ಈ ಒಪ್ಪೋ ಮತ್ತು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಳಸುವವರಿಗೆ ಸಿಹಿಸುದ್ದಿ!
ಜನಪ್ರಿಯ ಒಪ್ಪೋ ಮತ್ತು ಒನ್‌ಪ್ಲಸ್ ಈ ಎರಡು ಬ್ರ್ಯಾಂಡ್‌ಗಳ ಹಲವಾರು ಫೋನ್‌ಗಳಿಗೆ ಕೆಲವು AI- ಚಾಲಿತ ಫೀಚರ್ಸ್‌ಗಳ ಬರುವ ಬಗ್ಗೆ ಒಪ್ಪೋ ಘೋಷಿಸಿದೆ. ಸಂಸ್ಥೆಯ ವೈಬೊ ಪೋಸ್ಟ್‌ಗಳ ಪ್ರಕಾರ, ಹೊಸ ಆಂಡ್ರಾಯ್ಡ್ 14 ಆಧಾರಿತ ಕಲರ್ ಓಎಸ್ ಅಪ್‌ಡೇಟ್ ಸಪೋರ್ಟ್‌ನ ಫೋನ್‌ಗಳಿಗೆ 100 ಹೊಸ AI ಫೀಚರ್ಸ್ ಲಭ್ಯ ಆಗಲಿವೆ.
ಹೌದು, ಒಪ್ಪೋ ಹಾಗೂ ಒನ್‌ಪ್ಲಸ್ ಸಂಸ್ಥೆಗಳು ಚೀನಾದಲ್ಲಿ ತಮ್ಮ ಕೆಲವು ಫೋನ್‌ಗಳು AI ಫೀಚರ್ಸ್ ಹೊರತರುತ್ತವೆ ಎನ್ನಲಾಗಿದೆ. ಆದರೆ ಈ ನೂತನ AI ಫೀಚರ್ಸ್‌ಗಳು ಜಾಗತಿಕ ಆವೃತ್ತಿಗಳಲ್ಲಿಯೂ ಬರುತ್ತದೆಯೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಫೀಚರ್ಸ್‌ಗಳಲ್ಲಿ ಪ್ರಮುಖವಾಗಿ AI Deletion ಮತ್ತು AI Call Summary ಸೇರಿವೆ.

ಇನ್ನು AI Deletion ಫೀಚರ್ಸ್ ಗೂಗಲ್‌ನ ಮ್ಯಾಜಿಕ್ ಎರೇಸರ್ ಮತ್ತು ಸ್ಯಾಮ್‌ಸಂಗ್‌ನ ಆಬ್ಜೆಕ್ಟ್ ಎರೇಸರ್ ಫೀಚರ್ಸ್ ಅನ್ನೇ ಬಹುತೇಕ ಹೋಲುತ್ತದೆ. ಇನ್ನುಳಿದಂತೆ ಇತರೆ ಕೆಲವು AI ಫೀಚರ್ಸ್ ಹಾಗೂ AI ಫೀಚರ್ಸ್ ಸಪೋರ್ಟ್ ಮಾಡಲಿರುವ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹಾಗೆಯೇ ನೂತನ AI Call Summary ಸೌಲಭ್ಯವು ಫೋನ್ ಕರೆಗಳನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಪ್ರಮುಖ ಅಂಶಗಳನ್ನು ಬುದ್ಧಿವಂತಿಕೆಯಿಂದ ವಿಶ್ಲೇಷಿಸಲು, ಲಿಪ್ಯಂತರಿಸಲು ಮತ್ತು ಹೈಲೈಟ್ ಮಾಡಲು ವೈಶಿಷ್ಟ್ಯವು ನಿಮ್ಮ ಫೋನ್ ಕರೆಗಳನ್ನು ಆಲಿಸಬಹುದು.

ಅದೇ ರೀತಿ AI Call Summary ಫೀಚರ್ ಬಳಕೆದಾರರ ಕರೆ ಸಂಭಾಷಣೆಗಳ ಆಧಾರದ ಮೇಲೆ ರಿಮೈಂಡರ್ ಅನ್ನು ಹಾಗೂ ಮಾಡಬೇಕಾದ ಕೆಲಸಗಳ ಪಟ್ಟಿಗಳನ್ನು ಸಹ ರಚಿಸುವ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. AI ಫೀಚರ್ಸ್ ಸಪೋರ್ಟ್ ಮಾಡಲಿರುವ ಒಪ್ಪೋ ಹಾಗೂ ಒನ್‌ಪ್ಲಸ್‌ನ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ. ಮುಂದೆ ಓದಿರಿ.
ಒಪ್ಪೋ ಫೋನ್‌ಗಳ ಲಿಸ್ಟ್ ಇಲ್ಲಿದೆ
ಒಪ್ಪೋ ಫೈಂಡ್ X7
ಒಪ್ಪೋ ಫೈಂಡ್ X7 ಅಲ್ಟ್ರಾ
ಒಪ್ಪೋ ಫೈಂಡ್ X6
ಒಪ್ಪೋ ಫೈಂಡ್ X6 ಪ್ರೊ
ಒಪ್ಪೋ ರೆನೋ 11
ಒಪ್ಪೋ ರೆನೋ 11 ಪ್ರೊ
ಒಪ್ಪೋ ರೆನೋ 10
ಒಪ್ಪೋ ರೆನೋ 10 ಪ್ರೊ
ಒಪ್ಪೋ ರೆನೋ 10 ಪ್ರೊ+
ಒಪ್ಪೋ ಫೈಂಡ್ N3
ಒಪ್ಪೋ ಫೈಂಡ್ N3 ಫ್ಲಿಪ್
ಒನ್‌ಪ್ಲಸ್ ಫೋನಿನ ಲಿಸ್ಟ್ ಇಲ್ಲಿದೆ
ಒನ್‌ಪ್ಲಸ್ 12
ಒನ್‌ಪ್ಲಸ್ 11
ಒನ್‌ಪ್ಲಸ್ ಏಸ್ 3
ಒನ್‌ಪ್ಲಸ್ ಏಸ್ 2
ಒನ್‌ಪ್ಲಸ್ ಏಸ್ 2 ಪ್ರೊ
ಒನ್‌ಪ್ಲಸ್ 12 ಮೊಬೈಲ್ ಫೀಚರ್ಸ್
ಒನ್‌ಪ್ಲಸ್ 12 ಮೊಬೈಲ್ 6.82 ಇಂಚಿನ ProXDR ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1440 x 3168 ಪಿಕ್ಸೆಲ್ ಸ್ಕ್ರೀನ್ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಅನ್ನು ಒದಗಿಸುತ್ತದೆ. ಈ ನೂತನ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಪವರ್ ಪವರ್ ಅನ್ನು ಪಡೆದಿದ್ದು, CPU, 3.2GHz ನಲ್ಲಿ ಪ್ರೈಮ್ ಕೋರ್ ಅನ್ನು ಒಳಗೊಂಡಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ನ ಸೋನಿ LYT 808 ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಫೋನ್ 5400 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 100W ಸೂಪರ್‌ವೂಕ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.


Click it and Unblock the Notifications








