Home
ಸುದ್ದಿಜಾಲ

OnePlus: ಒನ್‌ಪ್ಲಸ್‌ನ ಈ ಮುಂಬರುವ ಫೋನ್‌ ಫೀಚರ್ಸ್ ಲೀಕ್‌! ಪ್ರೊಸೆಸರ್‌ ಯಾವುದು?

ಒನ್‌ಪ್ಲಸ್‌ನ (OnePlus) ಯಾವುದೇ ಫೋನ್‌ಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ಪ್ರೀಮಿಯಂ ಅನುಭವ ಪಡೆಯಲು ಗ್ರಾಹಕರು ಈ ಫೋನ್‌ಗಳ ಕಡೆ ಹೆಚ್ಚು ಮುಖ ಮಾಡುತ್ತಾರೆ. ಈ ಬೆಳವಣಿಗೆ ನಡುವೆ ಒನ್‌ಪ್ಲಸ್‌ನ ಮುಂಬರುವ ಈ ಫೋನ್‌ನ ಕೆಲವು ಪ್ರಮುಖ ಫೀಚರ್ಸ್‌ ಲೀಕ್‌ ಆಗಿವೆ.

ಹೌದು, ಒನ್‌ಪ್ಲಸ್ ಕೆಲವು ದಿನಗಳ ಹಿಂದಷ್ಟೇ ಭಾರತದಲ್ಲಿ ಒನ್ ಪ್ಲಸ್‌ 12 ಸ್ಮಾರ್ಟ್‌ಫೋನ್‌ (One Plus 12 smartphone) ಹಾಗೂ ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿತ್ತು. ಇದು ಆಗಿ ಕೆಲವೇ ದಿನಗಳು ಕಳೆದಿದ್ದು, ಈಗ ಒನ್‌ಪ್ಲಸ್ ಏಸ್‌ 3V ಸ್ಮಾರ್ಟ್‌ಫೋನ್‌ (OnePlus Ace 3V smartphone) ಬಗ್ಗೆ ಮಾಹಿತಿಗಳು ಎಲ್ಲಾ ಕಡೆ ಭಾರೀ ಚರ್ಚೆ ಆಗುತ್ತಿವೆ. ಈ ಮೂಲಕ ಗ್ರಾಹಕರಲ್ಲಿ ಭಾರೀ ಕುತೂಹಲ ಉಂಟಾಗಿದೆ. ಹಾಗಿದ್ರೆ, ಈ ಮುಂಬರುವ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ ಅನ್ನೋದನ್ನು ತಿಳಿದುಕೊಳ್ಳಿ.

ಒನ್‌ಪ್ಲಸ್‌ನ ಈ ಮುಂಬರುವ ಫೋನ್‌ ಫೀಚರ್ಸ್ ಲೀಕ್‌! ಪ್ರೊಸೆಸರ್‌ ಯಾವುದು?

ಒನ್‌ಪ್ಲಸ್ ಏಸ್‌ 3V ಸ್ಮಾರ್ಟ್‌ಫೋನ್‌: ಒನ್‌ಪ್ಲಸ್ ಫೋನ್‌ಗಳಿಗೆ ಬಹು ಬೇಡಿಕೆ ಇರುವಾಗಲೇ ಇದೀಗ ಒನ್‌ಪ್ಲಸ್ ಮತ್ತೊಂದು ಹೊಸ ಫೋನ್‌ ಅನಾವರಣಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಅದುವೇ ಒನ್‌ಪ್ಲಸ್ ಏಸ್‌ 3V. ಈ ಫೋನ್‌ ಅನ್ನು ಒನ್‌ಪ್ಲಸ್ ನಾರ್ಡ್‌ 3 (OnePlus Nord 3) ಉತ್ತರಾಧಿಕಾರಿಯಾಗಿ ಮರುಬ್ಯಾಡ್ಜ್ ಮಾಡಬಹುದು ಎಂದೂ ಸಹ ಹೇಳಲಾಗುತ್ತಿದೆ.

ಈ ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್‌ ಇದೀಗ ಲೀಕ್‌ ಆಗಿದ್ದು, ಅದರಂತೆ ಈ ಫೋನ್ ಅನ್ನು ಚೀನಾದಲ್ಲಿ ಮೊದಲು ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಜಾಗತಿಕವಾಗಿ ಈ ಫೋನ್ ಒನ್‌ಪ್ಲಸ್‌ ನಾರ್ಡ್‌ 4 ಅಥವಾ ನಾರ್ಡ್ 5 (OnePlus Nord 4 or Nord 5) ನಂತೆ ಅನಾವರಣ ಆಗಬಹುದು ಎಂದೂ ಸಹ ಹೇಳಲಾಗುತ್ತಿದೆ. ಯಾಕೆಂದರೆ ಕಳೆದ ವರ್ಷದ ನಾರ್ಡ್‌ 3 ಅನ್ನು ಒನ್‌ಪ್ಲಸ್‌ ಏಸ್ 2V (OnePlus Ace 2V) ಎಂದು ಮರುನಾಮಕರಣ ಮಾಡಲಾಗಿತ್ತು.

ಒನ್‌ಪ್ಲಸ್‌ನ ಈ ಮುಂಬರುವ ಫೋನ್‌ ಫೀಚರ್ಸ್ ಲೀಕ್‌! ಪ್ರೊಸೆಸರ್‌ ಯಾವುದು?

Weibo ನಲ್ಲಿ ಈ ಸ್ಮಾರ್ಟ್‌ಫೋನ್‌ ಸಂಬಂಧ ಕೆಲವು ಮಾಹಿತಿಗಳು ಲೀಕ್‌ ಆಗಿವೆ. ಅದರ ಪ್ರಕಾರ ಈ ಫೋನ್ 120Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 1.5K ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್‌ 3 ಪ್ರೊಸೆಸರ್‌ನಲ್ಲಿ (Qualcomm Snapdragon 7 Gen 3 processor) ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಈ ಫೋನ್‌ 100W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಬಹುದು ಎಂದು ತಿಳಿದುಬಂದಿದ್ದು, ಲೀಕ್‌ ಮಾಹಿತಿ ಪ್ರಕಾರ ಈ ಫೋನ್ ಗ್ಲಾಸ್ ಬ್ಯಾಕ್ ಪ್ಯಾನಲ್‌ ಮತ್ತು ಪ್ಲಾಸ್ಟಿಕ್ ಫ್ರೇಮ್ ಅನ್ನು ಹೊಂದಬಹುದು ಎನ್ನಲಾಗಿದೆ. ಹಾಗೆಯೇ ಕರ್ವ್ಡ್ ಮತ್ತು ಚಪ್ಪಟೆಯ ಎರಡೂ ಶೈಲಿಯಲ್ಲೂ ಕಾಣಿಸಿಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದೇ ವೇಳೆ ನಾವು ಇದರ ಹಿಂದಿನ ಸರಣಿಯ ಅಂದರೆ ಒನ್‌ಪ್ಲಸ್‌ ಏಸ್ 2V ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿಯುವುದಾದರೆ. ಈ ಫೋನ್ FHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 1450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್‌ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಒನ್‌ಪ್ಲಸ್‌ನ ಈ ಮುಂಬರುವ ಫೋನ್‌ ಫೀಚರ್ಸ್ ಲೀಕ್‌! ಪ್ರೊಸೆಸರ್‌ ಯಾವುದು?

ಇದರೊಂದಿಗೆ 80W ಸೂಪರ್ ವೂಕ್‌ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್‌ 13 ಜೊತೆಗೆ ಕಲರ್‌ಓಎಸ್‌ 13 ಅನ್ನು ಇದು ರನ್‌ ಮಾಡಲಿದೆ. ಜೊತೆಗೆ 64MP ಓಮ್ನಿವಿಷನ್ OV64M ಪ್ರಾಥಮಿಕ ಸೆನ್ಸರ್‌, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 16MP ಕ್ಯಾಮೆರಾ ಹೊಂದಿದೆ.

ಈ ಮೂಲಕ ಈ ಎರಡೂ ಫೋನ್‌ಗಳನ್ನು ಹೋಲಿಕೆ ಮಾಡಿ ನೋಡಿದರೆ ಹೊಸ ಫೋನ್‌ ಸ್ನಾಪ್‌ಡ್ರಾಗನ್ ಮಿಡ್‌ ರೇಂಜ್‌ ಚಿಪ್, ಹೆಚ್ಚಿನ ರೆಸ್ ಡಿಸ್‌ಪ್ಲೇ ಮತ್ತು ಫಾಸ್ಟ್‌ ಚಾರ್ಜಿಂಗ್ ವೇಗದೊಂದಿಗೆ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತೋರುತ್ತದೆ. ಅದಾಗ್ಯೂ ಈ ಸ್ಮಾರ್ಟ್‌ಫೋನ್‌ನ ನಿಖರ ಮಾಹಿತಿಯನ್ನು ಪಡೆಯಲು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
OnePlus had unveiled the One Plus 12 smartphone and new earbuds in India a few days ago and now information about the OnePlus Ace 3V smartphone is being heavily discussed everywhere.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+