ಲಾಂಚ್ ಆಗುವ ಮುನ್ನವೇ ಒನ್‌ಪ್ಲಸ್ ಫೋಲ್ಡಬಲ್ ಫೋನ್ ಅನುಷ್ಕಾ ಶರ್ಮಾ ಬಳಿ!
ಒನ್‌ಪ್ಲಸ್ (OnePlus) ಫೋನ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಈ ನಡುವೆ ಸಾಕಷ್ಟು ಒನ್‌ಪ್ಲಸ್ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಈ ನಡುವೆ ಭಾರತದಲ್ಲಿ ಒನ್‌ಪ್ಲಸ್ ಫೋಲ್ಡಬಲ್ ಫೋನ್ ಲಾಂಚ್ ಶೀಘ್ರದಲ್ಲೇ ಆಗಲಿದೆ. ವಿಶೇಷ ಏನೆಂದರೆ ಈ ಫೋನ್ ಲಾಂಚ್ ಆಗುವ ಮುನ್ನವೇ ಅನುಷ್ಕಾ ಶರ್ಮಾ (Anushka Sharma) ಬಳಿ ಇರುವುದು.
ಹೌದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Bollywood actress Anushka Sharma) ಬಳಿ ಇನ್ನೂ ಲಾಂಚ್ ಆಗದ ಒನ್‌ಪ್ಲಸ್ ಫೋನ್ ಪೋಲ್ಡಬಲ್ (OnePlus foldable phone) ಫೋನ್ ಇದೆ. ಶರ್ಮಾ ಅವರು ಈ ಸ್ಮಾರ್ಟ್‌ಫೋನ್ ಅನ್ನು ಸಾರ್ವಜನಿಕವಾಗಿ ಬಳಕೆ ಮಾಡಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಿದ್ರೆ, ಈ ಫೋನ್‌ನ ಫೀಚರ್ಸ್ ಹೇಗಿರಲಿದೆ?, ಇದರ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿಶೇಷ ಫೋನ್‌ನೊಂದಿಗೆ ಕಾಣಿಸಿಕೊಂಡಿದ್ದು ಭಾರೀ ಸಂಚಲನ ಉಂಟು ಮಾಡಿದೆ. ಎಕ್ಸ್ ಅಕಾ ಟ್ವಿಟ್ಟರ್‌ನಲ್ಲಿ ಹಾಕ್-ಐಡ್ ಟೆಕ್ ತಜ್ಞರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಇನ್ನು ಈ ಫೋನ್ ಒನ್‌ಪ್ಲಸ್‌ನ ಮೊದಲ ಮಡಿಸಬಹುದಾದ ಡಿವೈಸ್ ಎಂದು ಉಲ್ಲೇಖ ಮಾಡಿದ್ದಾರೆ. ವದಂತಿಗಳ ಪ್ರಕಾರ, ಈ ಫೋಲ್ಡಬಲ್ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಫೋನ್ ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ.
ಶರ್ಮಾ ಅವರ ವಿಡಿಯೋವನ್ನು ಬಾಲಿವುಡ್ ಛಾಯಾಗ್ರಾಹಕ ವೈರಲ್ ಭಯಾನಿ ಸೆರೆಹಿಡಿದಿದ್ದಾರೆ. ಆದರೆ, ನಂತರ ಟಿಪ್‌ಸ್ಟರ್ ಆನ್‌ಲೀಕ್ಸ್ ಅವರು ಎಕ್ಸ್ ಅಕಾ ಟ್ವಿಟರ್‌ನಲ್ಲಿ ಮರುಪೋಸ್ಟ್ ಮಾಡಿಕೊಂಡಿದ್ದಾರೆ. ಈ ವೇಳೆ ಶರ್ಮಾ ಬಳಸುತ್ತಿರುವ ಫೋನ್ ಸಾಮಾನ್ಯ ಫೋನ್ ಅಲ್ಲ ಒನ್‌ಪ್ಲಸ್ ಓಪನ್ ಫೋನ್ ಆಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ನೀವಂದು ಕೊಂಡಿರಬಹುದು ಅದು ಬೇರೆ ಫೋನ್ ಇರಬಹುದು. ಆದರೆ, ಇದಕ್ಕೆ ಸಾಕ್ಷಿ ಎಂಬಂತೆ ಅನುಷ್ಕಾ ಶರ್ಮಾ ಡಿವೈಸ್ ಅನ್ನು ತೆರೆಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಮೂಲಕ ಇದು ಒನ್‌ಪ್ಲಸ್ ಫೋಲ್ಡಬಲ್ ಎಂದು ದೃಢೀಕರಿಸುತ್ತದೆ.
ಗಮನಿಸಬೇಕಾದ ವಿಷಯ ಏನೆಂದರೆ ಶರ್ಮಾ ಅವರು ಫೋನ್ ಅನ್ನು ಕಾರಿನಿಂದ ಹೊರಗಿರುವವರಿಗೆ ಕಾಣುವಂತೆ ಹಿಡಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಉದ್ದೇಶಪೂರ್ವಕವಾಗಿ ನಿಧಾನಗತಿಯ ಚಲನೆಯೊಂದಿಗೆ ಅದನ್ನು ಓಪನ್ ಮಾಡುವುದನ್ನು ನೋಡಬಹುದು. ಹಾಗೆಯೇ ಫೋನ್‌ನ ಒಂದು ಬದಿಯಲ್ಲಿ ದೊಡ್ಡ ಕ್ಯಾಮೆರಾ ಮಾಡ್ಯೂಲ್ ಇದ್ದು, ಜೊತೆಗೆ ಮೇಲಿನ ಮೂಲೆಯಲ್ಲಿ ಸಣ್ಣ ಫ್ಲ್ಯಾಶ್ ಆಯ್ಕೆ ನೀಡಲಾಗಿದೆ.
ಒನ್‌ಪ್ಲಸ್ ಓಪನ್ ಫೋಲ್ಡಬಲ್ ಗಾತ್ರದಲ್ಲಿ ಸಾಕಷ್ಟು ಗಣನೀಯವಾಗಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 5 ಅನ್ನು ಪ್ರತಿಬಿಂಬಿಸುವ ಬದಲು ಓಪನ್ ಪಿಕ್ಸೆಲ್ ಫೋಲ್ಡ್ ಅಥವಾ ಫೈಂಡ್ ಎನ್ 2 ನಂತಹ ವಿನ್ಯಾಸವನ್ನು ಈ ಫೋನ್ ಹೊಂದಿದೆ ಎಂದು ಹಿಂದಿನ ವದಂತಿಗಳು ಸೂಚಿಸಿವೆ. ಆದಾಗ್ಯೂ ಶರ್ಮಾ ಬಳಿ ಕಾಣಿಸಿಕೊಂಡಿರುವ ಫೋನ್ ಇದನ್ನು ಖಚಿತವಾಗಿ ದೃಢೀಕರಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
ಒನ್‌ಪ್ಲಸ್ ಫೋಲ್ಡಬಲ್ ಫೋನ್ ನಿರೀಕ್ಷಿತ ಫೀಚರ್ಸ್ ವಿವರ: ಒನ್‌ಪ್ಲಸ್ ನಿಂದ ಫೋಲ್ಡ್ ಮಾಡಬಹುದಾದ ಡಿವೈಸ್ ಹೆಚ್ಚಿನ ಕಾರ್ಯಕ್ಷಮತೆಯ ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8 ಜನ್ 2 SoC ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು 6.3 ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಜೊತೆಗೆ ಉದಾರವಾದ 7.8 ಇಂಚಿನ 2K ಅಮೋಲೆಡ್ ಪ್ರಾಥಮಿಕ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಎರಡೂ ಮೃದುವಾದ 120Hz ರಿಫ್ರೆಶ್ ರೇಟ್‌ನೊಂದಿಗೆ ಬೆರಗುಗೊಳಿಸುವಂತೆ ಹೊಂದಿಸಲಾಗಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಲೆನ್ಸ್ ಆಯ್ಕೆ ಇರಲಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಆಯ್ಕೆ ಪಡೆದುಕೊಂಡಿಲಿದೆ ಎಂದು ತಿಳಿದುಬಂದಿದ್ದು, 48 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಮತ್ತು ಅದರ ಹಿಂಭಾಗದಲ್ಲಿ 32 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್ ಆಯ್ಕೆ ಇರಲಿದೆ.


Click it and Unblock the Notifications








