OnePlus: ಒನ್‌ಪ್ಲಸ್‌ಗೂ ಭಾರತಕ್ಕೂ 10 ವರ್ಷಗಳ ನಂಟು! ಈ ಫೋನ್‌ಗಳೇ ನೋಡಿ ಹೆಚ್ಚು ಸೇಲ್ ಆಗಿದ್ದು!
ಒನ್‌ಪ್ಲಸ್ (OnePlus) ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಫೋನ್‌ಗಳು ನೇರವಾಗಿ ಆಪಲ್ ಹಾಗೂ ಸ್ಯಾಮ್‌ಸಂಗ್‌ಗೆ (Apple, Samsung) ನೇರ ಪೈಪೋಟಿ ನೀಡಲಿವೆ. ಅದರಂತೆ ಈಗಾಗಲೇ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಈ ಫೋನ್‌ಗಳಿಗೆ ವಿವಿಧ ರೀತಿಯಲ್ಲಿ ಆಫರ್ ಘೋಷಣೆ ಮಾಡಲಾಗಿದ್ದು, ಈ ಖುಷಿಯ ಜೊತೆಗೆ ಒನ್‌ಪ್ಲಸ್ ತನ್ನೆಲ್ಲಾ ಗ್ರಾಹಕರಿಗೆ ಮತ್ತೊಂದು ಸಂತಸದ ವಿಚಾರ ತಿಳಿಸಿದೆ.
ಹೌದು, ಒನ್‌ಪ್ಲಸ್ ಇದೀಗ 10 ವರ್ಷಗಳ ವಾರ್ಷಿಕೋತ್ಸವವನ್ನು (OnePlus Celebrates 10 Year Anniversary) ಆಚರಣೆ ಮಾಡಲು ಮುಂದಾಗಿದೆ. ಈ ವೇಳೆ ಒನ್‌ಪ್ಲಸ್ ನಾರ್ಡ್ CE 3 ಲೈಟ್ (OnePlus Nord CE 3 Lite) 2023 ರಲ್ಲಿ ಅಮೆಜಾನ್ ನಲ್ಲಿ ಹೆಚ್ಚು ಮಾರಾಟವಾಗುವ ಫೋನ್ ಎಂದು ಉಲ್ಲೇಖ ಮಾಡಿದ್ದು, ಈ ಫೋನ್ ಸಾಕಷ್ಟು ಅಫರ್ ಮೂಲಕ ಗ್ರಾಹಕರಿಗೆ ಭಿನ್ನ ಪ್ರಯೋಜನ ನೀಡುತ್ತಿದೆ. ಹಾಗಿದ್ರೆ, ಬನ್ನಿ ಈ ಫೋನ್ ಹೊರತುಪಡಿಸಿ ಬೇರೆ ಯಾವ ಫೋನ್‌ಗೆ ಹೆಚ್ಚಿನ ಬೇಡಿಕೆ ಇದೆ?, ಈ ಫೋನ್‌ಗಳ ಫೀಚರ್ಸ್ ಏನು ಅನ್ನೋದನ್ನು ನೋಡೋಣ.

ಒನ್‌ಪ್ಲಸ್ ಇದೀಗ ಒನ್‌ಪ್ಲಸ್ 12 ಮತ್ತು ಒನ್‌ಪ್ಲಸ್ 12R ( OnePlus 12, OnePlus 12R) ಅನ್ನು ಅನಾವರಣಗೊಳಿಸಲು 'ಸ್ಮೂತ್ ಬಿಯಾಂಡ್ ಬಿಲೀಫ್' ಕಾರ್ಯಕ್ರಮವನ್ನು ಜನವರಿಯಲ್ಲಿ ಭಾರತದಲ್ಲಿ ಆಯೋಜಿಸಲು ಸಿದ್ಧವಾಗಿದೆ. ಈ ಮೂಲಕ ಚೀನೀ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಭಾರತದಲ್ಲಿ ತನ್ನ 10 ವರ್ಷಗಳ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಜೊತೆಗೆ ಅಮೆಜಾನ್‌ನೊಂದಿಗೆ ಪಾಲುದಾರಿಕೆಯ ಸಂಭ್ರಮವನ್ನೂ ಸಹ ಆಚರಿಸುತ್ತಿದೆ.
ಅಮೆಜಾನ್ ಇಂಡಿಯಾದಲ್ಲಿ (Amazon India) ಒನ್‌ಪ್ಲಸ್ 11R 5G (OnePlus 11R 5G) ಮತ್ತು ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸೇಲ್ ಆಗಿದ್ದು, ದಾಖಲೆಯನ್ನೆ ಬರೆದಿವೆ. ಒನ್‌ಪ್ಲಸ್ ಹೇಳುವಂತೆ ಒನ್‌ಪ್ಲಸ್ 11R 5G ಸ್ಮಾರ್ಟ್‌ಫೋನ್ 30,000 ರೂ.ಗಳ ಬೆಲೆ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಆಂಡ್ರಾಯ್ಡ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಈ ಕ್ಷಣಕ್ಕೂ ಸಹ ಈ ಫೋನ್‌ಗೆ ಭರ್ಜರಿ ಬೇಡಿಕೆ ಇದೆಯಂತೆ.

ಇನ್ನು ಬುಧವಾರ (ಡಿಸೆಂಬರ್ 20) ಪತ್ರಿಕಾ ಪ್ರಕಟಣೆ ಮೂಲಕ ಒನ್‌ಪ್ಲಸ್ ತನ್ನ 10 ವರ್ಷಗಳ ವಾರ್ಷಿಕೋತ್ಸವವನ್ನು ಘೋಷಣೆ ಮಾಡಿದ್ದು, ಅಮೆಜಾನ್ ಇಂಡಿಯಾದೊಂದಿಗಿನ ತನ್ನ 10 ವರ್ಷಗಳ ಪಾಲುದಾರಿಕೆಯ ಬಗ್ಗೆ ಈ ವೇಳೆ ಉಲ್ಲೇಖ ಮಾಡಿದೆ. ಇದರೊಂದಿಗೆ ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಸ್ಮಾರ್ಟ್‌ಫೋನ್ ಸಹ ಎಲ್ಲಾ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ ಎಂದು ತಿಳಿಸಲಾಗಿದೆ.
ಇನ್ನು ಒನ್‌ಪ್ಲಸ್ 11R 5G ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಬಲ ಹೊಂದಿದ್ದು, ಇದರ ಪ್ರಾರಂಭಿಕ ಬೆಲೆ 39,999 ರೂ.ಗಳಾಗಿದೆ. ಹಾಗೆಯೇ ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಏಪ್ರಿಲ್‌ನಲ್ಲಿ ಅನಾವರಣ ಆಗಿದ್ದು, ಈ ಫೋನ್‌ನ ಆರಂಭಿಕ ಬೆಲೆ 19,999ರೂ.ಗಳಾಗಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನು ಒನ್‌ಪ್ಲಸ್ 2014 ರಲ್ಲಿ ಒನ್‌ಪ್ಲಸ್ ಒನ್(OnePlus One) ನ ಚೊಚ್ಚಲ ಪ್ರವೇಶದೊಂದಿಗೆ ನಮ್ಮ ದೇಶಕ್ಕೆ ಎಂಟ್ರಿ ಕೊಟ್ಟಿದೆ. ಅಂದಿನಿಂದ, ಅಮೆಜಾನ್ ಕಂಪನಿಯ ವಿಶೇಷ ಇ-ಕಾಮರ್ಸ್ ಪಾಲುದಾರನಾಗಿದೆ. ಪೀಟ್ ಲೌ ನೇತೃತ್ವದ ಬ್ರ್ಯಾಂಡ್ ಪ್ರಾರಂಭದಿಂದಲೂ ಇ-ಕಾಮರ್ಸ್ ಪಾಲುದಾರರ ಮೂಲಕ ದೇಶದಲ್ಲಿ 98.9 ಪ್ರತಿಶತ ಪಿನ್ ಕೋಡ್‌ಗಳಲ್ಲಿ 12 ಮಿಲಿಯನ್‌ಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡಿದೆ ಎಂದು ತಿಳಿಸಿದೆ.

ಅದರಂತೆ ಈಗ ಈ ವಾರ್ಷಿಕೋತ್ಸವವನ್ನು ಒನ್‌ಪ್ಲಸ್ ಜನವರಿ 23 ರಂದು ನವದೆಹಲಿಯಲ್ಲಿ 'ಸ್ಮೂತ್ ಬಿಯಾಂಡ್ ಬಿಲೀಫ್' (Smooth Beyond Belief) ಹೆಸರಲ್ಲಿ ಆಯೋಜನೆ ಮಾಡುತ್ತಿದ್ದು, ಈ ವೇಳೆ ಒನ್‌ಪ್ಲಸ್ 12 ಮತ್ತು ಒನ್‌ಪ್ಲಸ್ 12R ಅನ್ನು ಸಹ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇದರಲ್ಲಿ ಒನ್‌ಪ್ಲಸ್ 12 ಈಗಾಗಲೇ ಚೀನೀ ಮಾರುಕಟ್ಟೆಯಲ್ಲಿ ಲಭ್ಯವಿದೆ.


Click it and Unblock the Notifications








