OnePlus: 16GB RAM ಆಯ್ಕೆಯೊಂದಿಗೆ ಒನ್‌ಪ್ಲಸ್ ಏಸ್ 3 ಲಾಂಚ್! ದೊಡ್ಡ ಸಾಮರ್ಥ್ಯದ ಬ್ಯಾಟರಿ, ಬೆಲೆ ಎಷ್ಟು?
ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. ಈ ಫೋನ್‌ಗಳು ಆಪಲ್ ಹಾಗೂ ಸ್ಯಾಮ್‌ಸಂಗ್‌ಗೆ ಸ್ಪರ್ಧೆ ನೀಡುವಷ್ಟು ಸಾಮರ್ಥ್ಯದ ಫೀಚರ್ಸ್ ಆಯ್ಕೆ ಪಡೆದಿರಲಿದ್ದು, ಈ ಕಾರಣಕ್ಕೆ ಜಾಗತಿಕವಾಗಿ ಈ ಫೋನ್‌ಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅದರಂತೆ ಈಗ ಬಹುನಿರೀಕ್ಷಿತ ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ (OnePlus Ace 3 smartphone) ಅನ್ನು ಅನಾವರಣ ಮಾಡಲಾಗಿದೆ.
ಹೌದು, ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಫೋನ್ ಅನ್ನು ಲಾಂಚ್ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ (Snapdragon 8 Gen 2 processor) ಬಲದೊಂದಿಗೆ 16GB RAM ವರೆಗೆ ಸ್ಟೋರೇಜ್ ಆಯ್ಕೆ ಪಡೆದಿದೆ. ಅಲ್ಲದೆ ವಿಶೇಷ ಕ್ಯಾಮೆರಾ ಫೀಚರ್ಸ್ ಅನ್ನೂ ಸಹ ಈ ಫೋನ್ ಹೊಂದಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಏಸ್ ಸರಣಿಯಲ್ಲಿ ಕಂಪನಿಯ ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ 6.78 ಇಂಚಿನ 1.5K LTPO ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 2780×1264 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ, 100% DCI-P3 ಬಣ್ಣದ ಗ್ಯಾಮಟ್, 2160Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್, 360Hz ಟಚ್ ಆಂಪ್ಲಿಂಗ್ ರೇಟ್ ಸೇರಿದಂತೆ ಅನೇಕ ಫೀಚರ್ಸ್ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿದೆ.
ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲದೊಂದಿಗೆ ಅಡ್ರಿನೋ 740 ಗ್ರಾಫಿಕ್ಸ್ ಶಕ್ತಿ ಪಡೆದಿದ್ದು, ಈ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಇನ್ನಷ್ಟು ಶಕ್ತಿ ನೀಡಲು 12GB / 16GB RAM ಹಾಗೂ 256GB/512GB/1TB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ.

ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಕ್ಯಾಮೆರಾ ಮಾಹಿತಿ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 1/1.56 ಇಂಚಿನ ಸೋನಿ IMX890 ಸೆನ್ಸರ್ ನ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೋನಿ IMX355 ಸೆನ್ಸರ್‌ನ 8 ಮೆಗಾಪಿಕ್ಸೆಲ್ 120° ಅಲ್ಟ್ರಾ-ವೈಡ್ ಕ್ಯಾಮೆರಾ, f/2.2 ಅಪರ್ಚರ್‌ನ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಈ ಫೋನ್ ಹೊಂದಿದೆ. ಜೊತೆಗೆ ಸ್ಯಾಮ್‌ಸಂಗ್ S5K3P9 ಸೆನ್ಸರ್‌ನೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: 5500mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿದ್ದು, ಇದು 100W ಸೂಪರ್‌ವೂಕ್ ಫಾಸ್ಟ್ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಅಂದರೆ ಈ ಫೋನ್ ಅನ್ನು ಕೇವಲ 27 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಫೋನ್ ಸೂಪರ್‌ವೂಕ್ ಎಸ್ ಪವರ್ ಮ್ಯಾನೇಜ್‌ಮೆಂಟ್ ಚಿಪ್‌ನೊಂದಿಗೆ ಸಜ್ಜುಗೊಂಡಿದೆ. ಉಳಿದಂತೆ ಈ ಫೋನ್ ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಫೀಚರ್ಸ್ ಪಡೆದಿದೆ.

ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್ ಅನ್ನು ಇದೀಗ ಚೀನಾದಲ್ಲಿ ಮಾತ್ರ ಅನಾವರಣ ಮಾಡಲಾಗಿದೆ. ಜೊತೆಗೆ ಇದು ಗೋಲ್ಡ್, ಕೂಲ್ ಬ್ಲೂ ಮತ್ತು ಐರನ್ ಗ್ರೇ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, 12GB+256GB ವೇರಿಯಂಟ್‌ಗೆ 2599 ಯುವಾನ್ ( ಅಂದಾಜು 30,440 ರೂ.ಗಳು) ಬೆಲೆ ಇದೆ.
ಹಾಗೆಯೇ 16GB+512GB ವೇರಿಯಂಟ್‌ಗೆ 2999 ಯುವಾನ್(ಅಂದಾಜು 35,125 ರೂ.ಗಳು) ಮತ್ತು 16GB+1TB ವೇರಿಯಂಟ್‌ಗೆ 3,499 ಯುವಾನ್ (ಅಂದಾಜು 41,610 ರೂ.ಗಳು). ಬೆಲೆ ನಿಗದಿ ಮಾಡಲಾಗಿದೆ. ಜನವರಿ 8 ರಿಂದ ಚೀನಾದಲ್ಲಿ ಮಾರಾಟವಾಗಲಿದೆ. ಇದು ಜನವರಿ 23 ರಂದು ಒನ್‌ಪ್ಲಸ್ 12R (OnePlus 12R) ಹೆಸರಿನಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್ ಆಗಲಿದೆ.


Click it and Unblock the Notifications








