Home
ಸುದ್ದಿಜಾಲ

ಏ.14ರಂದು 'ಒನ್‌ಪ್ಲಸ್‌ ಬುಲೆಟ್ಸ್ ವಾಯರ್‌ಲೆಸ್‌ Z' ಇಯರ್‌ಬಡ್ಸ್ ಲಾಂಚ್!‌

ಮೊಬೈಲ್ ಮಾರುಕಟ್ಟೆಯಲ್ಲಿ ಬಹುಬೇಗನೇ ಗಟ್ಟಿ ಸ್ಥಾನ ಕಂಡುಕೊಂಡಿರುವ 'ಒನ್‌ಪ್ಲಸ್‌' ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಮೋಡಿ ಮಾಡಿವೆ. ಸ್ಮಾರ್ಟ್‌ಫೋನ್‌ಗಳ ಜೊತೆ ಜೊತೆಗೆನೇ ಸಂಸ್ಥೆಯ ಇಯರ್‌ಫೋನ್‌, ನೆಕ್‌ಬ್ಯಾಂಡ್‌ಗಳು ಸಹ ಮ್ಯೂಸಿಕ್‌ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿ ಆಗಿವೆ. ಒನ್‌ಪ್ಲಸ್‌ ಬುಲೆಟ್ ಇಯರ್‌ಫೋನ್ 2 ಹೆಚ್ಚು ಸೌಂಡ್‌ ಮಾಡಿದ್ದು, ಇದೀಗ ಮತ್ತೊಂದು ವಾಯರ್‌ಲೆಸ್‌ ಇಯರ್‌ಫೋನ್ ಬಿಡುಗಡೆಗೆ ಸಜ್ಜುಗೊಂಡಿದೆ.

ಒನ್‌ಪ್ಲಸ್‌ ಸಂಸ್ಥೆ

ಹೌದು, ಒನ್‌ಪ್ಲಸ್‌ ಸಂಸ್ಥೆಯ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಫೋನ್‌ ಸರಣಿಯು ಇದೇ ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ ಎನ್ನುವುದು ಈಗಾಗಲೇ ನಿಮಗೆ ತಿಳಿದಿದೆ. ಅದೇ ಕಾರ್ಯಕ್ರಮದಲ್ಲಿ ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ Z ಹೆಸರಿನ ಇಯರ್‌ಫೋನ್ ಬಿಡುಗಡೆ ಆಗುವುದು ಬಹುತೇಕ ಖಚಿತ ಆಗಿದೆ. ಈ ಡಿವೈಸ್‌ನ ಕೆಲವು ಚಿತ್ರಗಳನ್ನು ಹೆಸರಾಂತ ಲೀಕ್‌ಸ್ಟರ್ ಇವಾನ್ ಬ್ಲಾಸ್ (vevleaks) ಶೇರ್‌ ಮಾಡಿದೆ.

ಅಲ್ಟ್ರಾಮರೀನ್ ಬ್ಲೂ

ಒನ್‌ಪ್ಲಸ್‌ನ ಹೊಸ ಇಯರ್‌ಫೋನ್‌ಗಳು ಒಟ್ಟು ನಾಲ್ಕು ಬಣ್ಣಗಳ ಮಾದರಿಗಳಲ್ಲಿ ಇರಲಿವೆ. ಕ್ರಮವಾಗಿ ಗ್ಲೇಶಿಯಲ್ ಗ್ರೀನ್, ಅಲ್ಟ್ರಾಮರೀನ್ ಬ್ಲೂ ಮತ್ತು ಓನಿಕ್ಸ್ ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳ ಮಾದರಿಯನ್ನು ಹೊಂದಿರಲಿವೆ ಎನ್ನಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಟ್ರೋಲಿ ವಾಯರ್‌ಲೆಸ್‌ ಸೌಲಭ್ಯ ಪಡೆದಿರಲಿವೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಇಯರ್‌ಫೋನ್ ಗ್ರಾಹಕರ ಸ್ನೇಜಿ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಒನ್‌ಪ್ಲಸ್‌ ಇಯರ್‌ಫೋನ್

ಬರಲಿರುವ ಹೊಸ ಒನ್‌ಪ್ಲಸ್‌ ಇಯರ್‌ಫೋನ್ ಬಹುತೇಕ ಈ ಹಿಂದಿನ ಒನ್‌ಪ್ಲಸ್ ಬುಲೆಟ್ಸ್‌ ವಾಯರ್‌ಲೆಸ್‌ 2 ಡಿವೈಸ್‌ನ ವಿನ್ಯಾಸವನ್ನು ಹೊಂದಿದಂತೆ ಕಂಡುಬರುತ್ತದೆ. ಆದರೆ ಹೆಚ್ಚುವರಿಯಾಗಿ ಬಣ್ಣ ಆಯ್ಕೆಯಲ್ಲಿ ಮಾತ್ರ ವ್ಯತ್ಯಾಸ ಇರಲಿದೆ ಎನ್ನಲಾಗಿದೆ. ನೂತನ ಒನ್‌ಪ್ಲಸ್‌ ಇಯರ್‌ಬಡ್‌ಗಳು ಕಪ್ಪು, ನೀಲಿ, ಬಿಳಿ ಮತ್ತು ಹಸಿರು ಬಣ್ಣಗಳ ಆಯ್ಕೆ ಜೊತೆಗೆ ಉತ್ತಮ ಆಡಿಯೊ ಗುಣಮಟ್ಟ ಒಳಗೊಂಡಿರಲಿದೆ. ಹೊಸ ಡಿವೈಸ್‌ ಆಡಿಯೊ ಫೀಚರ್ಸ್‌ಗಳ ಬಗ್ಗೆ ಸಂಸ್ಥೆಯು ಹೆಚ್ಚುವರಿಯಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಬಾರಿಯ ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ ಇಯರ್‌ಫೋನ್ ಸುಧಾರಿತ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ.

ಒನ್‌ಪ್ಲಸ್‌ 8

ಇದೇ ಏ.14 ರಂದು ಒನ್‌ಪ್ಲಸ್‌ ಸಂಸ್ಥೆಯು ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಸರಣಿ ಲಾಂಚ್‌ಗೆ ತಯಾರಾಗುತ್ತಿದೆ. ಇನ್ನು ಈ ಸರಣಿಯು ಒನ್‌ಪ್ಲಸ್ 8 ಲೈಟ್, ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್‌ ಮಾದರಿಗಳನ್ನು ಒಳಗೊಂಡಿರಲಿದೆ ಜೊತೆಗೆ ಒನ್‌ಪ್ಲಸ್‌ ಬುಲೆಟ್ ಇಯರ್‌ಬಡ್ಸ್‌ Z ಸಹ ಬಿಡುಗಡೆ ಆಗಲಿದೆ. ಲೀಕ್ ಮಾಹಿತಿ ಪ್ರಕಾರ ಒನ್‌ಪ್ಲಸ್‌ 8 ಸರಣಿಯ ಫೋನ್‌ಗಳ ಫೀಚರ್ಸ್‌ ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 8 ಲೈಟ್‌

ಒನ್‌ಪ್ಲಸ್‌ 8 ಲೈಟ್‌

ಒನ್‌ಪ್ಲಸ್‌ 8 ಸರಣಿಯಲ್ಲಿ ಒನ್‌ಪ್ಲಸ್‌ 8 ಲೈಟ್ ಸಹ ಒಂದಾಗಿರಲಿದೆ. ಇನ್ನು ಈ ಫೋನ್ ಬಹುತೇಕ ಒನ್‌ಪ್ಲಸ್‌ 7T ಫೋನಿನಂತೆ ಇರಲಿದೆ ಎನ್ನಲಾಗಿದೆ. 5G ನೆಟವರ್ಕ್ ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಹಾಗೂ ಈ ಫೋನ್ 1000 Dimensity ಸಾಮರ್ಥ್ಯದ ಮೀಡಿಯಾ ಟೆಕ್ ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. 6.4 ಇಂಚಿನ ಡಿಸ್ಪ್ಲೇ ಹೊಂದಿರಲಿದ್ದು, ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿರುತ್ತದೆ. ಮುಖ್ಯ ಕ್ಯಾಮೆರಾವು 48ಎಂಪಿ ಇರುವ ಸಾಧ್ಯತೆಗಳಿವೆ. ಇನ್ನು ಇದೊಂದು ಅತ್ಯುತ್ತಮ ಫ್ಲ್ಯಾಗ್‌ಶಿಫ್ ಫೋನ್ ಎಂಬ ಹೆಗ್ಗಳಿಕೆ ಗಳಿಸಲಿದೆಯೇ ಎನ್ನುವುದು ಕಾದು ನೋಡಬೇಕಿದೆ.

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8 ಫೋನ್ ಸಾಕಷ್ಟು ಹೊಸ ಅಪ್‌ಡೇಟ್ ವರ್ಷನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್‌ ಒಳಗೊಂಡಿರಲಿದ್ದು, ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಇರಲಿದೆ. ಹಾಗೆಯೇ ಈ ಫೋನ್ 60ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದ್ದು, ಹೆಚ್ಚಿನ ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡುವ ಲಕ್ಷಣಗಳಿವೆ. AMOLED ಮಾದರಿಯ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇ ರೀಫ್ರೇಶ ರೇಟ್ 90Hz ಆಗಿರಲಿದೆ.

Best Mobiles in India

English summary
OnePlus Bullets Wireless Z will launch with OnePlus 8 series on April 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+