Home
ಸುದ್ದಿಜಾಲ

OnePlus Buds 3: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಒನ್‌ಪ್ಲಸ್‌ ಬಡ್ಸ್‌ 3 ಲಾಂಚ್‌: ಭರ್ಜರಿ ಫೀಚರ್ಸ್‌, ಬೆಲೆ ಎಷ್ಟು?

ಒನ್‌ಪ್ಲಸ್‌ನ (OnePlus) ಬಹುನಿರೀಕ್ಷಿತ ಡಿವೈಸ್‌ಗಳು ಕೊನೆಗೂ ಲಾಂಚ್‌ ಆಗಿವೆ. ಲಾಂಚ್‌ಗೂ ಮುನ್ನವೇ ಒನ್‌ಪ್ಲಸ್ 12, ಒನ್‌ಪ್ಲಸ್ 12R (OnePlus 12, OnePlus 12R) ಸ್ಮಾರ್ಟ್‌ಫೋನ್‌ಗಳಿಗೆ ಇರುವ ರೀತಿಯಲ್ಲೇ ಒನ್‌ಪ್ಲಸ್‌ ಬಡ್ಸ್‌ 3 ಬಗ್ಗೆಯೂ ದೊಡ್ಡ ನಿರೀಕ್ಷೆ ಇತ್ತು. ಇದೀಗ ಈ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಲಾಗಿದೆ.

ಹೌದು, ಒನ್‌ಪ್ಲಸ್‌ ಇಂದು ದೆಹಲಿಯಲ್ಲಿ ಗ್ರಾಂಡ್ ಆನ್-ಗ್ರೌಂಡ್ ಈವೆಂಟ್ ಮೂಲಕ ಮುಂದಿನ ಪೀಳಿಗೆಯ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಒನ್‌ಪ್ಲಸ್‌ ಬಡ್ಸ್‌ 3 (OnePlus Buds 3) ಅನ್ನು ಲಾಂಚ್‌ ಮಾಡಿದೆ. 'ಸ್ಮೂತ್ ಬಿಯಾಂಡ್ ಬಿಲೀಫ್' ಎಂಬ ಶೀರ್ಷಿಕೆಯ ಈವೆಂಟ್‌ ನಲ್ಲಿ ಇವುಗಳನ್ನು ಲಾಂಚ್‌ ಮಾಡಲಾಗಿದ್ದು, ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಇನ್ಮುಂದೆ ಸುನಾಮಿ ಸೃಷ್ಟಿಸಲಿವೆ. ಹಾಗಿದ್ರೆ, ಭಾರತದಲ್ಲಿ ಲಾಂಚ್‌ ಆದ ಈ ಅತ್ಯಾಕರ್ಷಕ ಇಯರ್‌ಬಡ್ಸ್‌ನ ವಿಶೇಷ ಫೀಚರ್ಸ್‌ ಏನು?, ಇದರ ಬೆಲೆ ಎಷ್ಟು ಎಂಬಿತ್ಯಾದಿ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಒನ್‌ಪ್ಲಸ್‌ ಬಡ್ಸ್‌ 3 ಲಾಂಚ್‌:ಭರ್ಜರಿ ಫೀಚರ್ಸ್‌..

ಒನ್‌ಪ್ಲಸ್‌ ಬಡ್ಸ್‌ 3 ಇಯರ್‌ಬಡ್ಸ್ ಫೀಚರ್ಸ್‌ ‌: ಈ ಒನ್‌ಪ್ಲಸ್‌ ಬಡ್ಸ್ 3 ಬಡ್ಸ್ ಪ್ರೊ ಅನ್ನೇ ಹೋಲಲಿದೆ. ಆದರೆ ಭಿನ್ನತೆ ಏನೆಂದರೆ ಮೆಟಾಲಿಕ್ ಗ್ರೇ ಮತ್ತು ಸ್ಪ್ಲೆಂಡಿಡ್ ಬ್ಲೂ ಬಣ್ಣಗಳಲ್ಲಿ ಈ ಬಡ್ಸ್‌ ಕಾಣಿಸಿಕೊಂಡಿದೆ. ಪ್ರತಿ ಬಡ್ಸ್‌ 4.8g ತೂಕ ಹೊಂದಿದ್ದು, ಡೈನಾಮಿಕ್ ವಾಯ್ಸ್‌ ಗುಣಮಟ್ಟಕ್ಕಾಗಿ 6mm ಟ್ವೀಟರ್ ಡ್ಯುಯಲ್ ಡ್ರೈವರ್ ರಚನೆಯೊಂದಿಗೆ 10.4mm ವೂಫರ್ ಆಯ್ಕೆಯನ್ನು ಪಡೆದುಕೊಂಡಿವೆ.

ಇದರೊಂದಿಗೆ 110+/-1.3dB ನ ಸ್ಪೀಕರ್ ಸೂಕ್ಷ್ಮತೆ ಮತ್ತು 15Hz ನಿಂದ 40KHz ವರೆಗಿನ ವ್ಯಾಪಕ ಆವರ್ತನ ಶ್ರೇಣಿಯೊಂದಿಗೆ (wide frequency range) ಈ ಇಯರ್‌ಬಡ್‌ಗಳು ಹೆಚ್ಚಿನ ರೆಸಲ್ಯೂಶನ್ ಆಡಿಯೋ ಅನುಭವವನ್ನು ನೀಡಲಿವೆ. ಅಲ್ಲದೆ ಪ್ರತಿ ಇಯರ್‌ಬಡ್‌ಗೆ ಮೂರು ಮೈಕ್ರೊಫೋನ್‌ಗಳ ಆಯ್ಕೆ ನೀಡಲಾಗಿದ್ದು, ಈ ಮೂಲಕ ಬಳಕೆದಾರರು ಉತ್ತಮವಾದ ಶಬ್ದ ರದ್ದತಿ ಅನುಭವ ಪಡೆಯಬಹುದಾಗಿದೆ. ಇದು 49dB ವರೆಗೆ ಶಬ್ದ ಕಡಿತವನ್ನು ಮಾಡುತ್ತವೆ.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಒನ್‌ಪ್ಲಸ್‌ ಬಡ್ಸ್‌ 3 ಲಾಂಚ್‌:ಭರ್ಜರಿ ಫೀಚರ್ಸ್‌..

ಈ ಒನ್‌ಪ್ಲಸ್‌ ಬಡ್ಸ್ 3 ವಿಶೇಷವಾದ ಟಚ್‌ ಕಂಟ್ರೋಲ್‌ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು ಮ್ಯೂಸಿಕ್ ಅನ್ನು ವಿಭಿನ್ನ ರೀತಿಯಲ್ಲಿ ಕಂಟ್ರೋಲ್‌ ಮಾಡಬಹುದಾಗಿದೆ. ಅಲ್ಲದೆ ಕರೆಗಳಿಗೆ ಉತ್ತರಿಸಲು ಮತ್ತು ಶಬ್ದ ರದ್ದತಿ ಮತ್ತು ಟ್ರಾನ್ಫರೆನ್ಸಿ ಮೋಡ್‌ಗಳ ನಡುವೆ ಸುಲಭವಾಗಿ ಟಾಗಲ್ ಮಾಡಲು ಇದು ಅನುಮತಿಸುತ್ತದೆ. ಜಪಾನ್ ಆಡಿಯೋ ಸೊಸೈಟಿ (JAS) ಪ್ರಮಾಣೀಕರಿಸಿದ ಹೈ-ರೆಸ್ ಆಡಿಯೊ ಬೆಂಬಲವನ್ನು ಇದು ಬೆಂಬಲಿಸುತ್ತದೆ. ಪ್ರಮುಖವಾಗಿ ಐಚ್ಛಿಕ ಡ್ಯುಯಲ್ ಕನೆಕ್ಷನ್ ಮೋಡ್ ಒಂದೇ ಟೈಮ್‌ನಲ್ಲಿ ಎರಡು ಡಿವೈಸ್‌ಗಳೊಂದಿಗೆ ಬೆಂಬಲ ಸೌಲಭ್ಯ ನೀಡುತ್ತದೆ.

ಇದರೊಂದಿಗೆ ಹೆಚ್ಚಿನ ಅನುಕೂಲಕ್ಕಾಗಿ ಇಯರ್‌ಬಡ್‌ಗಳು ಸ್ಲೈಡಿಂಗ್ ವಾಲ್ಯೂಮ್ ಕಂಟ್ರೋಲ್‌ನೊಂದಿಗೆ ಕಾಣಿಸಿಕೊಂಡಿವೆ. ಅಂದರೆ ನೀವು ಸ್ಪೈಪ್‌ ಮಾಡುವ ಮೂಲಕ ಸೌಂಡ್‌ ಮೇಲೆ ಹಿಡಿತ ಸಾಧಿಸಬಹುದು. ಜೊತೆಗೆ ಈ ಬಡ್ಸ್‌ IP55 ಪ್ರಮಾಣೀಕರಣದೊಂದಿಗೆ ಕಾಣಿಸಿಕೊಂಡಿದ್ದು, ನೀರು ಮತ್ತು ಬೆವರು ನಿರೋಧಕವಾಗಿದೆ. ಇದರಿಂದಾಗಿ ನೀವು ಎಲ್ಲಾ ರೀತಿಯ ಚಟುವಟಿಕೆಯಲ್ಲೂ ಅಥವಾ ಎಲ್ಲಾ ರೀತಿಯ ವಾತಾವರಣದಲ್ಲೂ ಬಳಕೆ ಮಾಡಬಹುದಾಗಿದೆ.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಒನ್‌ಪ್ಲಸ್‌ ಬಡ್ಸ್‌ 3 ಲಾಂಚ್‌:ಭರ್ಜರಿ ಫೀಚರ್ಸ್‌..

ಒನ್‌ಪ್ಲಸ್‌ ಬಡ್ಸ್ 3 ಬ್ಯಾಟರಿ ಸಾಮರ್ಥ್ಯ: ಇಯರ್‌ಬಡ್‌ಗಳು ಉತ್ತಮ ಬ್ಯಾಟರಿ ಆಯ್ಕೆ ಪಡೆದುಕೊಂಡಿವೆ. ಬಡ್‌ಗಳು ANC ಸೇವೆಯೊಂದಿಗೆ 6.5 ಗಂಟೆಗಳ ಪ್ಲೇಬ್ಯಾಕ್ ಟೈಮ್‌ ಅನ್ನು ನೀಡಲಿದೆ. ಅಲ್ಲದೆ ಚಾರ್ಜಿಂಗ್ ಕೇಸ್‌ನೊಂದಿಗೆ ಬಳಕೆ ಮಾಡಲು ಮುಂದಾದರೆ 28 ಗಂಟೆಗಳವರೆಗೆ ಬ್ಯಾಕಪ್‌ ಪಡೆಯಲಿದೆ. ಒಟ್ಟಾರೆ ಸಾಮಾನ್ಯ ಬಳಕೆ 44 ಗಂಟೆಗಳವರೆಗೆ ಇರಲಿದೆ.

ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಹೊಂದಿದ್ದು, ಪ್ರತಿ ಇಯರ್‌ಬಡ್‌ 58mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ 520mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಈ ಬಡ್ಸ್‌ 10 ನಿಮಿಷದ ಚಾರ್ಚ್‌ನಲ್ಲಿ 7 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಅನ್ನು ನೀಡಲಿದೆ.

ಒನ್‌ಪ್ಲಸ್‌ ಬಡ್ಸ್ 3 ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ ಒನ್‌ಪ್ಲಸ್ ಬಡ್ಸ್ 3 ಬೆಲೆ 5,499ರೂ.ಗಳಾಗಿದೆ. ಇದು ಮೆಟಾಲಿಕ್ ಗ್ರೇ ಮತ್ತು ಸ್ಪ್ಲೆಂಡಿಡ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದ್ದು, ಒನ್‌ಪ್ಲಸ್ ವೆಬ್‌ಸೈಟ್, ಅಮೆಜಾನ್ ಮತ್ತು ರಿಟೇಲ್ ಸ್ಟೋರ್‌ಗಳ ಮೂಲಕ ಫೆಬ್ರವರಿ 6 ರಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
OnePlus launched the OnePlus Buds 3 today at a grand on-ground event in Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+