Home
ಸುದ್ದಿಜಾಲ

ಭಾರತದಲ್ಲಿ OnePlus Buds Pro 3 ಬಿಡುಗಡೆ; ಅಚ್ಚರಿಯ ಬೆಲೆ?

ಜನಪ್ರಿಯ ಒನ್‌ಪ್ಲಸ್‌ (OnePlus) ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ ಒನ್‌ಪ್ಲಸ್‌ ಬಡ್ಸ್ ಪ್ರೊ 3 (OnePlus Buds Pro 3) ಇಯರ್‌ಬಡ್ಸ್‌ ಡಿವೈಸ್‌ ಅನ್ನು ಬಿಡುಗಡೆ ಮಾಡಿತು. ಇದು ಮೂರನೇ ತಲೆಮಾರಿನ ವೈರ್‌ಲೆಸ್ ಇಯರ್‌ಬಡ್‌ ಆಗಿದ್ದು, ನೂತನ ಅಪ್‌ಗ್ರೇಡ್‌ ವಿನ್ಯಾಸ, ಡ್ಯುಯಲ್ ಆಡಿಯೊ ಡ್ರೈವರ್‌ಗಳು, ಸಕ್ರಿಯ ಶಬ್ದ ರದ್ದತಿ ಮತ್ತು ಪ್ರಾದೇಶಿಕ ಆಡಿಯೊಗೆ ಸಪೋರ್ಟ್‌ ಅನ್ನು ಇದು ಒಳಗೊಂಡಿದೆ. ಇನ್ನು ಈ ಸಾಧನ ಅತ್ಯುತ್ತಮ ಫೀಚರ್ಸ್‌ ಹಾಗೂ ಆಕರ್ಷಕ ಡಿಸೈನ್‌ ಮೂಲಕ ಗ್ರಾಹಕರ ಗಮನ ಸೆಳೆಯುವಂತಿದೆ.

ಹೌದು, ಒನ್‌ಪ್ಲಸ್‌ ಬಡ್ಸ್‌ ಪ್ರೊ 3 (OnePlus Buds Pro 3) ದೇಶಿಯ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಇದು ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ಡಿವೈಸ್‌ನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಈ ಹೊಸ ಇಯರ್‌ಬಡ್ಸ್‌ ಡ್ಯುಯಲ್‌ ಕನೆಕ್ಟಿವಿಟಿ ಫೀಚರ್ಸ್‌ ಹೊಂದಿದ್ದು, ಬಡ್ಸ್‌ಗಳಲ್ಲಿರುವ 11mm ವೂಫರ್‌+ ಜೊತೆಗೆ 6mm tweeter ಡ್ರೈವರ್ ಸೌಲಭ್ಯ ಸಹ ಪಡೆದಿದೆ.

ಭಾರತದಲ್ಲಿ OnePlus Buds Pro 3 ಬಿಡುಗಡೆ; ಅಚ್ಚರಿಯ ಬೆಲೆ?

ಇನ್ನು ಈ ಇಯರ್‌ಬಡ್ಸ್‌ ಸಕ್ರಿಯ ಶಬ್ದ ರದ್ದತಿ (ANC) ಸೌಲಭ್ಯ ಪಡೆದಿದೆ. ಹಾಗೆಯೇ ಇದು ಲೂನಾರ್ ರೇಡಿಯನ್ಸ್‌ ಹಾಗೂ ಮೀಡ್‌ನೈಟ್‌ ಓಪಸ್‌ ಕಲರ್‌ ಆಯ್ಕೆ ಅನ್ನು ಪಡೆದುಕೊಂಡಿದೆ. ಇನ್ನು ಈ ಸಾಧನದ ಬೆಲೆಯು 11,999ರೂ. ಗಳು ಆಗಿದೆ. ಹಾಗಾದರೇ ಒನ್‌ಪ್ಲಸ್‌ ಬಡ್ಸ್‌ ಪ್ರೊ 3 ಡಿವೈಸ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ಬಡ್ಸ್‌ ಪ್ರೊ 3 - ಫೀಚರ್ಸ್‌ ಹೀಗಿವೆ

ಒನ್‌ಪ್ಲಸ್‌ ಬಡ್ಸ್ ಪ್ರೊ 3 ಡಿವೈಸ್‌ ಡ್ಯುಯಲ್ ಡ್ರೈವರ್ ರಚನೆ ಅನ್ನು ಪಡೆದಿದ್ದು, ಇದು 11mm ವೂಫರ್ ಮತ್ತು 6mm ಟ್ವೀಟರ್ ಆಡಿಯೋ ಡ್ರೈವರ್‌ ಸೌಲಭ್ಯ ಅನ್ನು ಒಳಗೊಂಡಿದೆ. ಸಂಸ್ಥೆಯ ಪ್ರಕಾರ, ಅವುಗಳನ್ನು ಡ್ಯುಯಲ್ DACs ಗಳೊಂದಿಗೆ ಜೋಡಿಸಲಾಗಿದೆ. ಪ್ರತಿ ಆಡಿಯೋ ಡ್ರೈವರ್‌ಗೆ ಒಂದನ್ನು ಒದಗಿಸಲಾಗಿದೆ. ಇದು ಇಯರ್‌ಫೋನ್‌ಗಳ ವಾಯಿಸ್‌ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

ಒನ್‌ಪ್ಲಸ್‌ ಸಂಸ್ಥೆಯ ಪ್ರಕಾರ, ಹೊಸ ಒನ್‌ಪ್ಲಸ್‌ ಬಡ್ಸ್ ಪ್ರೊ 3 TWS ಇಯರ್‌ಬಡ್‌ ಸೌಮ್ಯ, ಮಧ್ಯಮ ಹಾಗೂ ಗರಿಷ್ಠ ವಿಧಾನಗಳೊಂದಿಗೆ 50dB ANC ವರೆಗೆ ಸಪೋರ್ಟ್‌ ಸಹ ನೀಡುತ್ತದೆ. ಹೆಚ್ಚುವರಿ ಸ್ಮಾರ್ಟ್ ANC ಮೋಡ್ ಸುತ್ತುವರಿದ ಧ್ವನಿ ಮಟ್ಟವನ್ನು ಅವಲಂಬಿಸಿ ANC ಮಟ್ಟವನ್ನು ಸ್ವಯಂ-ಆಯ್ಕೆ ಮಾಡುತ್ತದೆ.

ಇನ್ನು ಈ ಡಿವೈಸ್‌ ಹೊಸ TWS ಹೆಡ್‌ಸೆಟ್ ಒನ್‌ಪ್ಲಸ್‌ ಸಂಸ್ಥೆಯ ಡಿವೈಸ್‌ಗಳಲ್ಲದೇ, ಇತರೆ ಡಿವೈಸ್‌ಗಳಲ್ಲಿಯೂ HeyMelody ಆಪ್‌ ಮೂಲಕ ಕನೆಕ್ಟ್‌ ಆಗುತ್ತದೆ. ಇದು ಬಳಕೆದಾರರಿಗೆ ANC ಮೋಡ್‌ಗಳು, ಈಕ್ವಲೈಜರ್ ಸೆಟ್ಟಿಂಗ್‌ಗಳು, ಟಚ್ ಕಂಟ್ರೋಲ್ ಕಮಾಂಡ್‌ಗಳು ಸೇರಿದಂತೆ ಮತ್ತಷ್ಟು ಆಯ್ಕೆಗಳನ್ನು ನಿರ್ವಹಿಸಲು ಅವಕಾಶ ನೀಡುತ್ತದೆ. ಹಾಗೆಯೇ ಇದು ಡ್ಯಾನಿಶ್ ಧ್ವನಿವರ್ಧಕ ತಯಾರಕ ಡೈನಾಡಿಯೊ ಟ್ಯೂನ್ ಮಾಡಿದ್ದು, ಬಡ್ಸ್‌ ಪ್ರೊ 2 ಮತ್ತು ಒಪ್ಪೋ ಎನ್ಕೋ X2 ಅನ್ನು ಹೋಲುತ್ತದೆ.

ಒನ್‌ಪ್ಲಸ್‌ ಬಡ್ಸ್ ಪ್ರೊ 3 ಡಿವೈಸ್‌ ಬ್ಲೂಟೂತ್ 5.4 ಮೂಲಕ ಡ್ಯುಯಲ್-ಡಿವೈಸ್ ಕನೆಕ್ಟ್‌ ಸಪೋರ್ಟ್‌ ಇದ್ದು, 90ms ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಆಯ್ಕೆ ಸಹ ಹೊಂದಿದೆ. ಗೂಗಲ್ ಫಾಸ್ಟ್ ಪೇರ್ ಅನ್ನು ಬಳಸಿಕೊಂಡು ಆಧುನಿಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಇದನ್ನು ಕನೆಕ್ಟ್ ಮಾಡಬಹುದು. ಅಲ್ಲದೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಇದು IP55 ರೇಟಿಂಗ್ ಸೌಲಭ್ಯ ಸಹ ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಒನ್‌ಪ್ಲಸ್‌ ಬಡ್ಸ್ ಪ್ರೊ 3 (OnePlus Buds Pro 3) ಡಿವೈಸ್‌ 11,999ರೂ. ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಇನ್ನು ಈ ಡಿವೈಸ್‌ ಲೂನಾರ್ ರೇಡಿಯನ್ಸ್‌ ಹಾಗೂ ಮೀಡ್‌ನೈಟ್‌ ಓಪಸ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇದೇ ಆಗಷ್ಟ್‌ 23 ರಿಂದ ಒನ್‌ಪ್ಲಸ್‌ ಸ್ಟೋರ್, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಇತರೆ ಇ ಕಾಮರ್ಸ್‌ ತಾಣಗಳಲ್ಲಿ ಅಲ್ಲದೇ ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
OnePlus Buds Pro 3 Launched in India. check out Price and features and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+