Subscribe to Gizbot

ದೇಶದ ಹತ್ತು ನಗರಗಳಲ್ಲಿ ಎಕ್ಸ್‌ಪೀರಿಯನ್ಸ್ ಸ್ಟೋರ್ಸ್ ತೆರೆಯುತ್ತಿದೆ 'ಒನ್‌ಪ್ಲಸ್'!!

Written By:

ಕೇವಲ ಮೂರು ವರ್ಷಗಳ ಹಿಂದಷ್ಟೆ ಭಾರತಕ್ಕೆ ಕಾಲಿಟ್ಟು ಅತಿ ಹೆಚ್ಚು ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾ ಮೂಲದ ಒನ್‌ಪ್ಲಸ್ ಮೊಬೈಲ್ ಕಂಪೆನಿ ಭಾರತದ ಪ್ರಮುಖ 10 ನಗರಗಳಲ್ಲಿ ತನ್ನ ಆಫ್ಲೈನ್ ವಹಿವಾಟು ಮತ್ತು ಸರ್ವಿಸ್ ಸೆಂಟರ್‌ಗಳನ್ನು ವಿಸ್ತರಿಸಿ ಸೇವೆಯನ್ನು ನಿಡುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷವೇ ಬೆಂಗಳೂರಿನಲ್ಲಿ ಮೊದಲ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್ ತೆರೆದು ಯಶಸ್ವಿಯಾಗಿದ್ದು, ದೆಹಲಿ, ಮುಂಬೈ ಹಾಗೂ ಚೆನ್ನೈ ಸೇರಿದಂತೆ ಹಲವು ಮೆಟ್ರೊ ನಗರಗಳಲ್ಲಿ ಶೀಘ್ರವೇ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳನ್ನು ತೆರೆಯುವುದಾಗಿ ಒನ್‌ಪ್ಲಸ್ ಇಂಡಿಯಾದ ಜನರಲ್ ಮ್ಯಾನೆಜರ್ ವಿಕಾಸ್ ಅಗರ್‌ವಾಲ್ ಅವರು ಹೇಳಿದ್ದಾರೆ.

ದೇಶದ ಹತ್ತು ನಗರಗಳಲ್ಲಿ ಎಕ್ಸ್‌ಪೀರಿಯನ್ಸ್ ಸ್ಟೋರ್ಸ್ ತೆರೆಯುತ್ತಿದೆ 'ಒನ್‌ಪ್ಲಸ್'

ಭಾರತದ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆಪಲ್ ಕಂಪೆನಿಗೆ ಸರಿಸಮಾನವಾಗಿ ಒನ್‌ಪ್ಲಸ್ ಕಂಪೆನಿ ಬೆಳೆದುನಿಂತಿದೆ. ಕಳೆದ ಒಂದು ವರ್ಷದಿಂದಲೂ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಮಾರಾಟ ಪ್ರಮಾಣ ಹಲವು ಹೆಚ್ಚಾಗಿದ್ದು, ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 1,116 ಪರ್ಸೆಂಟ್ ಹೆಚ್ಚಳವಾಗಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

ದೇಶದ ಹತ್ತು ನಗರಗಳಲ್ಲಿ ಎಕ್ಸ್‌ಪೀರಿಯನ್ಸ್ ಸ್ಟೋರ್ಸ್ ತೆರೆಯುತ್ತಿದೆ 'ಒನ್‌ಪ್ಲಸ್'

ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ ಪ್ರಕಾರ, ಒನ್‌ಪ್ಲಸ್ ಕಂಪೆನಿ 2017ನೇ ನಾಲ್ಕನೇ ತ್ರೈ ಮಾಸಿಕದಲ್ಲಿ 287,000 ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಶೇ.47.3 ರಷ್ಟು ಪಾಲನ್ನು ಹೊಂದುವ ಮೂಲಕ ಚೀನಾದಲ್ಲಿ ಸಿಕ್ಕಿರುವ ಯಶಸ್ಸಿಗಿಂತ ಹೆಚ್ಚು ಯಶಸ್ಸನ್ನು ಭಾರತದಲ್ಲಿ ಗಳಿಸಿಕೊಂಡಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ ಭಾರೀ ಇಳಿಕೆ!!

English summary
OnePlus company captured 47.3 per cent of the premium smartphone market share and shipped 287,000 devices in the fourth quarter of 2017 . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot