ಒನ್‌ಪ್ಲಸ್‌ ಫಿಟ್‌ನೆಸ್ ಬ್ಯಾಂಡ್ V/S ಮಿ ಬ್ಯಾಂಡ್ 5: ಖರೀದಿಗೆ ಯಾವುದು ಬೆಸ್ಟ್‌?

|

ಸದ್ಯ ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಬ್ಯಾಂಡ್‌ಗಳ ಟ್ರೆಂಡ್‌ ಜೋರಾಗಿದ್ದು, ಪ್ರತಿಷ್ಠಿತ ಮೊಬೈಲ್‌ ತಯಾರಿಕಾ ಕಂಪನಿಗಳು ಫಿಟ್ನೆಸ್‌ ಬ್ಯಾಂಡ್‌ ಪರಿಚಯಿಸುತ್ತಿವೆ. ಶಿಯೋಮಿಯ ಬ್ಯಾಂಡ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಆ ಸಾಲಿಗೆ ಒನ್‌ಪ್ಲಸ್‌ ಕಂಪನಿಯು ಈಗ ಲಗ್ಗೆ ಇಟ್ಟಿದೆ. ಒನ್‌ಪ್ಲಸ್ ಕಂಪನಿಯು ಹೊಸದಾಗಿ ಫಿಟ್‌ನೆಸ್ ಬ್ಯಾಂಡ್ ಲಾಂಚ್ ಮಾಡಿದ್ದು, ಇದು ಶಿಯೋಮಿಯ ಇತ್ತೀಚಿನ ಬ್ಯಾಂಡ್‌ 5 ಡಿವೈಸ್‌ ಪೈಪೋಟಿ ನೀಡುವಂತಿದೆ.

ಬ್ಯಾಂಡ್

ಒನ್‌ಪ್ಲಸ್‌ ಫಿಟ್‌ನೆಸ್ ಬ್ಯಾಂಡ್ ಮತ್ತು ಮಿ ಬ್ಯಾಂಡ್ 5 ಡಿವೈಸ್ ಎರಡು ಅತ್ಯುತ್ತಮ ಫಿಟ್ನೆಸ್ ಸಾಧನಗಳಾಗಿವೆ. ಈ ಎರಡು ಬ್ಯಾಂಡ್‌ಗಳು ಬಳಕೆದಾರರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಸೌಲಭ್ಯಗಳನ್ನು ಹೊಂದಿವೆ. ಇದರೊಂದಿಗೆ ಇನ್‌ಡೋರ್‌ ಹಾಗೂ ಔಟ್‌ಡೋರ್‌ ಕ್ರೀಡೆಗಳು ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಆಯ್ಕೆಗಳನ್ನು ಪಡೆದಿದೆ. ಆದರೆ ಈ ಎರಡು ಬ್ಯಾಂಡ್‌ಗಳು ಕೆಲವು ಭಿನ್ನತೆಗಳನ್ನು ಪಡೆದಿವೆ. ಆ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ವಿನ್ಯಾಸ ಹೇಗಿದೆ

ಒನ್‌ಪ್ಲಸ್ ಬ್ಯಾಂಡ್ 126x294 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.6-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ. ಅದೇ ರೀತಿ ಶಿಯೋಮಿ ಮಿ ಬ್ಯಾಂಡ್ 5 ಡಿವೈಸ್‌ 1.1-ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95-ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ.

ಫಿಟ್ನೆಸ್ ಫೀಚರ್ಸ್‌ಗಳು ಹೇಗಿವೆ

ಫಿಟ್ನೆಸ್ ಫೀಚರ್ಸ್‌ಗಳು ಹೇಗಿವೆ

ಒನ್‌ಪ್ಲಸ್‌ ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌, ತ್ರೀ-ಆಕ್ಸಿಸ್‌ ಅಕ್ಸಿಲೆರೊಮೀಟರ್‌ ಮತ್ತು ಗೈರೊಸ್ಕೋಪ್ ಮತ್ತು ಆಪ್ಟಿಕಲ್ ಹಾರ್ಟ್‌ ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿರುವ ಸೆನ್ಸಾರ್‌ಗಳ ಒಂದು ಶ್ರೇಣಿಯೊಂದಿಗೆ ಬರಲಿದೆ. ಔಟ್‌ಡೋರ್‌ ರನ್, ಇನ್‌ಡೋರ್‌ ರನ್, ಫ್ಯಾಟ್ ಬರ್ನ್ ರನ್, ಔಟ್‌ಡೋರ್‌ ವಾಕ್, ಔಟ್‌ಡೋರ್‌ ಸೈಕ್ಲಿಂಗ್, ಇನ್‌ಡೋರ್‌ ಸೈಕ್ಲಿಂಗ್, ಎಲಿಪ್ಟಿಕಲ್ ಟ್ರೈನರ್, ರೋಯಿಂಗ್ ಮೆಷಿನ್, ಕ್ರಿಕೆಟ್, ಬ್ಯಾಡ್ಮಿಂಟನ್, ಪೂಲ್ ಸ್ವಿಮ್ಮಿಂಗ್‌, ಯೋಗ ಮತ್ತು ಉಚಿತ ತರಬೇತಿ ಸೇರಿದಂತೆ 13 ವ್ಯಾಯಾಮ ವಿಧಾನಗಳನ್ನು ಒನ್‌ಪ್ಲಸ್ ಇದರಲ್ಲಿ ಮೊದಲೇ ಲೋಡ್ ಮಾಡಿದೆ.

ಸ್ಮಾರ್ಟ್‌ಬ್ಯಾಂಡ್‌

ಇನ್ನು ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಹಾರ್ಟ್‌ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಡಿವೈಸ್ ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮಹಿಳಾ ಬಳಕೆದಾರರು ತಮ್ಮ ದೈಹಿಕ ಆರೋಗ್ಯ ಕ್ರಮದೊಂದಿಗೆ ಟ್ರ್ಯಾಕ್ ಮಾಡಬಹುದು. ಜೊತೆಗೆ ಬಳಕೆದಾರರು ಸೊಶೀಯಲ್‌ ಮೀಡಿಯಾ ಆಲರ್ಟ್‌, ಮ್ಯೂಸಿಕ್‌ ಕಂಟ್ರೋಲ್‌, ಇನ್‌ಕಮಿಂಗ್‌ ಕರೆಗಳು, ಪಠ್ಯ, ವೆದರ್‌ ಆಪ್ಡೆಟ್‌, ಮತ್ತು ಇತರೆ ಸೌಲಭ್ಯಗಳನ್ನು ಪಡೆದಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಒನ್‌ಪ್ಲಸ್‌ ಫಿಟ್ನೆಸ್‌ ಬ್ಯಾಂಡ್‌ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಸುಮಾರು 14 ದಿನಗಳ ಬ್ಯಾಟರಿ ಬಾಳಿಕೆಯನ್ನು ಸಪೋರ್ಟ್‌ ಮಾಡುತ್ತದೆ ಎನ್ನಲಾಗಿದೆ. ಇನ್ನು ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಬಳಕೆದಾರರು ಪಟ್ಟಿಗಳನ್ನು ತೆಗೆಯದೆ ಈ ಡಿವೈಸ್‌ ಅನ್ನು ಚಾರ್ಜ್ ಮಾಡಲು ಅವಕಾಶವನ್ನ ನೀಡಲಾಗಿದೆ. ಇನ್ನು ಮಿ ಬ್ಯಾಂಡ್ 5 ರ NFC ರೂಪಾಂತರವು 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ.

Most Read Articles
Best Mobiles in India

English summary
OnePlus Fitness Band vs Mi Band 5: Which One Best To Buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X