Home
ಸುದ್ದಿಜಾಲ

OnePlus: ಒನ್‌ಪ್ಲಸ್‌ ಬಡ್ಸ್ 3 ಏನೆಲ್ಲಾ ಫೀಚರ್ಸ್‌ ಹೊಂದಿದೆ ಗೊತ್ತಾ! ಬೆಲೆ ಎಷ್ಟು, ಯಾವಾಗ ಲಾಂಚ್‌?

ಒನ್‌ಪ್ಲಸ್‌ (OnePlus) ಕಂಪೆನಿ ತನ್ನ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ ಹಾಗೂ ಇತರೆ ಸ್ಮಾರ್ಟ್‌ ಡಿವೈಸ್‌ಗಳ ವಿಭಾಗದಲ್ಲಿ ದೊಡ್ಡ ಮಟ್ಟದ ಗ್ರಾಹಕ ವಲಯವನ್ನು ಪಡೆದುಕೊಂಡಿದೆ. ಅದರಂತೆ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಒನ್‌ಪ್ಲಸ್‌ 12, ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್ (OnePlus 12, OnePlus 12R smartphone) ಅನಾವರಣಕ್ಕೆ ವೇದಿಕೆ ಸಿದ್ಧವಾಗಿದ್ದು, ಇದರೊಂದಿಗೆ ಒನ್‌ಪ್ಲಸ್‌ ಬಡ್ಸ್ 3 (OnePlus Buds 3) ಸಹ ಲಾಂಚ್‌ ಆಗಲಿದೆ.

ಹೌದು, ಒನ್‌ಪ್ಲಸ್‌ 12, ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್ ಖರೀದಿ ಮಾಡಲು ಭಾರತದಲ್ಲಿ ಸಾಕಷ್ಟು ಗ್ರಾಹಕರು ಕಾದು ಕುಳಿತಿದ್ದಾರೆ. ಅದರಂತೆ ಈಗ ಈ ಫೋನ್‌ಗಳ ಜೊತೆಗೆ ಒನ್‌ಪ್ಲಸ್‌ ಬಡ್ಸ್ 3 ಕೂಡ ಲಾಂಚ್‌ ಆಗಲಿದ್ದು, ಇದರ ಕೆಲವು ಫೀಚರ್ಸ್‌ ಈಗ ಅಧಿಕೃತವಾಗಿ ಬಹಿರಂಗವಾಗಿದೆ. ಈ ಡಿವೈಸ್‌ 7 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಇಯರ್‌ಬಡ್ಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಒನ್‌ಪ್ಲಸ್‌ ಬಡ್ಸ್ 3 ಏನೆಲ್ಲಾ ಫೀಚರ್ಸ್‌ ಹೊಂದಿದೆ ಗೊತ್ತಾ! ಬೆಲೆ ಎಷ್ಟು?

ಒನ್‌ಪ್ಲಸ್‌ ಬಡ್ಸ್ 3 ಇಯರ್‌ಬಡ್ಸ್‌: ಮೊದಲೇ ತಿಳಿಸಿದಂತೆ ಒನ್‌ಪ್ಲಸ್‌ 12, ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್ ಜನವರಿ 23 ರಂದು ಅನಾವರಣ ಆಗಲಿದ್ದು, ಈ ಫೋನ್‌ಗಳ ಜೊತೆಗೆ ಒನ್‌ಪ್ಲಸ್‌ ಬಡ್ಸ್ 3 ಸಹ ಘೋಷಣೆ ಆಗಲಿದೆ. ಲಾಂಚ್‌ಗೆ ಮುಂಚಿತವಾಗಿ ಕಂಪನಿಯು ಇಯರ್‌ಬಡ್‌ಗಳ ಬ್ಯಾಟರಿ ಮತ್ತು ಚಾರ್ಜಿಂಗ್ ಫೀಚರ್ಸ್‌ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ.

ಒನ್‌ಪ್ಲಸ್‌ ತನ್ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಇಯರ್‌ಬಡ್‌ಗಳು (Earbuds) ಪೂರ್ಣ ಚಾರ್ಜ್‌ನಲ್ಲಿ 44 ಗಂಟೆಗಳ ಪ್ಲೇಬ್ಯಾಕ್ ಸಮಯ ನೀಡುತ್ತವೆ ಎಂದು ತಿಳಿಸಲಾಗಿದ್ದು, ಇದರೊಂದಿಗೆ ಈ ಬಡ್ಸ್ 3 ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 7 ಗಂಟೆಗಳ ಪ್ಲೇಬ್ಯಾಕ್‌ ಟೈಮ್‌ ನೀಡಲಿವೆ ಎಂದು ಉಲ್ಲೇಖ ಮಾಡಲಾಗಿದೆ. ಇದರೊಂದಿಗೆ ಸಕ್ರಿಯ ಶಬ್ದ ರದ್ದತಿ, ಮೂರು ಮೈಕ್ರೊಫೋನ್‌ಗಳು, 94ms ಕಡಿಮೆ ಲೇಟೆನ್ಸಿ ಮತ್ತು LHDC 5.0 ಹೈ-ರೆಸ್ ಆಡಿಯೊ ತಂತ್ರಜ್ಞಾನವನ್ನು ಈ ಬಡ್ಸ್‌ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಒನ್‌ಪ್ಲಸ್‌ ಬಡ್ಸ್ 3 ಏನೆಲ್ಲಾ ಫೀಚರ್ಸ್‌ ಹೊಂದಿದೆ ಗೊತ್ತಾ! ಬೆಲೆ ಎಷ್ಟು?

ಒನ್‌ಪ್ಲಸ್‌ ಬಡ್ಸ್ 3 ಈಗಾಗಲೇ ಚೀನಾದಲ್ಲಿ ಲಾಂಚ್‌ ಆಗಿದೆ. ಚೀನಾದಲ್ಲಿ ಬಿಡುಗಡೆಯಾದ ವೇರಿಯಂಟ್‌ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಆನ್‌ ನೊಂದಿಗೆ ಬಡ್ಸ್ 3 ಒಂದೇ ಚಾರ್ಜ್‌ನಲ್ಲಿ 6.5 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ. ಹಾಗಿದ್ರೆ, ಚೀನಾದಲ್ಲಿ ಲಭ್ಯ ಇರುವ ಈ ಇಯರ್‌ಬಡ್ಸ್‌ನ ಇತರೆ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ತಿಳಿಯೋಣ ಬನ್ನಿ.

ಒನ್‌ಪ್ಲಸ್‌ ಬಡ್ಸ್ 3 ಇಯರ್‌ಬಡ್ಸ್ ಫೀಚರ್ಸ್‌: ಚೀನಾದಲ್ಲಿ ಬಿಡುಗಡೆಯಾದ ವೇರಿಯಂಟ್‌ ಮೂರು ಮೈಕ್ರೊಫೋನ್‌ಗಳನ್ನು ಹೊಂದಿದ್ದು, 94ms ಕಡಿಮೆ ಲೇಟೇನ್ಸಿ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಅಲ್ಲದೆ ಸಕ್ರಿಯ ಶಬ್ದ ರದ್ದತಿ (ANC) ಬೆಂಬಲದೊಂದಿಗೆ, ವೈರ್‌ಲೆಸ್ ಇಯರ್‌ಬಡ್‌ಗಳು ವೈವಿಧ್ಯಮಯ ಪರಿಸರದಲ್ಲಿಯೂ ಉತ್ತಮ ಆಡಿಯೊ ಅನುಭವವನ್ನು ನೀಡಲಿವೆ. ಅಲ್ಲದೆ LHDC 5.0 ಹೈ-ರೆಸ್ ಆಡಿಯೊ ತಂತ್ರಜ್ಞಾನವನ್ನೂ ಇದರಲ್ಲಿ ಕಾಣಬಹುದಾಗಿದೆ.

ಟಚ್‌ ಕಂಟ್ರೋಲ್‌ ಆಯ್ಕೆ ಇದ್ದು, ಈ ಮೂಲಕ ಮ್ಯೂಸಿಕ್‌ ಪ್ಲೇ ಬ್ಯಾಕ್, ವಾಲ್ಯೂಮ್ ಕಂಟ್ರೋಲ್‌ ಮತ್ತು ಹೆಚ್ಚಿನವುಗಳನ್ನು ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ. ಜೊತೆಗೆ ಈ ಇಯರ್‌ಬಡ್‌ಗಳು 3D ಸರೌಂಡ್ ಸ್ಪೇಸ್ ಸೌಂಡ್ ಎಫೆಕ್ಟ್ ಮತ್ತು ಡೈನಾಮಿಕ್ ಬೇಸ್‌ ತಂತ್ರಜ್ಞಾನ ಸೇರಿದಂತೆ ಸುಧಾರಿತ ಆಡಿಯೊ ತಂತ್ರಜ್ಞಾನಗಳನ್ನು ಹೊಂದಿದೆ.

ಎಲ್ಲಕ್ಕಿಂತ ಮಿಗಿಲಾಗಿ ಇಯರ್‌ಬಡ್‌ಗಳು 58 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಚಾರ್ಜಿಂಗ್‌ ಕೇಸ್ 520mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಲಾಂಚ್‌ ಆಗಿದೆ. ಇನ್ನು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಆಯ್ಕೆ ಪಡೆದಿದ್ದು, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದೇ ರೀತಿಯ ಫೀಚರ್ಸ್‌ ಭಾರತದಲ್ಲಿ ಅನಾವರಣ ಆಗುವ ಬಡ್ಸ್‌ನಲ್ಲೂ ಸಹ ಕಾಣಿಸಿಕೊಳ್ಳಬಹುದು ಎಂದು ನಂಬಲಾಗಿದೆ.

ಒನ್‌ಪ್ಲಸ್‌ ಬಡ್ಸ್ 3 ಏನೆಲ್ಲಾ ಫೀಚರ್ಸ್‌ ಹೊಂದಿದೆ ಗೊತ್ತಾ! ಬೆಲೆ ಎಷ್ಟು?

ಭಾರತದಲ್ಲಿ ಒನ್‌ಪ್ಲಸ್ ಬಡ್ಸ್ 3 ಬೆಲೆ: ಜನವರಿ 23 ರಂದು ಈ ಇಯರ್‌ಬಡ್ಸ್‌ ಲಾಂಚ್‌ ಆಗಲಿದ್ದು, ಚೀನಾದಲ್ಲಿ ಲಾಂಚ್‌ ಆದ ಈ ಬಡ್ಸ್‌ನ ಬೆಲೆಯನ್ನು ಹೋಲಿಕೆ ಮಾಡಿ ನೋಡುವುದಾದರೆ ಇದು ಸುಮಾರು 5,800 ರೂ.ಗಳಿಗೆ ಭಾರತದಲ್ಲಿ ಲಭ್ಯ ಇರಬಹುದು ಎಂದು ತಿಳಿದುಬಂದಿದೆ. ಅದಾಗ್ಯೂ ಈ ಬೆಲೆಯಲ್ಲಿ ಬದಲಾವಣೆಗಳನ್ನೂ ಸಹ ಕಾಣಬಹುದಾಗಿದೆ.

Best Mobiles in India

English summary
OnePlus Buds 3 will also be launched in India along with OnePlus 12, OnePlus 12R smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+