Just In
- 54 min ago
ಜಬರ್ದಸ್ತ್ ಫಿಟ್ನೆಸ್ ಫೀಚರ್ಸ್ಗಳೊಂದಿಗೆ ಎಂಟ್ರಿ ಕೊಡಲಿದೆ ಒಪ್ಪೊ ಬ್ಯಾಂಡ್ ಸ್ಟೈಲ್!
- 1 hr ago
ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್ಲೋಡ್ ಮಾಡುವುದು ಹೇಗೆ?
- 1 hr ago
MS ವರ್ಡ್ ಡಾಕ್ಯುಮೆಂಟ್ ಫೈಲ್ ಅನ್ನು PDF ಮಾದರಿಯಲ್ಲಿ ಸೇವ್ ಮಾಡುವುದು ಹೇಗೆ?
- 2 hrs ago
ರೆಡ್ ಮ್ಯಾಜಿಕ್ 6 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಲಾಂಚ್!..ವಿಶೇಷತೆ ಏನು?
Don't Miss
- Movies
ಕೃಷಿ ರಾಯಭಾರಿಯಾಗಿ ತಾವು ಮಾಡಲಿರುವ ಕಾರ್ಯದ ಬಗ್ಗೆ ದರ್ಶನ್ ಮಾತು
- Lifestyle
ಮಹಾಶಿವರಾತ್ರಿ 2021: ದಿನಾಂಕ, ಪೂಜಾಸಮಯ, ಮಹತ್ವ ಹಾಗೂ ವಿಧಿವಿಧಾನದ ಸಂಪೂರ್ಣ ಮಾಹಿತಿ ನಿಮಗಾಗಿ
- News
ಅದರಲ್ಲಿ ಹಲ್ಲೇ ಇಲ್ಲವಲ್ಲ?: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ
- Sports
ಅಕ್ರಮ್, ಮೆಕ್ಗ್ರಾಥ್ ಇರುವ ವಿಶೇಷ ಪಟ್ಟಿ ಸೇರಿದ ಜೇಮ್ಸ್ ಆಂಡರ್ಸನ್
- Automobiles
ಮಾರ್ಚ್ ಅವಧಿಗಾಗಿ ಕಾರು ಮಾದರಿಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಿಸಿದ ರೆನಾಲ್ಟ್
- Finance
ಬ್ರಿಟನ್ನಲ್ಲಿ ಜಾಗ್ವಾರ್ ಕಾರುಗಳ ಮಾರಾಟ ಇಳಿಕೆ: ಟಾಟಾ ಮೋಟಾರ್ಸ್ ಷೇರು 4% ಕುಸಿತ
- Education
CSG Recruitment 2021: 85 ಸಾಫ್ಟ್ವೇರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒನ್‌ಪ್ಲಸ್ 9 ಪ್ರೊ ಮತ್ತು ಒನ್‌ಪ್ಲಸ್ 9 ಲೈಟ್ ಫೋನ್‌ಗಳ ಫೀಚರ್ಸ್ ಲೀಕ್!
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಒನ್‌ಪ್ಲಸ್ ಸಂಸ್ಥೆಯು ಈಗಾಗಲೇ ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯ ಒನ್‌ಪ್ಲಸ್ 6, ಒನ್‌ಪ್ಲಸ್ 7, ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ ಸರಣಿಗಳು ಆಕರ್ಷಕ ಫೀಚರ್ಸ್‌ಗಳಿಂದ ಹೆಚ್ಚು ಜನಪ್ರಿಯತೆ ಪಡೆದಿವೆ. ಆದರೆ ಒನ್‌ಪ್ಲಸ್ ಕಂಪನಿಯು ಹೊಸದಾಗಿ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಮಾಡುವ ತಯಾರಿಯಲ್ಲಿದ್ದು, ಅದರ ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಹೌದು, ಒನ್‌ಪ್ಲಸ್ ಕಂಪನಿಯು ತನ್ನ ಬಹುನಿರೀಕ್ಷಿತ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಬರುವ ಮಾರ್ಚ್ 2021ರ ವೇಳೆಗೆ ಈ ನೂತನ ಸ್ಮಾರ್ಟ್‌ಫೋನ್ ಸರಣಿಯು ಅನಾವರಣ ಮಾಡುವ ಸಾಧ್ಯತೆಗಳು ಇವೆ. ಈ ಸರಣಿಯು ಒನ್‌ಪ್ಲಸ್ 9e ಹಾಗೂ ಒನ್‌ಪ್ಲಸ್ 9 ಪ್ರೊ ಮಾಡೆಲ್ ಒಳಗೊಂಡಿರಲಿದೆ. ಆದರೆ ಇದೀಗ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಒನ್‌ಪ್ಲಸ್ 9 ಸರಣಿಯ ಫೀಚರ್ಸ್‌ಗಳು ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ಹಾಗಾದರೇ ಲೀಕ್ ಮಾಹಿತಿಯಂತೆ ಒನ್‌ಪ್ಲಸ್ 9e ಹಾಗೂ ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೂರು ಸ್ಮಾರ್ಟ್‌ಫೋನ್ ಮಾಡೆಲ್
ಒನ್‌ಪ್ಲಸ್ 9 ಸರಣಿಯು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದ್ದು, ಅವುಗಳವು ಕ್ರಮವಾಗಿ ಒನ್‌ಪ್ಲಸ್ 9, ಒನ್‌ಪ್ಲಸ್ 9E ಹಾಗೂ ಒನ್‌ಪ್ಲಸ್ 9 ಪ್ರೊ ಮಾಡೆಲ್ ಎಂದು ಹೇಳಲಾಗುತ್ತಿದೆ. ಇವುಗಳ ಒನ್‌ಪ್ಲಸ್ 9 ಪ್ರೊ ಮಾಡೆಲ್ ಹೈ ಎಂಡ್ ಫೀಚರ್ಸ್ ಹೊಂದಿರಲಿದೆ. ಒನ್‌ಪ್ಲಸ್ 9 ಮೀಡ್‌ರೇಂಜ್ ಫೀಚರ್ಸ್ ಹೊಂದಿರಲಿದ್ದು, ಹಾಗೆಯೇ ಒನ್‌ಪ್ಲಸ್ 9E ಬಜೆಟ್ ದರದ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಒನ್‌ಪ್ಲಸ್ 9 ಪ್ರೊ ಕೀ ಫೀಚರ್ಸ್
ಒನ್‌ಪ್ಲಸ್ 9 ಪ್ರೊ 1,440x3,216 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ AMOLED ಪ್ರದರ್ಶನವನ್ನು ಹೊಂದಿರುತ್ತದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 888 SoC ನಿಂದ ನಿಯಂತ್ರಿಸಲ್ಪಡುತ್ತದೆ. ಜೊತೆಗೆ 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಇರಲಿದೆ.

ಒನ್‌ಪ್ಲಸ್ 9 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಎಫ್ / 1.8 ಅಪರ್ಚರ್, 64 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಎಫ್ / 2.2 ಅಪರ್ಚರ್ ಮತ್ತು 3.3 ಎಕ್ಸ್ ಜೂಮ್ ಟೆಲಿಫೋಟೋ ಲೆನ್ಸ್ ಹೊಂದುವ ನಿರೀಕ್ಷೆಯಿದೆ. ಕಂಪನಿಯು ಹ್ಯಾಸೆಲ್‌ಬ್ಲಾಡ್‌ನಿಂದ ಕ್ಯಾಮೆರಾಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇದು 120fps ನಲ್ಲಿ 4K ವಿಡಿಯೋ ಚಿತ್ರೀಕರಣ ಮಾಡುವ ನಿರೀಕ್ಷೆಯಿದೆ. 4,500mAh ಬ್ಯಾಟರಿಯನ್ನು ಹೊಂದಿರಲಿದ್ದು, ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಒನ್‌ಪ್ಲಸ್ 9e ಕೀ ಫೀಚರ್ಸ್
ಒನ್‌ಪ್ಲಸ್ 9 ಸರಣಿಯಲ್ಲಿ ಒನ್‌ಪ್ಲಸ್ 9e ಫೋನ್ ಬಜೆಟ್ ಮಾದರಿಯ ಫೋನ್ ಆಗಿರಲಿದ್ದು, ಇದನ್ನು ಒನ್‌ಪ್ಲಸ್ 9 ಲೈಟ್ ಅಥವಾ ಒನ್‌ಪ್ಲಸ್ 9e ಎಂದು ಕರೆಯಬಹುದು ಎಂದು ವರದಿ ಹೇಳಿದೆ. 8GB RAM ಮತ್ತು 128 GB ಸ್ಟೋರೇಜ್‌ನೊಂದಿಗೆ ಜೋಡಿಯಾಗಿರುವ ಈ ಫೋನ್ ಸ್ನ್ಯಾಪ್‌ಡ್ರಾಗನ್ 690 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದ್ದು, 1,800x2,400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುತ್ತದೆ ಎನ್ನಲಾಗಿದೆ.

ಒನ್‌ಪ್ಲಸ್ 9e ಫೋನ್ ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಮುಖ್ಯ ಸಂವೇದಕವನ್ನು ಹೊಂದಿರುವ ಎಫ್ / 1.7 ಅಪರ್ಚರ್ ಮತ್ತು 8 ಮೆಗಾಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಬ್ಯಾಟರಿ 5,000mAh ಇರಲಿದೆ ಎನ್ನಲಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190