SmartTV: ಶಾಕಿಂಗ್... ಇನ್ಮುಂದೆ ಈ ದೈತ್ಯ ಕಂಪೆನಿಗಳ ಸ್ಮಾರ್ಟ್‌ಟಿವಿಗಳ ಉತ್ಪಾದನೆ ಇಲ್ಲ! ಸ್ಥಗಿತಕ್ಕೆ ಕಾರಣವೇನು?
ಸ್ಮಾರ್ಟ್‌ಟಿವಿ(SmartTV) ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಲ್ಲೂ ಕೆಲವು ಹೊಸ ಹೊಸ ಸ್ಮಾರ್ಟ್‌ವಿಟಿಗಳು ಸಹ ಲಾಂಚ್ ಆಗುತ್ತಿದ್ದು, ಈ ಎಲ್ಲಾ ಬೆಳವಣಿಗೆ ನಡುವೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಇನ್ಮುಂದೆ ಭಾರತದಲ್ಲಿ ಟೆಕ್ ದೈತ್ಯರಾದ ಒನ್‌ಪ್ಲಸ್ ಹಾಗೂ ರಿಯಲ್‌ಮಿ (OnePlus and Realme) ಕಂಪೆನಿಗಳು ಸ್ಮಾರ್ಟ್‌ಟಿವಿಗಳನ್ನು ತಯಾರಿಸುವುದನ್ನು ಸ್ಥಗಿತಗೊಳಿಸಲಿದೆ. ಈ ನಡುವೆ ಶಿಯೋಮಿ, ಟಿಸಿಎಲ್ ಸೇರಿದಂತೆ ಅನೇಕ ದೇಶೀಯ ಸ್ಮಾರ್ಟ್‌ಟಿವಿಗಳು ಅಭಿವೃದ್ಧಿ ಆಗುತ್ತಿರುವ ಬೆನ್ನಲ್ಲೇ ಒನ್‌ಪ್ಲಸ್ ಹಾಗೂ ರಿಯಲ್‌ಮಿಗೆ ಕೆಟ್ಟ ಕಾಲ ವಕ್ಕರಿಸಿದೆ. ಹಾಗಿದ್ರೆ ಯಾಕೆ ಈ ಕಂಪೆನಿಗಳು ಈ ನಿರ್ಧಾರ ಮಾಡಿವೆ?, ಇತರೆ ಬ್ರ್ಯಾಂಡ್‌ಗಳಿಂದ ಆದ ಹೊಡೆತ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್, ರಿಯಲ್‌ಮಿ ಸ್ಮಾರ್ಟ್‌ಟಿವಿ ಸ್ಥಗಿತ: ಶಿಯೋಮಿ, ಟಿಸಿಎಲ್ ಹಾಗೂ ದೇಶೀಯ ಕೊಡುಗೆಗಳಂತಹ ಇತರ ಬ್ರ್ಯಾಂಡ್‌ಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಉದ್ಯಮದ ಹೊರತಾಗಿಯೂ ಒನ್‌ಪ್ಲಸ್ ಮತ್ತು ರಿಯಲ್‌ಮಿ ಭಾರತದಲ್ಲಿ ಟಿವಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ವಿಷಯ ಏನೆಂದರೆ ಈ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಅದ್ಭುತ ಮಾರಾಟದ ನಡುವೆಯೂ ಈ ಬೆಳವಣಿಗೆ ಸಂಭವಿಸಿರುವುದು.
ಇನ್ನು ಈ ನಿರ್ಧಾರದ ಬಗ್ಗೆ ಈ ಕಂಪೆನಿಗಳು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ವರದಿಗಳಿಂದ ಇದು ಪಕ್ಕಾ ಎನ್ನಲಾಗಿದೆ. ಚೀನಾದ ವ್ಯವಹಾರಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ವರದಿಗಳ ನಡುವೆ ಎರಡು ಟೆಕ್ ದೈತ್ಯರು ದೂರದರ್ಶನ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸ್ಮಾರ್ಟ್‌ಫೋನ್ ಕಾರ್ಯಾಚರಣೆ ಸ್ಥಗಿತವಿಲ್ಲ: ಈ ವಿಷಯದಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಕ್ರಿಕೆಟ್ ವಿಶ್ವಕಪ್ ಮತ್ತು ಹಬ್ಬದ ಮಾರಾಟದಂತಹ ವಿಶೇಷ ಸಂದರ್ಭಗಳು ಭಾರತದಲ್ಲಿ ಜರುಗುತ್ತಿದ್ದರೂ ಸಹ ಸ್ಮಾರ್ಟ್‌ಟಿವಿ ಮಾರ್ಕೆಟ್ ಬೆಳವಣಿಗೆಯನ್ನು ಅನುಭವಿಸುತ್ತಿರುವ ಟೈಮ್‌ನಲ್ಲೇ ಈ ನಿರ್ಗಮನದ ನಿರ್ಧಾರ ಪ್ರಕಟವಾಗಿದ್ದು, ಈ ಕಂಪೆನಿಗಳ ಸ್ಮಾರ್ಟ್‌ಟಿವಿ ಪ್ರಿಯರಿಗೆ ಬೇಸರ ತರಿಸಿದೆ.
ತಮ್ಮ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಎರಡು ಕಂಪನಿಗಳು ಚೀನಾದ ವ್ಯವಹಾರಗಳ ಮೇಲೆ ತೀವ್ರವಾದ ಒತ್ತಡವನ್ನು ಉಲ್ಲೇಖಿಸಿವೆ. ಈ ನಡುವೆ ಶಿಯೋಮಿ ಈ ವಿಭಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಮತ್ತೊಂದು ಸಂತಸದ ವಿಷಯವಾಗಿದೆ. ಈ ಬಗ್ಗೆ ಟೈಮ್ಸ್ ಆಪ್ ಇಂಡಿಯಾ ಸಹ ವರದಿ ಮಾಡಿದ್ದು, ಅದರಂತೆ ಒನ್‌ಪ್ಲಸ್ ಮತ್ತು ರಿಯಲ್‌ಮಿ ದೂರದರ್ಶನ ವಿಭಾಗದಿಂದ ಹಿಂದೆ ಸರಿಯಲು ನಿರ್ಧರಿಸಿವೆ ಎಂದು ಉದ್ಯಮದ ಮೂಲಗಳು ಬಹಿರಂಗಪಡಿಸಿವೆ.

ಇನ್ನು ಈ ಎರಡೂ ಕಂಪನಿಗಳು ಈ ಹಿಂದೆ ಟೆಲಿವಿಷನ್ ವಲಯದಲ್ಲಿ ಮಾರಾಟದ ಚಾನೆಲ್‌ಗಳನ್ನು ನಿರ್ಮಿಸಲು ಮತ್ತು ಬ್ರ್ಯಾಂಡ್ ಗುರುತಿಸುವಿಕೆಯಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಿದ್ದವು. ಇಂಟರ್ನೆಟ್‌ನ ಪ್ರಸರಣ ಮತ್ತು ಕೈಗೆಟುಕುವ ಡೇಟಾ ದರಗಳಿಂದ ಈ ವರ್ಗವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಅನುಭವಿಸಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ನಂತಹ ಸ್ಟ್ರೀಮಿಂಗ್ ಸೇವೆಗಳ ಹೆಚ್ಚುತ್ತಿರುವ ಜನಪ್ರಿಯತೆಯು ಸ್ಮಾರ್ಟ್‌ಟಿವಿಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಗೆ ಮಾಡಿದೆ.
ಇದರೊಂದಿಗೆ ಭಾರತೀಯ ದೂರದರ್ಶನ ಮಾರುಕಟ್ಟೆಯಲ್ಲಿ, ಎಲ್‌ಜಿ, ಸ್ಯಾಮ್‌ಸಂಗ್, ಸೋನಿ, ಹಾಗೂ ಪ್ಯಾನಾಸೋನಿಕ್ ನಂತಹ ಬ್ರ್ಯಾಂಡ್‌ಗಳು ಚೀನಾದಿಂದ ಶಿಯೋಮಿ ಮತ್ತು ಟಿಸಿಎಲ್ ನಂತಹ ಹೊಸ ಪ್ರವೇಶಗಳೊಂದಿಗೆ ಒಂದುಗೂಡಿ ಮುನ್ನಡೆಯುತ್ತಿವೆ. ಹೆಚ್ಚುವರಿಯಾಗಿ, Vu ಮತ್ತು ಥಾಮ್ಸನ್‌ನಂತಹ ದೇಶೀಯ ಬ್ರ್ಯಾಂಡ್‌ಗಳು ಸಹ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿಕೊಳ್ಳುತ್ತಿವೆ.

ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ತ್ರೈಮಾಸಿಕ ಸ್ಮಾರ್ಟ್ ಹೋಮ್ ಡಿವೈಸಸ್ ಟ್ರ್ಯಾಕರ್‌ನ ಮಾಹಿತಿಯ ಪ್ರಕಾರ, ಭಾರತವು 2023 ರ ಮೊದಲಾರ್ಧದಲ್ಲಿ 4.5 ಮಿಲಿಯನ್ ಟಿವಿಗಳ ಸಾಗಣೆಗೆ ಸಾಕ್ಷಿಯಾಗಿದೆ.ಇದು ವರ್ಷದಿಂದ ವರ್ಷಕ್ಕೆ 8% ಹೆಚ್ಚಳವಾಗಿದೆ. ಅದರಲ್ಲೂ ಇ-ಕಾಮರ್ಸ್ ಸೈಟ್‌ಗಳು ನಡೆಸುವ ವಿಶೇಷ ಸೇಲ್‌ಗಳು, ಹೊಸ ಸ್ಮಾರ್ಟ್‌ಟಿವಿ ಅನಾವರಣ ಹಾಗೂ ಸೇಲ್, ಹಬ್ಬದ ಸೀಸನ್ ಪ್ರಾರಂಭವಾಗುವ ಮೊದಲು ಹಳೆಯ ಚಾನೆಲ್ ದಾಸ್ತಾನುಗಳ ತೆರವು ಸ್ಮಾರ್ಟ್‌ಟಿವಿಗಳ ಬೆಳವಣಿಗೆಗೆ ಸಾಕ್ಷಿಯಾಗಿದೆ.


Click it and Unblock the Notifications








