ಇಂದು ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಸೇಲ್!..ಏನಾದ್ರೂ ಆಫರ್ ಇದೆಯಾ?
ಜನಪ್ರಿಯ ಒನ್‌ಪ್ಲಸ್ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಲಾಂಚ್ ಮಾಡಿರುವ 'ಒನ್‌ಪ್ಲಸ್ 9RT' ಸ್ಮಾರ್ಟ್‌ಫೋನ್ ಈಗಾಗಲೇ ಆಕರ್ಷಕ ಫೀಚರ್ಸ್ ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಜ 17) ಅಮೆಜಾನ್ ಇ ಕಾಮರ್ಸ್ ತಾಣ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಮಧ್ಯಾಹ್ನ 12ಕ್ಕೆ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಅನ್ನು ಹೊಂದಿದೆ.

ಹೌದು, ಒನ್‌ಪ್ಲಸ್ ಸಂಸ್ಥೆಯ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಮಾರಾಟ ಇಂದು ಇ ಕಾಮರ್ಸ್ ದೈತ್ಯ ಅಮೆಜಾನ್ ನಡೆಯಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗಾದರೇ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನಿನ ಬೆಲೆ ಎಷ್ಟು? ಹಾಗೂ ಈ ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.62-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಯಾಮ್‌ಸಂಗ್ E4 ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 1,300Hz ಟಚ್ ಸ್ಯಾಪ್ಲಿಂಗ್ ರೇಟ್ ಹೊಂದಿದೆ. ಇದು 100% DCI:P3 ಬಣ್ಣದ ಹರವು ಕವರೇಜ್‌ನೊಂದಿಗೆ ಬರುತ್ತದೆ. ಇನ್ನು ಈ ಡಿಸ್‌ಪ್ಲೇ HDR10+ ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ sRGB ಮತ್ತು DCI:P3 ಕಲರ್ ವಿಧಾನಗಳನ್ನು ಒಳಗೊಂಡಿದೆ.
ಪ್ರೊಸೆಸರ್ ಪವರ್ ಯಾವುದು
ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಕ್ಸಿಜನ್ OS 11 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷ
ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ f/1.8 ಲೆನ್ಸ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ ಬರುತ್ತದೆ ಮತ್ತು 60fps ನಲ್ಲಿ 4K ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಎರಡನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಇತರೆ
ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಮೂಲಕ ಕಂಪನಿಯ ವಾರ್ಪ್ ಚಾರ್ಜ್ 65T ತಂತ್ರಜ್ಞಾನದ ಬಳಸಿ 65W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಮತ್ತು ಬ್ಲೂಟೂತ್ v5.2 ಸಂಪರ್ಕವನ್ನು ನೀಡುತ್ತದೆ. ಜೊತೆಗೆ GPS/ A-GPS ಮತ್ತು NFC ಬೆಂಬಲವನ್ನು ನೀಡುತ್ತದೆ.
ಭಾರತದಲ್ಲಿ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಭಾರತದಲ್ಲಿ ಬೇಸ್ ಮಾಡೆಲ್ 8GB + 128GB ಸ್ಟೋರೇಜ್ ಮಾದರಿಗೆ 42,999ರೂ. ಹಾಗೂ 12GB +256GB ಸ್ಟೋರೇಜ್ ರೂಪಾಂತರಕ್ಕಾಗಿ 46,999.ರೂ ಬೆಲೆಯನ್ನು ಹೊಂದಿದೆ. ಈ ಫೋನ್ ಹ್ಯಾಕರ್ ಬ್ಲಾಕ್ ಮತ್ತು ನ್ಯಾನೋ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ. ಅಮೆಜಾನ್ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಇಂದು ಮಾರಾಟ ಶುರುಮಾಡಲಿದೆ.


Click it and Unblock the Notifications








