ಬಿಡುಗಡೆಗೆ ಸಜ್ಜಾದ ಒನ್‌ಪ್ಲಸ್‌ 9 ಫೋನ್ ಸರಣಿ; ಫೀಚರ್ಸ್‌ ಏನು?

|

ಪ್ರತಿಷ್ಠಿತ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಒನ್‌ಪ್ಲಸ್‌ ಮೊಬೈಲ್ ಸಂಸ್ಥೆಯು ಹಲವು ಫೋನ್‌ಗಳ ಮೂಲಕ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಕಂಪನಿಯ ಇತ್ತೀಚಿನ ಫ್ಲ್ಯಾಗ್‌ಶಿಪ್‌ ಮಾಡೆಲ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಸೈ ಅನಿಸಿಕೊಂಡಿವೆ. ಹೊಸದಾಗಿ ಲಾಂಚ್ ಆದ ಒನ್‌ಪ್ಲಸ್‌ 8 ಫೋನ್ ಸರಣಿಯು ಭಾರಿ ಸದ್ದು ಮಾಡಿದ್ದು, ಇದರ ಬೆನ್ನಲ್ಲೇ ಕಂಪನಿಯು ಇದೀಗ ಒನ್‌ಪ್ಲಸ್‌ 9 ಸರಣಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಒನ್‌ಪ್ಲಸ್‌ 9

ಹೌದು, ಒನ್‌ಪ್ಲಸ್‌ ಸಂಸ್ಥೆಯು ಇದೀಗ ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಲು ಸಕಲ ತಯಾರಿ ನಡೆಸಿದೆ. ಈ ಹೊಸ ಸರಣಿಯು ಒನ್‌ಪ್ಲಸ್‌ 9 ಹಾಗೂ ಒನ್‌ಪ್ಲಸ್‌ 9 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 875 ಪ್ರೊಸೆಸರ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿರಲಿವೆ ಎನ್ನಲಾಗಿದೆ.

ಸರಣಿಯು

ಒನ್‌ಪ್ಲಸ್‌ 9 ಸರಣಿಯು ಒನ್‌ಪ್ಲಸ್‌ 9 ಹಾಗೂ ಒನ್‌ಪ್ಲಸ್‌ 9 ಪ್ರೊ ಮಾಡೆಲ್‌ ಫೋನ್‌ಗಳನ್ನು ಹೊಂದಿರಲಿದೆ. ಇನ್ನು ಈ ಸರಣಿಯು ಇದೇ ಡಿಸೆಂಬರ್ ತಿಂಗಳಿನಲ್ಲಿ ವರ್ಚುವಲ್ ಕಾರ್ಯಕ್ರಮದ ಮೂಲಕ ಅನಾವರಣ ಮಾಡುವುದು ಬಹುತೇಕ ಖಚಿತವಾಗಿದೆ ಮತ್ತು ಈಗಾಗಲೇ ಒನ್‌ಪ್ಲಸ್‌ 9 ಸರಣಿ ಫೋನ್‌ಗಳ ಫೀಚರ್ಸ್‌ಗಳು ಲೀಕ್ ಆಗಿವೆ. ಹಾಗಾದರೇ ಲೀಕ್ ಮಾಹಿತಿಯಂತೆ ಒನ್‌ಪ್ಲಸ್‌ 9 ಸರಣಿಯ ಫೀಚರ್ಸ್‌ಗಳು ಹೇಗಿರಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒನ್‌ಪ್ಲಸ್‌ 9

ಒನ್‌ಪ್ಲಸ್‌ 9

ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್ ಸಾಕಷ್ಟು ಹೊಸ ಅಪ್‌ಡೇಟ್ ವರ್ಷನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 875 ಪ್ರೊಸೆಸರ್‌ ಒಳಗೊಂಡಿರಲಿದ್ದು, ಜೊತೆಗೆ 8GB RAM ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 120Hz ರೀಫ್ರೇಶ್‌ ರೇಟ್ ಸಾಮರ್ಥ್ಯ ಪಡೆದಿರಲಿದೆ. ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿರಲಿದೆ.

ಒನ್‌ಪ್ಲಸ್‌ 9 ಪ್ರೊ

ಒನ್‌ಪ್ಲಸ್‌ 9 ಪ್ರೊ

ಒನ್‌ಪ್ಲಸ್‌ 9 ಪ್ರೊ ಸ್ಮಾರ್ಟ್‌ಫೋನ್ ಸಹ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 875 ಪ್ರೊಸೆಸರ್‌ ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಇರಲಿದೆ. ಇನ್ನು 8GB RAM ಮತ್ತು 12GB RAMಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 144Hz ರೀಫ್ರೇಶ್‌ ರೇಟ್ ಸಾಮರ್ಥ್ಯ ಪಡೆದಿರಲಿದೆ. ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇರಲಿದೆ ಎನ್ನಲಾಗಿದೆ.

Best Mobiles in India

English summary
OnePlus 9 and OnePlus 9 Pro are said to be in the works.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X