ಒನ್‌ಪ್ಲಸ್ 9 ಸರಣಿ ಬಿಡುಗಡೆಗೆ ಸಿದ್ಧ; 50ಎಂಪಿ ಸೆನ್ಸಾರ್‌ನ ಟ್ರಿಪಲ್ ಕ್ಯಾಮೆರಾ!
ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಒನ್‌ಪ್ಲಸ್ ಸಂಸ್ಥೆಯು ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿಪಡಿಸಿಕೊಂಡಿದೆ. ಒನ್‌ಪ್ಲಸ್ ಕಂಪನಿಯ ಒನ್‌ಪ್ಲಸ್ 6, ಒನ್‌ಪ್ಲಸ್ 7, ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ ಸರಣಿಗಳು ಗ್ರಾಹಕರನ್ನು ಮೋಡಿ ಮಾಡಿವೆ. ಈ ಯಶಸ್ಸಿನ ಮುಂದುವರಿದ ಭಾಗವಾಗಿ ಕಂಪನಿಯು ನೂತನವಾಗಿ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಮಾಡುವ ತಯಾರಿಯಲ್ಲಿದೆ.

ಹೌದು, ಒನ್‌ಪ್ಲಸ್ ಸಂಸ್ಥೆಯು ಇದೀಗ ಹೊಸದಾಗಿ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಬರುವ ಮಾರ್ಚ್ 2021ರ ವೇಳೆಗೆ ಈ ನೂತನ ಸ್ಮಾರ್ಟ್‌ಫೋನ್ ಸರಣಿಯು ಅನಾವರಣ ಮಾಡುವ ಸಾಧ್ಯತೆಗಳು ಇವೆ. ಇನ್ನು ಈ ಸರಣಿಯು 50ಎಂಪಿ ಸೆನ್ಸಾರ್‌ನ ತ್ರಿವಳಿ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ ಎನ್ನುತ್ತಿವೆ ಲೀಕ್ ಮಾಹಿತಿಗಳು. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಸರಣಿಯ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಒನ್‌ಪ್ಲಸ್ 9 ಸರಣಿಯಲ್ಲಿ ಮೂರು ಫೋನ್‌ಗಳು
ಒನ್‌ಪ್ಲಸ್ 9 ಸರಣಿಯು ಒನ್‌ಪ್ಲಸ್ 9, ಒನ್‌ಪ್ಲಸ್ 9E ಹಾಗೂ ಒನ್‌ಪ್ಲಸ್ 9 ಪ್ರೊ ಮಾಡೆಲ್ ಫೋನ್‌ಗಳನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇವುಗಳ ಒನ್‌ಪ್ಲಸ್ 9 ಪ್ರೊ ಮಾಡೆಲ್ ಹೈ ಎಂಡ್ ಫೀಚರ್ಸ್ ಹೊಂದಿರಲಿದೆ. ಒನ್‌ಪ್ಲಸ್ 9 ಮೀಡ್‌ರೇಂಜ್ ಫೀಚರ್ಸ್ ಹೊಂದಿರಲಿದ್ದು, ಹಾಗೆಯೇ ಒನ್‌ಪ್ಲಸ್ 9E ಬಜೆಟ್ ದರದ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಒನ್‌ಪ್ಲಸ್ 9
ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸಾಕಷ್ಟು ಹೊಸ ಅಪ್‌ಡೇಟ್ ವರ್ಷನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 875 ಪ್ರೊಸೆಸರ್ ಒಳಗೊಂಡಿರಲಿದ್ದು, ಜೊತೆಗೆ 8GB RAM ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 120Hz ರೀಫ್ರೇಶ್ ರೇಟ್ ಸಾಮರ್ಥ್ಯ ಪಡೆದಿರಲಿದೆ. ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿರಲಿದೆ.

ಒನ್‌ಪ್ಲಸ್ 9 ಪ್ರೊ
ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್ ಸಹ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 875 ಪ್ರೊಸೆಸರ್ ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಇರಲಿದೆ. ಇನ್ನು 8GB RAM ಮತ್ತು 12GB RAMಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 144Hz ರೀಫ್ರೇಶ್ ರೇಟ್ ಸಾಮರ್ಥ್ಯ ಪಡೆದಿರಲಿದೆ. ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ ಎನ್ನಲಾಗಿದೆ.


Click it and Unblock the Notifications