OnePlus: ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಲೀಕ್! ಸ್ಮಾರ್ಟ್‌ಫೋನ್ ವಲಯದಲ್ಲಿ ಸುನಾಮಿ
ಒನ್‌ಪ್ಲಸ್ (OnePlus) ಯಾವುದೇ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ರೂ ಸಹ ಅದು ಮಾರುಕಟ್ಟೆಯಲ್ಲಿ ದೊಡ್ಡ ಅಲೆಯಲ್ಲೇ ಎಬ್ಬಿಸುತ್ತದೆ. ಅದರಲ್ಲೂ ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಈ ಫೋನ್‌ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಈ ನಡುವೆ ಒನ್‌ಪ್ಲಸ್‌ನಿಂದ ಮತ್ತೊಂದು ಹೊಸ ಫೋನ್ ಅನಾವರಣ ಆಗಲು ಸಜ್ಜಾಗಿದೆ.
ಹೌದು, ಒನ್‌ಪ್ಲಸ್ ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ನಡುವೆ ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್ (OnePlus Ace 3 Pro smartphone) ಅನ್ನು ಲಾಂಚ್ ಮಾಡಲು ಒನ್‌ಪ್ಲಸ್ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಈ ಫೋನ್ ಲಾಂಚ್ ಆಗುವ ಮುನ್ನವೇ ಇದರ ನಿರೀಕ್ಷಿತ ಫೀಚರ್ಸ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿರಬಹುದು ಅನ್ನೋದನ್ನು ನೋಡೋಣ ಬನ್ನಿ.

ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್: ಒನ್‌ಪ್ಲಸ್ ತನ್ನ ಏಸ್ ಸರಣಿಯ ಒನ್‌ಪ್ಲಸ್ ಏಸ್ 3 ಪ್ರೊ ಅನ್ನು ಅನಾವರಣ ಮಾಡಲು ಮುಂದಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನೊಂದಿಗೆ ಲಾಂಚ್ ಆಗಿರುವ ಅದರ ಪೂರ್ವವರ್ತಿಯಾದ ಒನ್‌ಪ್ಲಸ್ ಏಸ್ 2 ಪ್ರೊ ದ ಆಧಾರದ ಮೇಲೆ ಈ ಫೋನ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಆದರೆ, ಮುಂಬರುವ ಮಾದರಿಯು ಕಾರ್ಯಕ್ಷಮತೆ ಮತ್ತು ಫೀಚರ್ಸ್‌ನಲ್ಲಿ ಗಮನಾರ್ಹವಾದ ಬದಲಾವಣೆಯನ್ನೂ ಸಹ ಮಾಡಲಿದೆ ಎಂದು ಹೇಳಲಾಗಿದೆ.
ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್‌ನ ಲೀಕ್ ಫೀಚರ್ಸ್ ವಿವರ: ಸ್ಮಾರ್ಟ್ ಪಿಕಾಚು ಎಂದು ಕರೆಯಲ್ಪಡುವ ಟಿಪ್‌ಸ್ಟರ್‌ನಿಂದ ಈ ಫೋನ್‌ನ ಕೆಲವು ಮಾಹಿತಿ ಲೀಕ್ ಆಗಿವೆ. ಅದರಂತೆ ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 24GB ಯ LPDDR5x RAM ಮತ್ತು 1TB ನ ವಿಸ್ತಾರವಾದ UFS 4.0 ಇಂಟರ್ ಸ್ಟೋರೇಜ್ ಆಯ್ಕೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಒನ್‌ಪ್ಲಸ್ ಹೆಚ್ಚು ಬಳಕೆದಾರರನ್ನು ತಲುಪಲು ಕಾನ್ಫಿಗರೇಶನ್‌ಗಳನ್ನು ಪರೀಕ್ಷಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಹಾಗೆಯೇ ಈ ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್ ವಿನ್ಯಾಸವು ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಈ ಮೂಲಕ ಹಿಂದಿನ ಪ್ರವೃತ್ತಿಯನ್ನು ಮುಂದುವರೆಸುತ್ತದೆ ಎಂದು ವರದಿಯಾಗಿದೆ. ಈ ಡಿಸ್‌ಪ್ಲೇ 6.78 ಇಂಚಿನ OLED ಪ್ಯಾನೆಲ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದ್ದು, 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಉನ್ನತ ದರ್ಜೆಯ ವಿನ್ಯಾಸವನ್ನು ಹೊಂದಿರುವ ಫೋನ್ ಆಗಿ ಗುರುತಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಜೊತೆಗೆ ಈ ಫೋನ್ ಬಗ್ಗೆ ಈ ಹಿಂದೆ ಲೀಕ್ ಆದ ಮಾಹಿತಿ ಬಗ್ಗೆ ಹೇಳುವುದಾದರೆ, ಈ ಫೋನ್ ಲೋಹದ ಮಧ್ಯದ ಚೌಕಟ್ಟು ಮತ್ತು ಗಾಜಿನ ರಿಯರ್ ಪ್ಯಾನಲ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಆದರೆ, ಕ್ಯಾಮೆರಾ ಮತ್ತು ಬ್ಯಾಟರಿಗೆ ಸಂಬಂಧಿಸಿದಂತೆ ಇನ್ನೂ ಸಹ ಯಾವುದೇ ಲೀಕ್ ಮಾಹಿತಿ ಹೊರಬಿದ್ದಿಲ್ಲ. ಅದಾಗ್ಯೂ ಈ ಫೋನ್ ಕಲರ್ ಓಎಸ್ 14 ಆಧಾರಿತ ಆಂಡ್ರಾಯ್ಡ್ 14 ಓಎಸ್‌ನಲ್ಲಿ ರನ್ ಆಗಬಹುದು ಎಂದು ತಿಳಿದುಬಂದಿದೆ.

ಇನ್ನು ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್ ಅನ್ನು ಒನ್‌ಪ್ಲಸ್ 2024 ರ ಮೊದಲಾರ್ಧದಲ್ಲಿ ಅನಾವರಣಗೊಳಿಸಬಹುದು ಎನ್ನಲಾಗಿದ್ದು, ಈ ಫೋನ್‌ನ ಜಾಗತಿಕ ಲಭ್ಯತೆಯ ಬಗ್ಗೆ ವಿವರಗಳು ಇನ್ನೂ ಸಹ ಅನಿಶ್ಚಿತವಾಗಿಯೇ ಉಳಿದಿವೆ. ಹಾಗಿದ್ರೆ, ಈ ಫೋನ್ ಬಗ್ಗೆ ಇನ್ನೂ ಹೆಚ್ಚಿನ ನಿಖರ ಮಾಹಿತಿಯನ್ನು ಆಗಾಗ್ಗೆ ತಿಳಿಯಬೇಕು ಎಂದುಕೊಂಡಿದ್ದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








