ಸ್ಮಾರ್ಟ್‌ಟಿವಿ ತಯಾರಿಕೆಯತ್ತ ಒಲವು ಹರಿಸಿದ 'ಒನ್‌ಪ್ಲಸ್‌'.!

|

ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್‌ ತನ್ನ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಗ್ರಾಹಕರ ಮನಗೆದ್ದಿದ್ದು, ಈ ವರ್ಷ ಮತ್ತೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡವ ಯೋಜನೆಯಲ್ಲಿದೆ. ಆದರೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡುವ ಬಗ್ಗೆ ಸದ್ಯ ಯಾವುದೇ ಆಲೋಚನೆ ಇಲ್ಲ ಬದಲಿಗೆ ಸ್ಮಾರ್ಟ್‌ಟಿವಿ ತಯಾರಿಕೆಯತ್ತ ಚಿತ್ತ ಇದೆ.

ಸ್ಮಾರ್ಟ್‌ಟಿವಿ ತಯಾರಿಕೆಯತ್ತ ಒಲವು ಹರಿಸಿದ 'ಒನ್‌ಪ್ಲಸ್‌'.!

ಹೌದು, ಪ್ರಸ್ತುತ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಗಮನ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಒನ್‌ಪ್ಲಸ್‌ ಕಂಪನಿಯು ಸಹ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಿದೆ ಎನ್ನಲಾಗಿತ್ತು. ಆದರೆ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಬದಲಿಗೆ ಸ್ಮಾರ್ಟ್‌ಟಿವಿ ತಯಾರಿಕೆಯತ್ತ ಒಲವು ಇರುವುದಾಗಿ ಕಂಪನಿಯ ಸಿಇಓ ಪೀಟ್ ಲೌ ಅವರು ತಿಳಿಸಿದ್ದಾರೆ.

ಸ್ಮಾರ್ಟ್‌ಟಿವಿ ತಯಾರಿಕೆಯತ್ತ ಒಲವು ಹರಿಸಿದ 'ಒನ್‌ಪ್ಲಸ್‌'.!

ಒನ್‌ಪ್ಲಸ್‌ ಕಂಪನಿಯು ತನ್ನ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವತ್ತ ಹೆಜ್ಜೆ ಇರಿಸುವುದಾಗಿ ತಿಳಿಸಿದ್ದು, ಅದಕ್ಕಾಗಿ ಸ್ಮಾರ್ಟ್‌ಟಿವಿ ತಯಾರಿಗೆ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಈ ವರ್ಷದಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್‌ ಮಾಡುವ ತಯಾರಿಯಲ್ಲಿದ್ದು, ಈ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ನೂತನ ಫೀಚರ್ಸ್‌ಗಳನ್ನು ಪರಿಚಯಿಸಲಿದೆ.

ಸ್ಮಾರ್ಟ್‌ಟಿವಿ ತಯಾರಿಕೆಯತ್ತ ಒಲವು ಹರಿಸಿದ 'ಒನ್‌ಪ್ಲಸ್‌'.!

ಅತ್ಯುತ್ತಮ ರೆಸಲ್ಯೂಶನ್ ಇರುವ ಹೊಸ ತಂತ್ರಜ್ಞಾನದ ಡಿಸ್‌ಪ್ಲೇಗಳು ಗ್ರಾಹಕರನ್ನು ಆಕರ್ಷಿಸುತ್ತವೆ, ಹಾಗೇ ಇದೀಗ ಕೃತಕ ಬುದ್ಧಿಮತ್ತೆ AI ಟೆಕ್ನಾಲಜಿ ಸ್ಮಾರ್ಟ್‌ಟಿವಿಗಳಲ್ಲಿ ಸಾಕಷ್ಟು ಹೊಸ ಗ್ರಹಿಕೆಯ ಅಂಶಗಳನ್ನು ಸೇರಿಸಿಕೊಳ್ಳುತ್ತಿವೆ. ಇದರೊಂದಿಗೆ ಬಜೆಟ್‌ ದರದಲ್ಲಿ ಸ್ಮಾರ್ಟ್‌ಟಿವಿ ಲಭ್ಯವಾದರೆ ಹೆಚ್ಚು ಗ್ರಾಹಕರು ಸ್ಮಾರ್ಟ್‌ಟಿವಿಗಳತ್ತ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ.

ಸ್ಮಾರ್ಟ್‌ಉತ್ಪನ್ನಗಳು ಸೇರಿದಂತೆ ಸ್ಮಾರ್ಟ್‌ಟಿವಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಹೀಗಾಗಿ ಕಂಪನಿಯು ಟಿವಿ ತಯಾರಿಕೆ ಹೊಸ ಹೆಜ್ಜೆ ಇರಿಸಿದೆ. ಈಗಾಗಲೇ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಗುಣಮಟ್ಟ ಗ್ರಾಹಕರ ಮೆಚ್ಚುಗೆ ಗಳಿಸಿದ್ದು, ಅದೇ ತರಹ ಸ್ಮಾರ್ಟ್‌ಟಿವಿಗಳು ಸಹ ಗ್ರಾಹಕರನ್ನು ಸೆಳೆಯುತ್ತವೆ ಎನ್ನಲಾಗುತ್ತಿದೆ.

ಓದಿರಿ :ಆರು ಸ್ಪೆಷಲ್ ಫೀಚರ್ಸ್‌ಗಳ ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಟಿವಿ ಖರೀದಿಗೆ ಯೋಗ್ಯ.! ಓದಿರಿ :ಆರು ಸ್ಪೆಷಲ್ ಫೀಚರ್ಸ್‌ಗಳ ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಟಿವಿ ಖರೀದಿಗೆ ಯೋಗ್ಯ.!

Best Mobiles in India

English summary
OnePlus is working on building a TV or a “smart display” as Lau calls it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X