Home
ಸುದ್ದಿಜಾಲ

OnePlus: ಒನ್‌ಪ್ಲಸ್‌ ಎಐ ಮ್ಯೂಸಿಕ್‌ ಸ್ಟುಡಿಯೋ! ನಿಮ್ಮದೇ ಹಾಡು ರಚಿಸಿ, ಸಿಂಗರ್‌ ಬೇಕಿಲ್ಲ, ಕಂಪೋಸರ್ ಕಂಪೋಸರ್ ಬೇಡವೇ ಬೇಡ!

ಒನ್‌ಪ್ಲಸ್‌ (OnePlus) ಆಗಾಗ್ಗೆ ತನ್ನೆಲ್ಲಾ ಗ್ರಾಹಕರಿಗೆ ಭಿನ್ನ ಸೌಲಭ್ಯವನ್ನು ಪರಿಚಯಿಸುವುದು ಸಾಮಾನ್ಯ ವಿಚಾರ. ಅದರಂತೆ ಈಗ ಒನ್‌ಪ್ಲಸ್‌ ಎಐ ಮ್ಯೂಸಿಕ್‌ ಸ್ಟುಡಿಯೋ (OnePlus AI Music Studio) ಬಗ್ಗೆ ಘೋಷಣೆ ಮಾಡಿದ್ದು, ಈ ಮೂಲಕ ತಮ್ಮದೇ ಆದ ಮ್ಯೂಸಿಕ್‌ ಮತ್ತು ವಿಡಿಯೋಗಳನ್ನು ಮಾಡುವುದಷ್ಟೇ ಅಲ್ಲದೆ ಭರ್ಜರಿ ಬಹುಮಾನಗಳನ್ನು ಸಹ ಗೆಲ್ಲಬಹುದಾಗಿದೆ.

ಹೌದು, ಈವರೆಗೂ ಒಂದು ಹಾಡನ್ನು ಕ್ರಿಯೇಟ್‌ ಮಾಡಲು ಹಲವಾರು ಜನರ ಅಗತ್ಯ ಇತ್ತು. ಜೊತೆಗೆ ಸಂಗೀತ ಸಂಯೋಜನೆ ಅನ್ನೋದು ಅಷ್ಟೊಂದು ಸುಲಭದ ಮಾತೂ ಸಹ ಆಗಿರಲಿಲ್ಲ. ಆದರೆ ಇನ್ಮುಂದೆ ಒಂದೇ ನಿಮಿಷದಲ್ಲಿ ಯಾರಾದರೂ ಉತ್ತಮವಾದ ಹಾಡನ್ನು ಕ್ರಿಯೇಟ್‌ ಮಾಡಬಹುದು, ಅದರಲ್ಲೂ ಈ ವಿಭಾಗದಲ್ಲಿ ಸಾಹಿತ್ಯವನ್ನು ಬರೆಯುವ ಅಗತ್ಯವಿಲ್ಲ. ಹಾಗಿದ್ರೆ ಏನಿದು ಹೊಸ ಸೌಲಭ್ಯ?, ಇದರ ಬಳಕೆ ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್‌ ಎಐ ಮ್ಯೂಸಿಕ್‌ ಸ್ಟುಡಿಯೋ! ನಿಮ್ಮದೇ ಹಾಡು ರಚಿಸಿ, ಸಿಂಗರ್‌ ಬೇಕಿಲ್ಲ

ಒನ್‌ಪ್ಲಸ್‌ ಎಐ ಮ್ಯೂಸಿಕ್‌ ಸ್ಟುಡಿಯೋ: ಮುಂಚೂಣಿಯಲ್ಲಿರುವ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಒನ್ ಪ್ಲಸ್ ಎಐ ಮ್ಯೂಸಿಕ್‌ ಸ್ಟುಡಿಯೋ (OnePlus AI Music Studio) ಪ್ರಯೋಜನ ನೀಡಲು ಮುಂದಾಗಿದೆ. ಪರಿಣಾಮ ಇನ್ಮುಂದೆ ಟ್ಯೂನ್ ಅನ್ನು ಹುಡುಕುವ ಅಗತ್ಯವಿಲ್ಲ, ಹಿನ್ನೆಲೆ ಸಂಗೀತಕ್ಕಾಗಿ ಕಲಾವಿದರನ್ನು ಬೇಟೆಯಾಗುವ ಅಥವಾ ಹಾಡಲು ಗಾಯಕರಿಗೆ ಮನವಿ ಮಾಡುವ ಅಗತ್ಯವೂ ಬರುವುದಿಲ್ಲವಂತೆ.

ಭವಿಷ್ಯದಲ್ಲಿ ಎಐ ತಂತ್ರಜ್ಞಾನ ಕ್ಷೇತ್ರ ಗಣನೀಯವಾಗಿ ಮುಂದೆ ಸಾಗಲಿದೆ. ಈ ಬಗ್ಗೆ ಜಗತ್ತಿಗೆ ಈಗಾಗಲೇ ಹಲವು ರೀತಿಯಲ್ಲಿ ಮನವರಿಕೆಯಾಗಿದೆ. ಅದರಂತೆ ಒನ್‌ಪ್ಲಸ್‌ ಎಐ ತಂತ್ರಜ್ಞಾನದ ಬೆಂಬಲದೊಂದಿಗೆ ಸಂಗೀತ ನಿರ್ಮಾಣ ಮಾಡಬಹುದಾಗಿದೆ. ಈ ಎಐ ಟೂಲ್ಸ್‌ ಬಳಕೆದಾರರಿಗೆ ನಿಮಿಷಗಳಲ್ಲಿ ತಮ್ಮದೇ ಆದ ಹಾಡುಗಳನ್ನು ರಚಿಸಲು ಅನುಮತಿಸುತ್ತದೆ. ಇದರಲ್ಲಿ ಬಳಕೆದಾರರು ಮಾಡಬೇಕಾಗಿರುವುದು ಟೆಕ್ಸ್ಟ (ಪ್ರಾಂಪ್ಟ್) ನಮೂದಿಸುವುದು. ಇದಾದ ನಂತರ ಎಲ್ಲವನ್ನೂ ಈ ಎಐ ಸ್ಟುಡಿಯೋ ನೋಡಿಕೊಳ್ಳುತ್ತದೆ!.

ಈ ಸಂಬಂಧ ಒನ್‌ಪ್ಲಸ್ ಮಾರುಕಟ್ಟೆ ನಿರ್ದೇಶಕಿ ಇಶಿತಾ ಗ್ರೋವರ್ ಮಾಹಿತಿ ನೀಡಿದ್ದು, ಗಡಿಗಳನ್ನು ಮುಂದಿಟ್ಟುಕೊಂಡು ತಂತ್ರಜ್ಞಾನವನ್ನು ಬೆಳೆಸಲು ತಾವು ಬದ್ಧರಾಗಿದ್ದೇವೆ. ಒನ್‌ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ ಜನರು ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಮತ್ತು ಪೋಷಿಸಲು ಸಹಾಯ ಮಾಡುವ ಅವರ ಬದ್ಧತೆಯ ಫಲಿತಾಂಶವಾಗಿದೆ. ಹಾಗೆಯೇ ಈ ಸ್ಟುಡಿಯೋ ಬಳಕೆದಾರರಿಗೆ ಸಾಹಿತ್ಯವನ್ನು ರಚಿಸಲು ಮತ್ತು ಅವುಗಳನ್ನು ಎಐ ರಚಿತವಾದ ಬೀಟ್‌ಗಳೊಂದಿಗೆ ಸಂಯೋಜಿಸಲು ಅನುಮತಿಸುತ್ತದೆ ಎಂದಿದ್ದಾರೆ.

ಒನ್‌ಪ್ಲಸ್‌ ಎಐ ಮ್ಯೂಸಿಕ್‌ ಸ್ಟುಡಿಯೋ! ನಿಮ್ಮದೇ ಹಾಡು ರಚಿಸಿ, ಸಿಂಗರ್‌ ಬೇಕಿಲ್ಲ

ಇನ್ನು ಈ ಎಐ ಮ್ಯೂಸಿಕ್ ಸ್ಟುಡಿಯೋದಲ್ಲಿ ಹೊಸ ಹಾಡನ್ನು ರಚಿಸಿದ ನಂತರ, ಪ್ರಕಟಿಸು ಬಟನ್ ಅನ್ನು ಒತ್ತುವ ಮೂಲಕ ಇತರರೊಂದಿಗೆ ಶೇರ್‌ ಸಹ ಮಾಡಿಕೊಳ್ಳಬಹುದಾಗಿದೆ. ಅಂದರೆ ಈ ಮ್ಯೂಸಿಕ್‌ ಅನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಹಂಚಿಕೊಳ್ಳಬಹುದು. ಈ ವ್ಯವಸ್ಥೆ ತಮ್ಮ ಕೌಶಲ್ಯಗಳನ್ನು ಇತರರ ಮುಂದೆ ಪ್ರದರ್ಶಿಸಲು ಮತ್ತು ಅವರ ಮೆಚ್ಚುಗೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಒನ್‌ಪ್ಲಸ್‌ ಹೇಳುತ್ತದೆ.

ಮ್ಯೂಸಿಕ್‌ ಸಂಯೋಜನೆ ಹೇಗೆ ಮಾಡುವುದು?: ಮೊದಲು ಒನ್‌ಪ್ಲಸ್‌ ಎಐ ಸಂಗೀತ ಸ್ಟುಡಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ ಖಾತೆಯನ್ನು ಕ್ರಿಯೇಟ್‌ ಮಾಡಿ. ಇದಕ್ಕಾಗಿ ಒನ್‌ಪ್ಲಸ್ ಫೋನ್‌ ಇರಲೇ ಬೇಕು ಅಂತೇನಿಲ್ಲ. ಯಾರು ಬೇಕಾದರೂ ಈ ಸೇವೆ ಪಡೆದುಕೊಳ್ಳಬಹುದು. ಲಾಗಿನ್‌ ಆದ ನಂತರ ನಿಮಗೆ ಯಾವ ರೀತಿಯ ಮ್ಯೂಸಿಕ್‌ ಬೇಕು ಅನ್ನೋ ಆಯ್ಕೆ ತೋರಿಸುತ್ತದೆ. ಅವುಗಳ ಮೇಲೆ ಕ್ಲಿಕ್‌ ಮಾಡಿ.

ಒನ್‌ಪ್ಲಸ್‌ ಎಐ ಮ್ಯೂಸಿಕ್‌ ಸ್ಟುಡಿಯೋ! ನಿಮ್ಮದೇ ಹಾಡು ರಚಿಸಿ, ಸಿಂಗರ್‌ ಬೇಕಿಲ್ಲ

ಬಳಿಕ ನಿಮ್ಮ ಇಚ್ಛೆಯಂತೆ ಹಾಡಿನ ಮೂಡ್, ಥೀಮ್ ಮತ್ತು ಇತರ ಅಂಶಗಳನ್ನು ಕಸ್ಟಮೈಸ್ ಮಾಡಿ. ನಂತರದಲ್ಲಿ ನಿಮಗೆ ಯಾವ ರೀತಿಯ ಹಾಡು ಬೇಕು ಎಂದು ಪ್ರಾಂಪ್ಟ್ ನಮೂದಿಸಿ. ನಂತರ ಜನರೇಟ್‌ ಮೇಲೆ ಕ್ಲಿಕ್ ಮಾಡಿ. ಎಐ ,ಮ್ಯೂಸಿಕ್‌ ಸ್ಟುಡಿಯೋ ನಿಮ್ಮ ಸಲಹೆಯ ಆಧಾರದ ಮೇಲೆ ಸಾಹಿತ್ಯವನ್ನು ರಚಿಸುತ್ತದೆ. ಅದರಲ್ಲಿ ತಿದ್ದುಪಡಿಗಳ ಅಗತ್ಯವಿದ್ದರೆ, ಅದನ್ನು ಮಾಡಿ.

ಇನ್ನು ಎಐ ರಚಿಸಿದ ಹಾಡಿನ ಸಾಹಿತ್ಯ ಮತ್ತು ಸಂಗೀತ ನಿಮಗೆ ಇಷ್ಟ ಎಂದಾದರೆ ಮುಂದುವರಿಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅದು ಹಾಡನ್ನು ರಚಿಸುತ್ತದೆ. ನಂತರ ಅದನ್ನು ಆಲಿಸಬಹುದು ಮತ್ತು ಮೌಲ್ಯಮಾಪನ ಮಾಡಬಹುದು. ಇದೆಲ್ಲಾ ಆದ ಮೇಲೆ ಈ ಹಾಡನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ಪ್ರಕಟಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಸಾಕು.

ಒನ್‌ಪ್ಲಸ್‌ನ ಈ ಎಐ ಮ್ಯೂಸಿಕ್ ಸ್ಟುಡಿಯೋ ಸಂಗೀತ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಮತ್ತು ಹೊಸ ಮಟ್ಟದ ಸಂಗೀತ ಆನಂದವನ್ನು ನೀಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೂ ಕೆಲವು ಆರಂಭಿಕ ನ್ಯೂನತೆಗಳನ್ನು ಇದರಲ್ಲಿ ಕಾಣಬಹುದಾಗಿದೆ. ಈ ಹೊಸ ಫೀಚರ್ಸ್ ಜನರಿಗೆ ತಲುಪಿಸುವ ಉದ್ದೇಶದಿಂದ ಒನ್‌ಪ್ಲಸ್ ಸ್ಪರ್ಧೆ ಸಹ ಆಯೋಜನೆ ಮಾಡಿದ್ದು, ಡಿಸೆಂಬರ್ 17 ರ ಸಂಜೆ 5 ಗಂಟೆಯವರೆಗೆ ನಿಮ್ಮ ಹಾಡುಗಳನ್ನು ಕಳುಹಿಸಬಹುದು. ಈ ಮೂಲಕ ಬಹುಮಾನ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
The leading smartphone brand OnePlus has come up with a special benefit to people through the OnePlus AI Music Studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+