ಒನ್‌ಪ್ಲಸ್ ಬಡ್ಸ್ ಪ್ರೊ 2 ಇಯರ್‌ಬಡ್‌ಗೆ ಬಿಗ್ ಡಿಸ್ಕೌಂಟ್; ಭಾರೀ ಬೆಲೆ ಇಳಿಕೆ!
ಜನಪ್ರಿಯ ಇ ಕಾಮರ್ಸ್ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ಗಳು ಫೋನ್‌ಗಳಿಗೆ ಡಿಸ್ಕೌಂಟ್ ನೀಡುವ ಜೊತೆಗೆ ಆಡಿಯೋ ಉತ್ಪನ್ನಗಳಿಗೂ ಆಕರ್ಷಕ ಕೊಡುಗೆ ಲಭ್ಯ ಮಾಡುತ್ತವೆ. ಸದ್ಯ ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣವು ಕೆಲವು ಆಯ್ದ ಲ್ಯಾಪ್‌ಟಾಪ್‌ಗಳಿಗೆ ಬೊಂಬಾಟ್ ರಿಯಯಾತಿ ತಿಳಿಸಿದ್ದು, ಆ ಪೈಕಿ ಒನ್‌ಪ್ಲಸ್‌ನ ಈ ಇಯರ್‌ಬಡ್ಸ್ ಡಿವೈಸ್‌ಗೆ ಸೂಪರ್ ಪ್ರೈಸ್ ಟ್ಯಾಗ್ ಪಡೆದಿದೆ.
ಹೌದು, ಜನಪ್ರಿಯ ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣದಲ್ಲಿ ಒನ್‌ಪ್ಲಸ್ ಬಡ್ಸ್ ಪ್ರೊ 2 ( OnePlus Buds Pro 2 ) 28% ರಷ್ಟು ರಿಯಾಯಿತಿ ಪಡೆದು ಗ್ರಾಹಕರ ಗಮನ ಸೆಳೆದಿದೆ. ಇದರ ಆಫರ್ ಬೆಲೆಯು 9,999ರೂ. ಗಳು ಆಗಿದೆ. ಗ್ರಾಹಕರು ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್ ಸೇರಿದಂತೆ ಇತರೆ ಪಡೆದರೆ ಮತ್ತಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಅಂದಹಾಗೆ ಒನ್‌ಪ್ಲಸ್ ಬಡ್ಸ್ ಪ್ರೊ 2 ಡಿವೈಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಹೊಂದಿದ್ದು, ಬಡ್ಸ್‌ಗಳಲ್ಲಿರುವ 11mm ಡೈನಾಮಿಕ್ ಡ್ರೈವರ್ ಬಳಕೆದಾರರಿಗೆ ಉತ್ತಮ ಸೌಂಡ್ ಕ್ವಾಲಿಟಿ ನಿರೀಕ್ಷಿಸಬಹುದಾಗಿದೆ. ಇನ್ನುಳಿದಂತೆ ಒನ್‌ಪ್ಲಸ್ ಬಡ್ಸ್ ಪ್ರೊ 2 ಡಿವೈಸ್‌ನ ಇತರೆ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಡಾಲ್ಬಿ ಅಟ್ಮಾಸ್ ಆಡಿಯೋ ಫೀಚರ್ಸ್
ಒನ್‌ಪ್ಲಸ್ ಸಂಸ್ಥೆಯ ಈ ಇಯರ್‌ಬಡ್ಸ್ ಡಾಲ್ಬಿ ಅಟ್ಮಾಸ್ ಪ್ರಾದೇಶಿಕ ಆಡಿಯೋ ಸಪೋರ್ಟ್ ಹಾಗೂ ಡೈನಾಡಿಯೊ ಟ್ಯೂನಿಂಗ್ ಫೀಚರ್ಸ್ ಪಡೆದುಕೊಂಡಿದೆ. ಹಾಗೆಯೇ ಇಯರ್‌ಬಡ್‌ಗಳು 11 ಎಂಎಂ ಡೈನಾಮಿಕ್ ಡ್ರೈವರ್ ಮತ್ತು 6 ಎಂಎಂ ಪ್ಲ್ಯಾನರ್ ಡಯಾಫ್ರಾಮ್‌ನೊಂದಿಗೆ ಪ್ಯಾಕ್ ಆಗಿವೆ.

ಅದೇ ರೀತಿ ಈ ಒನ್‌ಪ್ಲಸ್ ಬಡ್ಸ್ ಪ್ರೊ 2 ಸಾಧನವು ವಾಲ್ಯೂಮ್, ಟ್ರ್ಯಾಕ್ ಬದಲಾವಣೆ ಮತ್ತು ಕರೆಗೆ ಉತ್ತರಿಸಲು ಸೂಕ್ಷ್ಮ ನಿಯಂತ್ರಣ ಆಯ್ಕೆ ಒಳಗೊಂಡಿದ್ದು, ಬ್ಲೂಟೂತ್ ಆವೃತ್ತಿ 5.3 ನ ಕನೆಕ್ಟಿವಿಟಿ ಆಯ್ಕೆ ಕೂಡಾ ಪಡೆದಿದೆ. ಇದಲ್ಲದೇ ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ಕೆಲಸ ನಿರ್ವಹಿಸುತ್ತದೆ. ಜೊತೆಗೆ ಈ ಇಯರ್‌ಬಡ್‌ಗಳು ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಹೊಂದಿದ್ದು, ಸ್ಪಷ್ಟ ಕರೆ ಅನುಭವಕ್ಕಾಗಿ ಟ್ರಿಪಲ್ ಮೈಕ್ರೊಫೋನ್ ಸೌಲಭ್ಯ ಸಹ ಪಡೆದುಕೊಂಡಿದೆ.
IPX4 ರೇಟಿಂಗ್ ಸೌಲಭ್ಯ
ಒನ್‌ಪ್ಲಸ್‌ನನ ಈ ಇಯರ್‌ಬಡ್ ಬೈನೌರಲ್ ಕಡಿಮೆ-ಲೇಟೆನ್ಸಿ ಬ್ಲೂಟೂತ್ ಟ್ರಾನ್ಸ್‌ಮಿಷನ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಅಧಿಕ ಗೇಮಿಂಗ್ ಅನುಭವ ಪಡೆದುಕೊಳ್ಳಬಹುದಾಗಿದೆ. ಈ ಇಯರ್‌ಬಡ್ಸ್ 54ms ಅಲ್ಟ್ರಾ ಲೋ ಲೇಟೆನ್ಸಿ ಮೋಡ್ ಒಳಗೊಂಡಿದೆ. ಅಲ್ಲದೇ ಈ ಡಿವೈಸ್ ಇಯರ್‌ಬಡ್ಸ್ IPX4 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ. ಇವು ಡ್ಯುಯಲ್ ಕನೆಕ್ಷನ್‌ಗಳನ್ನು ಮತ್ತು ವಿವಿಧ ಡಿವೈಸ್‌ಗಳೊಂದಿಗೆ ಸುಲಭವಾಗಿ ಕನೆಕ್ಟ್ ಹೊಂದುತ್ತವೆ.

ಈ ಇಯರ್‌ಬಡ್ಸ್ ಸಾಧನಗಳು ಆಡಿಯೊ ಡೈನಾಮಿಕ್ ಹೆಡ್ ಟ್ರ್ಯಾಕಿಂಗ್, ಡೈನಾಡಿಯೊ ಸೌಲಭ್ಯ ಪಡೆದುಕೊಂಡಿವೆ. ಹಾಗೆಯೇ ಇದು 48dB ವರೆಗೆ ಅಡಾಪ್ಟಿವ್ ನಾಯಿಸ್ ಕ್ಯಾನ್ಸಲೇಶನ್ ಪಡೆದಿದ್ದು, ಸುಮಾರು 40 ಗಂಟೆಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಅಲ್ಲದೇ ಈ ಸಾಧನವು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಚಾರ್ಜಿಂಗ್ ಕೇಸ್ ಮುಚ್ಚಳವನ್ನು ತೆರೆದ ತಕ್ಷಣ ಒನ್‌ಪ್ಲಸ್ ಫೋನಿನೊಂದಿಗೆ ತ್ವರಿತವಾಗಿ ಕನೆಕ್ಟ್ ಆಗುತ್ತದೆ.
ಇನ್ನು ಯಾವುದೇ ಆಂಡ್ರಾಯ್ಡ್ ಫೋನ್‌ಗಳನ್ನು ಸುಲಭವಾಗಿ ಕನೆಕ್ಟ್ ಮಾಡಲು ಸಹಾಯಕ್ಕಾಗಿ ಗೂಗಲ್ ಫಾಸ್ಟ್ ಪೇರ್ ಅನ್ನು ಸಹ ಹೊಂದಿದೆ. ಇಯರ್‌ಬಡ್‌ಗಳ ಫೀಚರ್ಸ್‌ಗಳನ್ನು ಬಳಕೆ ಮಾಡಲು ವಾಯರ್‌ಲೆಸ್ ಇಯರ್‌ಫೋನ್ ಆಪ್ ಅಥವಾ ಒನ್‌ಪ್ಲಸ್ ಬಡ್ಸ್ ಆಪ್‌ಗೆ ಅನ್ನು ಅಪ್‌ಗ್ರೇಡ್ ಮಾಡಿ.


Click it and Unblock the Notifications








