Home
ಸುದ್ದಿಜಾಲ

OnePlus: ಒನ್‌ಪ್ಲಸ್ ನಿಂದ ಕಮ್ಯೂನಿಟಿ ಸೇಲ್‌, ಹಲವು ಡಿವೈಸ್‌ಗಳಿಗೆ 17,000 ರೂ. ಕ್ಕಿಂತ ಹೆಚ್ಚಿನ ರಿಯಾಯಿತಿ

ಒನ್‌ಪ್ಲಸ್ (OnePlus) ಆಗಾಗ್ಗೆ ವಿಶೇಷ ಸೇಲ್‌ ಆಯೋಜನೆ ಮಾಡುವ ಮೂಲಕ ಕೈಗೆಟಕುವ ದರದಲ್ಲಿ ತನ್ನ ಗ್ರಾಹಕರಿಗೆ ಸ್ಮಾರ್ಟ್‌ಡಿವೈಸ್‌ಗಳನ್ನು ಖರೀದಿ ಮಾಡಲು ಅನುವು ಮಾಡಿಕೊಡುತ್ತದೆ. ಅದರಂತೆ ಈಗ ಒನ್‌ಪ್ಲಸ್‌ ಕಮ್ಯೂನಿಟಿ ಸೇಲ್ (OnePlus Community Sale)‌ ಬಗ್ಗೆ ಘೋಷಣೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರು ಸ್ಮಾರ್ಟ್‌ಫೋನ್‌ ಸೇರಿದಂತೆ ವಿವಿಧ ರೀತಿಯ ಡಿವೈಸ್‌ಗಳನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಹೌದು, ಒನ್‌ಪ್ಲಸ್‌ ಇದೀಗ ಅಧಿಕೃತವಾಗಿ ಒನ್‌ಪ್ಲಸ್ ನಿಂದ ಕಮ್ಯೂನಿಟಿ ಸೇಲ್‌ ಬಗ್ಗೆ ಘೋಷಣೆ ಮಾಡಿದ್ದು, ಈ ವಿಶೇಷ ಸೇಲ್‌ ಡಿಸೆಂಬರ್ 17 (2023) ವರೆಗೆ ಇರಲಿದೆ ಎಂದು ತಿಳಿಸಿದೆ. ಈ ಸೇಲ್‌ನಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಪ್ರೀಮಿಯಂ ಮತ್ತು ಪ್ರಮುಖ ಡಿವೈಸ್‌ಗಳ ವರೆಗೆ ಎಲ್ಲದರ ಮೇಲೆ ಉತ್ತಮ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ ಅನ್ನೋದನ್ನು ನೋಡೋಣ.

ಒನ್‌ಪ್ಲಸ್ ನಿಂದ ಕಮ್ಯೂನಿಟಿ ಸೇಲ್‌, ಹಲವು ಡಿವೈಸ್‌ಗಳಿಗೆ ಭಾರೀ ರಿಯಾಯಿತಿ...

ಒನ್‌ಪ್ಲಸ್ ಕಮ್ಯೂನಿಟಿ ಸೇಲ್‌: ಒನ್‌ಪ್ಲಸ್ ಇದೀಗ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುವ ಹೊಸ ಸೇಲ್ ಅನ್ನು ಆರಂಭಿಸಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿ ಅಥವಾ ಇತರ ಗ್ಯಾಜೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ನೀವು ಕ್ರಿಸ್ಮಸ್ ಉಡುಗೊರೆಯನ್ನು ಖರೀದಿ ಮಾಡಲು ಮುಂದಾಗಿದ್ರೆ ಅಥವಾ ನಿಮ್ಮ ಡಿವೈಸ್‌ ಅನ್ನು ಅಪ್‌ಗ್ರೇಡ್ ಮಾಡಲು ಮುಂದಾಗಿದ್ರೆ ಇದು ಅತ್ಯುತ್ತಮ ಸಮಯ ಆಗಿದೆ.

ವಿನಿಮಯ ಕೊಡುಗೆ: ನೀವು ಹಳೆಯ ಸ್ಮಾರ್ಟ್‌ಫೋನ್ ಹೊಂದಿದ್ದರೆ ಮತ್ತು ಅದನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧರಿದ್ದರೆ, ಈ ಸೇಲ್‌ನಲ್ಲಿ ಹೆಚ್ಚುವರಿ ಹಣ ಉಳಿತಾಯದೊಂದಿಗೆ ಆಫರ್ ಅನ್ನು ರಿಡೀಮ್ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಬ್ಯಾಂಕ್‌ ಆಫರ್ ಸಹ ಇದ್ದು, ಪರಿಣಾಮ ಇನ್ನೂ ಹೆಚ್ಚಿನ ಆಫರ್ ಅನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ.

ಒನ್‌ಪ್ಲಸ್ ನಿಂದ ಕಮ್ಯೂನಿಟಿ ಸೇಲ್‌, ಹಲವು ಡಿವೈಸ್‌ಗಳಿಗೆ ಭಾರೀ ರಿಯಾಯಿತಿ...

ಒನ್‌ಪ್ಲಸ್‌ 10 ಪ್ರೊ ಗೆ ಏನಿದೆ ಆಫರ್?: ಒನ್‌ಪ್ಲಸ್‌ 10 ಪ್ರೊ (OnePlus 10 Pro) ನ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 66,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು. ಈ ವಿಶೇಷ ಸೇಲ್‌ನಲ್ಲಿ ನೀವು 17,000 ರೂ.ಗಳ ಹೆಚ್ಚುವರಿ ರಿಯಾಯಿತಿಯೊಂದಿಗೆ ಇದನ್ನು ಖರೀದಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಇದಲ್ಲದೆ, ಗ್ರಾಹಕರಿಗೆ 5,000 ವರೆಗೆ ಬ್ಯಾಂಕ್ ರಿಯಾಯಿತಿ ಸಹ ಇದ್ದು, ಎಕ್ಸ್‌ಚೇಂಜ್ ಆಫರ್‌ನೊಂದಿಗೆ, 32,000 ರೂಪಾಯಿಗಳ ಬೆಲೆಯಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಜೊತೆಗೆ ಈ ಫೋನ್‌ ಅನ್ನು 3,248 ರೂ.ಗಳ ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್ ನಿಂದ ಕಮ್ಯೂನಿಟಿ ಸೇಲ್‌, ಹಲವು ಡಿವೈಸ್‌ಗಳಿಗೆ ಭಾರೀ ರಿಯಾಯಿತಿ...

ಒನ್‌ಪ್ಲಸ್ 10T 5G ಸ್ಮಾರ್ಟ್‌ಗೆ ಎಷ್ಟು ಆಫರ್?: ಇನ್ನು ಒನ್‌ಪ್ಲಸ್ 10T 5G (OnePlus 10T 5G) ಅನ್ನು ಸಹ ಈ ವೇಳೆ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಈ ಫೋನ್‌ 54,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಸುಮಾರು 12,000 ರೂ.ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಗ್ರಾಹಕರು 5,000ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ವಿನಿಮಯ ಆಫರ್‌ನಲ್ಲಿ 32,000ರೂ.ವರೆಗೆ ಉಳಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸರ್‌ ಪಡೆದುಕೊಂಡಿದೆ.

ಒನ್‌ಪ್ಲಸ್ ನಿಂದ ಕಮ್ಯೂನಿಟಿ ಸೇಲ್‌, ಹಲವು ಡಿವೈಸ್‌ಗಳಿಗೆ ಭಾರೀ ರಿಯಾಯಿತಿ...

ಒನ್‌ಪ್ಲಸ್‌ 10R 5G ಫೋನ್‌ಗೂ ಆಫರ್: ಇನ್ನು ಒನ್‌ಪ್ಲಸ್‌ 10R 5G (OnePlus 10R 5G) ಫೋನ್‌ಗೂ ಸಹ ಈ ವೇಳೆ ಆಫರ್ ಲಭ್ಯ ಇದೆ. ಅಂದರೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಆಯ್ಕೆ ಇರುವ ಒನ್‌ಪ್ಲಸ್ 10R 5G ಫೋನ್‌ಗೆ ಈ ವಿಶೇಷ ಸೇಲ್‌ನಲ್ಲಿ 7,000 ರೂಪಾಯಿಗಳ ರಿಯಾಯಿತಿ ನೀಡಲಾಗಿದೆ. ಇದರೊಂದಿಗೆ ಗ್ರಾಹಕರು ವಿನಿಮಯ ಕೊಡುಗೆಗಳಲ್ಲಿ 32,000 ಕ್ಕಿಂತ ಹೆಚ್ಚಿನ ಹಣ ಉಳಿಸಬಹುದಾಗಿದೆ. ಇದರೊಂದಿಗೆ 1,697 ಕ್ಕಿಂತ ಕಡಿಮೆ ಬೆಲೆಯ ಇಎಮ್‌ಐ ಆಯ್ಕೆ ಲಭ್ಯವಿದೆ.

Best Mobiles in India

English summary
OnePlus has launched a community sale. In this special sale, you can get huge offers on OnePlus 10 Pro, OnePlus 10T 5G, OnePlus 10R 5G phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+