡಿಸ್‌ಪ್ಲೇ
ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಒಳಗೊಂಡಿದ್ದು, 120Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ.

ಒನ್‌ಪ್ಲಸ್ 9 ಪ್ರೊ- ಡಿಸ್‌ಪ್ಲೇ
ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್ 1,440x3,216 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ 2.0 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್ ಜೊತೆಗೆ LTPO ತಂತ್ರಜ್ಞಾನ ಪಡೆದಿದೆ. ಇನ್ನು ಈ ಫೋನ್ 120Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ.
ಒನ್‌ಪ್ಲಸ್ 9 ಪ್ರೊಸೆಸರ್
ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ ಒನ್‌ಪ್ಲಸ್ ಕೂಲ್ ಪ್ಲೇ ಮಲ್ಟಿ ಲೇಯರ್ ಕೂಲಿಂಗ್ ತಂತ್ರಜ್ಞಾನ ಒಳಗೊಂಡಿದೆ. ಹಾಗೆಯೇ ಈ ಪ್ರೊಸೆಸರ್ ಆಂಡ್ರಾಯ್ಡ್ ಆಕ್ಸಿಜೆನ್ 11 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.
ಒನ್‌ಪ್ಲಸ್ 9 ಪ್ರೊ- ಪ್ರೊಸೆಸರ್
ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ ಒನ್‌ಪ್ಲಸ್ ಕೂಲ್ ಪ್ಲೇ ಮಲ್ಟಿ ಲೇಯರ್ ಕೂಲಿಂಗ್ ತಂತ್ರಜ್ಞಾನ ಒಳಗೊಂಡಿದೆ. ಹಾಗೆಯೇ ಈ ಪ್ರೊಸೆಸರ್ ಆಂಡ್ರಾಯ್ಡ್ ಆಕ್ಸಿಜೆನ್ 11 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.

ಒನ್‌ಪ್ಲಸ್ 9 ಕ್ಯಾಮೆರಾ
ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.
ಒನ್‌ಪ್ಲಸ್ 9 ಪ್ರೊ- ಕ್ಯಾಮೆರಾ
ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 8 ಮೆಗಾ ಪಿಕ್ಸಲ್ ಸಾಮರ್ಥ್ಯ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.
ಒನ್‌ಪ್ಲಸ್ 9 - ಬ್ಯಾಟರಿ
ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ ಸಹ 65T Warp ಚಾರ್ಜ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್, ಲೇಸರ್ ಸೆನ್ಸರ್ ಸೇರಿವೆ.

ಒನ್‌ಪ್ಲಸ್ 9 ಪ್ರೊ- ಬ್ಯಾಟರಿ
ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ ಸಹ 65T Warp ಚಾರ್ಜ್ ಸಪೋರ್ಟ್ ಪಡೆದಿದೆ ಹಾಗೂ Warp ಚಾರ್ಜ್ 50w ಸಾಮರ್ಥ್ಯದ ವಾಯರ್ ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ.
ಬೆಲೆ ಎಷ್ಟು?
ಒನ್‌ಪ್ಲಸ್ 9 ಸರಣಿಯಲ್ಲಿ ಒನ್‌ಪ್ಲಸ್ 9, ಒನ್‌ಪ್ಲಸ್ 9 ಪ್ರೊ ಮತ್ತು ಒನ್‌ಪ್ಲಸ್ 9R ಫೋನ್ ಲಾಂಚ್ ಆಗಿವೆ. ಒನ್‌ಪ್ಲಸ್ 9 ಫೋನ್ 8GB + 128GB ವೇರಿಯಂಟ್ ಬೆಲೆಯು 49,999ರೂ. ಆಗಿದೆ. 12GB + 256GB ಸ್ಟೋರೇಜ್ ವೇರಿಯಂಟ್ ದರದವು 54,999ರೂ. ಆಗಿದೆ. ಅದೇ ರೀತಿ ಒನ್‌ಪ್ಲಸ್ 9 ಪ್ರೊ 8GB + 128GB ವೇರಿಯಂಟ್ ಬೆಲೆಯು 64,999ರೂ. ಆಗಿದೆ. 12GB + 256GB ವೇರಿಯಂಟ್ ಬೆಲೆಯು 69,999ರೂ. ಆಗಿದೆ. ಹಾಗೆಯೇ ಒನ್‌ಪ್ಲಸ್ 9R ಬೇಸ್ ವೇರಿಯಂಟ್ ದರವು 8GB + 128GB ವೇರಿಯಂಟ್ ದರವು 39,999ರೂ. ಆಗಿದೆ.


Click it and Unblock the Notifications