Home
ಸುದ್ದಿಜಾಲ

OnePlus: ಇನ್ನೂ ಲಾಂಚ್ ಆಗದ ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಲಿದೆಯಂತೆ ಈ ಒನ್‌ಪ್ಲಸ್ ಫೋನ್‌!

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್‌ (OnePlus) ಸಹ ಅಗ್ರಸ್ಥಾನದಲ್ಲಿದೆ. ಈ ಫೋನ್‌ಗಳಿಗೆ ವಿಶೇಷ ಫೀಚರ್ಸ್‌ ಆಯ್ಕೆಯ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತಿದ್ದು, ಈ ನಡುವೆ ಒನ್‌ಪ್ಲಸ್‌ ಮತ್ತೊಂದು ಸೂಪರ್ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಿದೆ ಎಂದು ತಿಳಿದುಬಂದಿದೆ. ಈ ಫೋನ್ ಇನ್ನೂ ಲಾಂಚ್‌ ಆಗದ ಪ್ರೊಸೆಸರ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ.

ಹೌದು, ಒನ್‌ಪ್ಲಸ್‌ ಏಸ್‌ 3V ಸ್ಮಾರ್ಟ್‌ಫೋನ್ ಇದೀಗ ಭಾರೀ ಚರ್ಚೆಯಲ್ಲಿದೆ. ಈಗಾಗಲೇ ಒನ್‌ಪ್ಲಸ್‌ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಅವುಗಳ ಸಾಲಿನಲ್ಲಿ ಈ ಫೋನ್ ವಿಶೇಷವಾಗಿ ಗುರುತಿಸಿಕೊಳ್ಳಲಿದೆ. ಹಾಗಿದ್ರೆ, ಈ ಫೋನ್‌ ಯಾವ ಪ್ರೊಸೆಸರ್‌ ಹೊಂದಿರಲಿದೆ? ಲೀಕ್‌ ಮಾಹಿತಿ ಆಧಾರದಲ್ಲಿ ಇದು ಏನೆಲ್ಲಾ ಫೀಚರ್ಸ್‌ ಪಡೆಯಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ನೂ ಲಾಂಚ್ ಆಗದ ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಲಿದೆಯಂತೆ ಈ ಒನ್‌ಪ್ಲಸ್ ಫೋನ್

ಒನ್‌ಪ್ಲಸ್‌ ಏಸ್‌ 3V ಸ್ಮಾರ್ಟ್‌ಫೋನ್: ಒನ್‌ಪ್ಲಸ್‌ ಏಸ್‌ 3V ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಫೀಚರ್ಸ್‌ ಭಾರೀ ವೈರಲ್‌ ಆಗಿವೆ. ಅದರಂತೆ ಈ ಫೋನ್ SM7675 ಚಿಪ್‌ಸೆಟ್‌ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಇದು ಇನ್ನೂ ಬಿಡುಗಡೆಯಾಗಬೇಕಿರುವ ಸ್ನಾಪ್‌ಡ್ರಾಗನ್ 7+ ಜನ್ 3 ಪ್ರೊಸೆಸರ್‌ (Snapdragon 7+ Gen 3 processor) ಎಂದು ಹೇಳಲಾಗಿತ್ತಿದೆ. ಈ ಹಿಂದೆ ಟಿಪ್‌ಸ್ಟರ್ ಸ್ನಾಪ್‌ಡ್ರಾಗನ್ 7 ಜನ್‌ 3 ಅನ್ನು ಈ ಸಂಬಂಧ ಕ್ಲೈಮ್ ಮಾಡಿದ್ದರು.

ಮುಂಬರುವ ಈ ಚಿಪ್ 2.9GHz ಗಡಿಯಾರದ ವೇಗದೊಂದಿಗೆ 1x ಕಾರ್ಟೆಕ್ಸ್ X4 ಪ್ರೈಮ್ ಕೋರ್ ಅನ್ನು ಹೊಂದಿರಲಿದ್ದು, 2.6GHz ನಲ್ಲಿ ಚಾಲನೆಯಲ್ಲಿರುವ 4x ಕಾರ್ಟೆಕ್ಸ್ A720 ಕೋರ್‌ಗಳು ಮತ್ತು 1.9GHz ಆವರ್ತನದಲ್ಲಿ ತಿರುಗುವ 3x ಕಾರ್ಟೆಕ್ಸ್ A520 ಕೋರ್‌ಗಳನ್ನು ಪಡೆಯಲಿದೆ ಎನ್ನಲಾಗಿದೆ. ಜೊತೆಗೆ ಈ ಫೋನ್‌ ಅಡ್ರಿನೋ 732 GPU ಅನ್ನು ಸಹ ಪ್ಯಾಕ್ ಮಾಡಬಹುದು ಎಂದು ಕೆಲವು ಮೂಲಗಳು ಹೇಳುತ್ತವೆ.

ಇನ್ನೂ ಲಾಂಚ್ ಆಗದ ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಲಿದೆಯಂತೆ ಈ ಒನ್‌ಪ್ಲಸ್ ಫೋನ್

ಈ ಫೋನ್‌ನ ಸ್ಟೋರೇಜ್‌ ವಿಚಾರಕ್ಕೆ ಬಂದರೆ 16GB RAM ಮತ್ತು 1TB ವರೆಗೆ ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಬಹುದು ಎಂದು ನಂಬಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ 1.5K ರೆಸಲ್ಯೂಶನ್ ಹೊಂದಿರುವ 120Hz ರಿಪ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇಯನ್ನು ಈ ಫೋನ್‌ನಲ್ಲಿ ನೀವು ನೋಡಬಹುದಾಗಿದೆ. ಜೊತೆಗೆ 100W ವೈರ್ಡ್ ಚಾರ್ಜಿಂಗ್ ಅಡಾಪ್ಟರ್‌ನಿಂದ ಬೆಂಬಲಿತವಾದ 5,500mAh ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನಲ್ಲಿ ಇರಲಿದೆ ಎಂದು ಲೀಕ್‌ ಆದ ಮಾಹಿತಿ ಮೂಲಕ ತಿಳಿದುಬಂದಿದೆ.

ಇನ್ನು ಫೋನ್ ಗ್ಲಾಸ್ ಬ್ಯಾಕ್ ಮತ್ತು ಪ್ಲಾಸ್ಟಿಕ್ ಫ್ರೇಮ್‌ನೊಂದಿಗೆ ಬರುವ ನಿರೀಕ್ಷೆಯಿದ್ದು, ಇದು ಎರಡು ಮಾದರಿಗಳಲ್ಲಿ ರವಾನೆಯಾಗಬಹುದು ಅಂದರೆ ಒಂದು ಫ್ಲಾಟ್ ವಿನ್ಯಾಸದೊಂದಿಗೆ ಕಾಣಿಸಿಕೊಂಡರೆ ಇನ್ನೊಂದು ಕರ್ವ್ಡ-ಅಂಚಿನ ಬಾಡಿಯೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಈ ವೇಳೆ ಈ ಹಿಂದಿನ ಮಾದರಿಯಾದ ಒನ್‌ಪ್ಲಸ್‌ ಏಸ್ 2V ಬಗ್ಗೆ ತಿಳಿಯುವುದಾದರೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್‌ ಬಲದೊಂದಿಗೆ ಕಾಣಿಸಿಕೊಂಡಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ, 80W ಚಾರ್ಜಿಂಗ್ ಬೆಂಬಲ, 64+8+2MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರ ಜೊತೆಗೆ ಈ ಫೋನ್‌ನಲ್ಲಿ 6.74 ಇಂಚಿನ 1.5K OLED ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ಇನ್ನೂ ಲಾಂಚ್ ಆಗದ ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಲಿದೆಯಂತೆ ಈ ಒನ್‌ಪ್ಲಸ್ ಫೋನ್

ಒನ್‌ಪ್ಲಸ್‌ ವಾಚ್ 2 ಲಾಂಚ್‌: ಈ ಎಲ್ಲಾ ಬೆಳವಣಿಗೆ ನಡುವೆ ಈಗ ಒನ್‌ಪ್ಲಸ್‌ ವಾಚ್‌ ಸಹ ಅನಾವರಣ ಆಗಿದೆ. ಈ ಸ್ಮಾರ್ಟ್‌ವಾಚ್‌ ಬೆಲೆ 24,999 ರೂ.ಗಳಿಂದ ಆರಂಭ ಆಗಲಿದ್ದು, 100 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಮತ್ತು ಸ್ನಾಪ್‌ಡ್ರಾಗನ್ W5 ಪ್ರೊಸೆಸರ್ ಅನ್ನು ಈ ವಾಚ್‌ ಹೊಂದಿದೆ. ಈ ವಾಚ್‌ ಅನ್ನು ಬಾರ್ಸಿಲೋನಾದಲ್ಲಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ರಲ್ಲಿ ಲಾಂಚ್‌ ಮಾಡಲಾಗಿದ್ದು, ಇದರ ಪೂರ್ವವರ್ತಿಗಿಂತ ಹಲವಾರು ನವೀಕರಣಗಳೊಂದಿಗೆ ಕಾಣಿಸಿಕೊಂಡಿದೆ.

Best Mobiles in India

English summary
OnePlus Ace 3V smartphone is currently in a lot of discussion. OnePlus has already unveiled a lot of smartphones, and this phone will stand out among them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+