Home
ಸುದ್ದಿಜಾಲ

ಒನ್‌ಪ್ಲಸ್‌ ಬಡ್ಸ್‌ ಪ್ರೊ 2R ಇಯರ್‌ಬಡ್ಸ್‌ ಲಾಂಚ್‌: ಭಾರತೀಯರಿಗೆ ವಿಶೇಷ ಬೆಲೆಯಲ್ಲಿ ಲಭ್ಯ!

ಜಾಗತಿಕವಾಗಿ ಹಲವಾರು ಮಂದಿ ಕಾತುರದಿಂದ ಕಾಯುತ್ತಿದ್ದ ಒನ್‌ಪ್ಲಸ್‌ ಕಂಪೆನಿಯ ಡಿವೈಸ್‌ಗಳು ಕೊನೆಗೂ ಅನಾವರಣಗೊಂಡಿವೆ. ಇದರಲ್ಲಿ ಒನ್‌ಪ್ಲಸ್‌ 11 ಹಾಗೂ ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ ಹಾಗೂ ಪ್ಯಾಡ್‌ ಜೊತೆಗೆ ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಲಾಗಿದ್ದು, ಒನ್‌ಪ್ಲಸ್‌ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಈ ಹೊಸ ಇಯರ್‌ಬಡ್ಸ್‌ ಡೈನಾಡಿಯೊ ಟ್ಯೂನಿಂಗ್ ಹಾಗೂ ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್‌ ಪಡೆದುಕೊಂಡಿದೆ.

ಒನ್‌ಪ್ಲಸ್‌ ಬಡ್ಸ್‌ ಪ್ರೊ 2R ಇಯರ್‌ಬಡ್ಸ್‌ ಲಾಂಚ್‌: ವಿಶೇಷ ಬೆಲೆಯಲ್ಲಿ ಲಭ್ಯ!

ಹೌದು, ಸ್ಮಾರ್ಟ್ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್‌ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಬಡ್ಸ್‌ಪ್ರೊ 2R (OnePlus Buds Pro 2R) ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಲಾಗಿದ್ದು, ಈ ಇಯರ್‌ಬಡ್ಸ್‌ ಈ ಹಿಂದೆ ಲಾಂಚ್‌ ಮಾಡಲಾದ ಸ್ಟ್ಯಾಂಡರ್ಡ್ ಬಡ್ಸ್ ಪ್ರೊ 2 ನಲ್ಲಿ ಇರುವ ಬಹುತೇಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ಇಯರ್‌ಬಡ್ಸ್‌ನ ಬೆಲೆ ಎಷ್ಟೆಂದು ವಿವರಿಸಲಾಗಿದೆ ಈ ಲೇಖನ ಓದಿ.

ಒನ್‌ಪ್ಲಸ್‌ ಬಡ್ಸ್‌ಪ್ರೊ 2R ಪ್ರಮುಖ ಫೀಚರ್ಸ್‌

ವಾಯರ್‌ಲೆಸ್‌ ಚಾರ್ಜಿಂಗ್ ಮತ್ತು ಹೆಡ್ ಟ್ರ್ಯಾಕಿಂಗ್ ಹೊರತುಪಡಿಸಿದರೆ ಈ ಇಯರ್‌ಬಡ್ಸ್‌ನ ಫೀಚರ್ಸ್‌ ಈ ಹಿಂದೆ ಲಾಂಚ್‌ ಮಾಡಲಾದ ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲುವ ಫೀಚರ್ಸ್‌ಗಳನ್ನೇ ಪಡೆದುಕೊಂಡಿದೆ. ಇದರೊಂದಿಗೆ ಈ ಇಯರ್‌ಬಡ್‌ಗಳು ಗ್ಲೋಸಿ ಸ್ಟೆಮ್ ಮತ್ತು ಮೇಲ್ಭಾಗದಲ್ಲಿ ಮ್ಯಾಟ್ ಫಿನಿಶ್‌ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ.

ಎರಡನೇ ತಲೆಮಾರಿನ ಈ ಇಯರ್‌ಬಡ್ಸ್‌ ಪ್ರಾದೇಶಿಕ ಆಡಿಯೊ, ಡೈನಾಡಿಯೊ ಟ್ಯೂನಿಂಗ್, ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ ಸೇರಿದಂತೆ ಹಲವಾರು ವಿಶೇಷ ಹಾಗೂ ಆಕರ್ಷಕ ಫೀಚರ್ಸ್‌ಗಳನ್ನ ಪಡೆದುಕೊಂಡಿರುವುದು ಒನ್‌ಪ್ಲಸ್‌ ಪ್ರಿಯರಿಗೆ ಖಂಡಿತಾ ಇಷ್ಟವಾಗಲಿದೆ.

ಇದರೊಂದಿಗೆ ಈ ಬಡ್ಸ್‌ಪ್ರೊ 2R ನಲ್ಲಿ 11mm ಮತ್ತು 6mm ಗಾತ್ರದ ಡ್ಯುಯಲ್ ಡ್ರೈವರ್‌ ಆಯ್ಕೆ ನೀಡಲಾಗಿದ್ದು, ಇವು 48dB ವರೆಗೆ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಫೀಚರ್ಸ್‌ ಜೊತೆಗೆ ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಲು ಟ್ರಾನ್ಸ್ಪರೆನ್ಸಿ ಮೋಡ್ ಆಯ್ಕೆಯನ್ನು ನೀಡಲಾಗಿದೆ. ಹಾಗೆಯೇ ಬಡ್ಸ್‌ಗಳು LHDC 5.0 ಆಡಿಯೊ ಕೊಡೆಕ್ ಮತ್ತು ಗೇಮಿಂಗ್‌ಗಾಗಿ 54ms ಕಡಿಮೆ ಲೇಟೆನ್ಸಿಯನ್ನು ಬೆಂಬಲಿಸಲಿದ್ದು, ಈ ಮೂಲಕ ಅತ್ಯುತ್ತಮವಾದ ಗೇಮಿಂಗ್‌ ಅನುಭವವನ್ನು ಪಡೆಯಬಹುದಾಗಿದೆ.

ಒನ್‌ಪ್ಲಸ್‌ ಬಡ್ಸ್‌ ಪ್ರೊ 2R ಇಯರ್‌ಬಡ್ಸ್‌ ಲಾಂಚ್‌: ವಿಶೇಷ ಬೆಲೆಯಲ್ಲಿ ಲಭ್ಯ!

ಈ ಇಯರ್‌ಬಡ್‌ಗಳು ಪ್ರಾದೇಶಿಕ ಆಡಿಯೊವನ್ನು ಬೆಂಬಲಿಸುತ್ತವೆಯಾದರೂ ಹೆಡ್ ಟ್ರ್ಯಾಕಿಂಗ್ ಅನ್ನು ಬೆಂಬಲಿಸುವುದಿಲ್ಲ. ಈ ಫೀಚರ್ಸ್‌ ನಲ್ಲಿ ಯೂಟ್ಯೂಬ್‌ ಮತ್ತು ಡಿಸ್ನಿ+ ನಂತಹ ಆಪ್‌ಗಳನ್ನು ಬಳಕೆ ಮಾಡುವಾಗ ನಿಮ್ಮ ತಲೆಯನ್ನು ತಿರುಗಿಸಿದಾಗ 3D ಆಡಿಯೊ ಎಫೆಕ್ಟ್‌ ಸಕ್ರಿಯವಾಗುತ್ತದೆ.ಹಾಗೆಯೇ ಬ್ಲೂಟೂತ್ ಆವೃತ್ತಿ 5.2 ಯನ್ನು ಹೊಂದಿದ್ದು, ಈ ಇಯರ್‌ಬಡ್‌ಗಳನ್ನು ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ.

ಒನ್‌ಪ್ಲಸ್‌ ಬಡ್ಸ್‌ಪ್ರೊ 2R ಬ್ಯಾಟರಿ ಸಾಮರ್ಥ್ಯ

ಒನ್‌ಪ್ಲಸ್‌ ಬಡ್ಸ್‌ಪ್ರೊ 2R ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜಿಂಗ್‌ನಲ್ಲಿ 39 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಹಾಗೆಯೇ ಇಯರ್‌ಬಡ್‌ಗಳಲ್ಲಿ ANC ನಿಷ್ಕ್ರಿಯಗೊಳಿಸಿ ಬಳಕೆ ಮಾಡಿದಾಗ 9 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ. ಹಾಗೆಯೇ ANC ಸಕ್ರಿಯವಾಗಿದ್ದಾಗ ಈ ಬಡ್ಸ್‌ಗಳು 6 ಗಂಟೆಗಳ ಪ್ಲೇ ಟೈಮ್‌ ನೀಡಲಿವೆ ಎಂದು ಕಂಪೆನಿ ತಿಳಿಸಿದೆ.

ಒನ್‌ಪ್ಲಸ್‌ ಬಡ್ಸ್‌ಪ್ರೊ 2R ಬೆಲೆ ಹಾಗೂ ಲಭ್ಯತೆ

ಒನ್‌ಪ್ಲಸ್‌ ಬಡ್ಸ್‌ಪ್ರೊ 2R ಇಯರ್‌ಬಡ್ಸ್‌ ಭಾರತದ ಮಾರುಕಟ್ಟೆಗೆ ಪ್ರತ್ಯೇಕವಾಗಿ ಪದಾರ್ಪಣೆ ಮಾಡಲಿದ್ದು, ಈ ಮೂಲಕ 9,999 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಆದರೆ ಭಾರತದಲ್ಲಿ ಎಂದಿನಿಂದ ಈ ಇಯರ್‌ಬಡ್ಸ್‌ ಲಭ್ಯ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಅದರಂತೆ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಬಡ್ಸ್‌ಗಳು ಕಂಡುಬರಲಿವೆ. ಇನ್ನು ಸ್ಟ್ಯಾಂಡರ್ಡ್ ಬಡ್ಸ್ ಪ್ರೊ 2 ಭಾರತದಲ್ಲಿ ಸದ್ಯಕ್ಕೆ 11,999 ರೂ. ಗಳ ಬೆಲೆಯನ್ನು ಹೊಂದಿದೆ.

ಒನ್‌ಪ್ಲಸ್‌ ಬಡ್ಸ್‌ ಪ್ರೊ 2R ಇಯರ್‌ಬಡ್ಸ್‌ ಲಾಂಚ್‌: ವಿಶೇಷ ಬೆಲೆಯಲ್ಲಿ ಲಭ್ಯ!

ಒನ್‌ಪ್ಲಸ್‌ ಪ್ಯಾಡ್‌

ಇನ್ನು ಈ ಬಿಡುಗಡೆ ಸಮಾರಂಭದಲ್ಲಿ ಒನ್‌ಪ್ಲಸ್‌ ಪ್ಯಾಡ್‌ ಲಾಂಚ್‌ ಆಗಿದ್ದು, ಈ ಡಿವೈಸ್‌ 11.61 ಇಂಚಿನ LCD ಡಿಸ್‌ಪ್ಲೇ ಜೊತೆಗೆ 144Hz ಸ್ಕ್ರೀನ್ ರಿಫ್ರೆಶ್ ರೇಟ್‌ ಪಡೆದಿದೆ. ಹಾಗೆಯೇ 500nits ಬ್ರೈಟ್‌ನೆಸ್ ವಿಶೇಷ ಎನಿಸಿದೆ. ಇನ್ನು ಈ ಡಿವೈಸ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ತನ್ನದಾಗಿಸಿಕೊಂಡಿದೆ. ಜೊತೆಗೆ 9510mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೆಚ್ಚು ಬ್ಯಾಕಪ್‌ ನೀಡಲಿದೆ. ಈ ಡಿವೈಸ್‌ ಅನ್ನು ಲಾಂಚ್‌ ಮಾಡುವ ವೇಲೆ ಬೆಲೆ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Best Mobiles in India

English summary
OnePlus Buds Pro 2 was finally launched in the global market along with OnePlus 11 and OnePlus 11R smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+