Home
ಸುದ್ದಿಜಾಲ

OnePlus ನಿಂದ ಚಾರ್ಜರ್‌ ಸೇರಿದಂತೆ ಇತರೆ ಟೂಲ್ಸ್‌ ಫ್ರೀ... ಫೋನ್‌ಗಳಿಗಂತೂ ಭಾರೀ ಡಿಸ್ಕೌಂಟ್!

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಉತ್ತಮ ಕ್ಯಾಮೆರಾ ಫೀಚರ್ಸ್‌ ಹೊಂದುವ ಮೂಲಕ ಬಹುಪಾಲು ಗ್ರಾಹಕರಿಗೆ ಇಷ್ಟವಾದ ಡಿವೈಸ್‌ಗಳಾಗಿವೆ. ಈ ನಡುವೆ ಪ್ರಮುಖ ಈ ಕಾಮರ್ಸ್‌ ಸೈಟ್‌ಗಳಲ್ಲಿನ ವಿಶೇಷ ಸೇಲ್‌ನಲ್ಲಿ ಭಾರೀ ಆಫರ್‌ನಲ್ಲಿ ಫೋನ್‌ಗಳು ಮಾರಾಟವಾಗುತ್ತಿದ್ದು, ಈ ಸಂತಸದ ನಡುವೆ ಮಗದೊಂದು ಖುಷಿ ವಿಚಾರ ಒನ್‌ಪ್ಲಸ್‌ನಿಂದ ನೀಡಲಾಗಿದೆ.

ಹೌದು, ಒನ್‌ಪ್ಲಸ್ ಇದೀಗ ದೀಪಾವಳಿ ಮಾರಾಟದ ಭಾಗವಾಗಿ ಆಯ್ದ ಬಿಡಿಭಾಗಗಳ ಮೇಲೆ 100 ಪ್ರತಿಶತದಷ್ಟು ರಿಯಾಯಿತಿ ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಪ್ರಮುಖ ರಿಯಾಯಿತಿಯನ್ನು ನೀಡಿದೆ. ಈ ವಿಶೇಷ ಸೇಲ್‌ ಹಾಗೂ ಫ್ರೀ ಆಫರ್‌ ಅಕ್ಟೋಬರ್ 31 ರವರೆಗೆ ಇರಲಿದೆ. ಹಾಗಿದ್ರೆ, ಏನಿದು ಫ್ರೀ ಆಫರ್‌, ಇತರೆ ಯಾವೆಲ್ಲಾ ಒನ್‌ಪ್ಲಸ್ ಫೋನ್‌ಗಳಿಗೆ ಆಫರ್ ಇದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

OnePlus ನಿಂದ ಚಾರ್ಜರ್‌ ಸೇರಿದಂತೆ ಇತರೆ ಟೂಲ್ಸ್‌ ಫ್ರೀ..

ಒನ್‌ಪ್ಲಸ್‌ನಿಂದ ಫ್ರೀ ಗ್ಯಾಜೆಟ್‌: ಒನ್‌ಪ್ಲಸ್ ಇದೀಗ ಫೋನ್ ಕೇಸ್‌ಗಳು, ಚಾರ್ಜರ್‌ಗಳು ಮತ್ತು ಇನ್ನೂ ಹೆಚ್ಚಿನ ಟೂಲ್ಸ್‌ಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನೀಡುತ್ತಿದೆ. ಅದರಲ್ಲೂ ಒನ್‌ಪ್ಲಸ್‌ನ ಅಧಿಕೃತ ಸೈಟ್‌ನಲ್ಲಿ ಬಿಡಿಭಾಗಗಳ ಮೇಲೆ 100 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಿರುವುದು ಅಚ್ಚರಿ ತರಿಸಿದೆ. ಇದರಲ್ಲಿ ಒನ್‌ಪ್ಲಸ್ ವಾರ್ಪ್ ಚಾರ್ಜ್‌ 30 ವೈರ್‌ಲೆಸ್ ಚಾರ್ಜರ್ ವೈಟ್, ನಾರ್ಡ್‌ CE 2 ಲೈಟ್‌ 5G ಸಿಲಿಕೋನ್ ಬಂಪರ್ ಕೇಸ್ ಸಹ ಸೇರಿವೆ.

ಇನ್ನು ರೆಫರಲ್ ಪ್ರೋಗ್ರಾಂ, ರೆಡ್ ಕೇಬಲ್ ಕ್ಲಬ್ ಸೇರಿದಂತೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಂತೆ ಹಲವಾರು ಪ್ರೋಗ್ರಾಂಗಳ ಮೂಲಕ ಬೃಹತ್ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ಈ ರಿಯಾಯಿತಿಗಳನ್ನು ಪಡೆಯಲು ಬಳಕೆದಾರರು ಒನ್‌ಪ್ಲಸ್ ಇಂಡಿಯಾ ಅಧಿಕೃತ ವೆಬ್‌ಸೈಟ್ ಅಥವಾ ಆಪ್‌ಗೆ ಭೇಟಿ ನೀಡಬಹುದಾಗಿದೆ. ಈ ವಿಭಾಗದಲ್ಲಿ ಬಳಕೆದಾರರು ಅವರ ಮಾಹಿತಿಯನ್ನು ನೀಡಿ ಶಾಪಿಂಗ್‌ ಆರಂಭ ಮಾಡಬಹುದು..

ಇನ್ನು ಕಂಪನಿಯು ರಿಯಾಯಿತಿ ದರದಲ್ಲಿ ಸೀಮಿತ ಸ್ಟಾಕ್ ಅನ್ನು ನೀಡುತ್ತಿದೆ ಎಂಬುದು ನಿಮಗೆ ತಿಳಿದಿರಲಿ. ಕೆಲವು ಬಿಡಿಭಾಗಗಳು ಒಟ್ಟು 100 ಪ್ರತಿಶತ ರಿಯಾಯಿತಿಯೊಂದಿಗೆ ಲಭ್ಯವಿದ್ದು, ಅಂದರೆ ಉಚಿತವಾಗಿ ಲಭ್ಯವಿದ್ದು, ಇತರೆ ಟೂಲ್ಸ್‌ಗಳ ಮೇಲೆ 80-70 ಪ್ರತಿಶತದಷ್ಟು ರಿಯಾಯಿತಿ ನೀಡಲಾಗಿದೆ. ಈ ಮೂಲಕ ಗ್ರಾಹಕರು ಅವರ ಬೇಡಿಕೆಗೆ ಅನುಗುಣವಾಗಿ ಖರೀದಿ ಮಾಡಬಹುದಾಗಿದೆ.

ಈ ನಡುವೆ ಈ ಬಿಡಿಭಾಗಗಳ ಮಾರಾಟದ ಜೊತೆಗೆ, ದೀಪಾವಳಿ ಮಾರಾಟವೂ ಸಹ ಲೈವ್ ಆಗಿದೆ. ಈ ಸೇಲ್‌ ಅಕ್ಟೋಬರ್ 7 ರಂದು 12 AM ಕ್ಕೆ ಆರಂಭ ಆಗಿದ್ದು, ಅಕ್ಟೋಬರ್ 31 ರಂದು ಕೊನೆಗೊಳ್ಳುತ್ತದೆ. ಈ ಸೇಲ್‌ನ ಸಮಯದಲ್ಲಿ ಬಳಕೆದಾರರು ಹೊಸದಾಗಿ ಪ್ರಾರಂಭಿಸಲಾದ ಒನ್‌ಪ್ಲಸ್ 11R 5G ಸೋಲಾರ್‌ನಲ್ಲಿ ದೊಡ್ಡ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಒನ್‌ಪ್ಲಸ್‌ 11 5G ಮತ್ತು ಬಡ್ಸ್ ಪ್ರೊ 2 ನಲ್ಲಿಯೂ ಸಹ ವಿಶೇಷ ರಿಯಾಯಿತಿಗಳು ಲಭ್ಯ ಇವೆ. ಅದರಲ್ಲೂ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಒಳಗೊಂಡಂತೆ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ದೊಡ್ಡ ಮಟ್ಟದ ಡಿಸ್ಕೌಂಟ್‌ ಪಡೆಯಬಹುದು. ಇನ್ನು ಒನ್‌ಪ್ಲಸ್‌ ನಾರ್ಡ್‌ CE 3 5G ಫೋನ್‌ ಖರೀದಿ ವೇಳೆ ರೆಡ್‌ ಕಾಯಿನ್‌ ಹೊಂದಿರುವ ಬಳಕೆದಾರರು ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಳ್ಳಬಹುದು.

ಒನ್‌ಪ್ಲಸ್‌ನ ದೀಪಾವಳಿ ಸೇಲ್‌ನಲ್ಲಿ ಲಭ್ಯ ಇರುವ ಟಾಪ್ 5 ಡೀಲ್‌ಗಳು:
ಒನ್‌ಪ್ಲಸ್‌ ನಾರ್ಡ್‌ CE3 5G: ಈ ವರ್ಷ 26,999 ರೂ.ಗಳ ಬೆಲೆಯಲ್ಲಿ ಬಿಡುಗಡೆಯಾದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದೆ. ಇದು ಈಗ ಒನ್‌ಪ್ಲಸ್‌ ಇಂಡಿಯಾ ವೆಬ್‌ಸೈಟ್ ಮತ್ತು ಆಪ್‌ನಲ್ಲಿ 22,999ರೂ.ಗಳಿಗೆ ಕಾಣಿಸಿಕೊಂಡಿದೆ. ಈ ಫೋನ್‌ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 782G ಪ್ರೊಸೆಸರ್ ಮತ್ತು 12GB RAM ಬಲ ಪಡೆದಿದೆ. ಇದರೊಂದಿಗೆ 50MP + 8MP + 2MP ಕ್ಯಾಮೆರಾ ಸೆನ್ಸರ್‌ ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ 3 5G: ಒನ್‌ಪ್ಲಸ್‌ನಲ್ಲಿ ಕೂಪನ್ ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ 28,999 ರೂ.ಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ನ ಸಾಮಾನ್ಯ ದರ 33,999 ರೂ.ಗಳಾಗಿದೆ. ಇನ್ನು ಈ ಫೋನ್ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ, 50MP ಮುಖ್ಯ ಸೆನ್ಸರ್‌ನೊಂದಿಗೆ ಟ್ರಿಪಲ್-ಕ್ಯಾಮೆರಾ, ಮೀಡಿಯಾಟೆಕ್‌ ಡೈಮೆನ್ಸಿಟಿ 9000 ಪ್ರೊಸೆಸರ್ ಮತ್ತು 16GB RAM ಸೌಲಭ್ಯ ಪಡೆದಿದೆ.

OnePlus ನಿಂದ ಚಾರ್ಜರ್‌ ಸೇರಿದಂತೆ ಇತರೆ ಟೂಲ್ಸ್‌ ಫ್ರೀ..

ಒನ್‌ಪ್ಲಸ್‌ 11 5G: ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ಈ ಫೋನ್‌ ಬಹಳ ವಿಶೇಷ ಎನಿಸಿದೆ. ಈ ಫೋನ್‌ ಅನ್ನು ನೀವು ಈ ವಿಶೇಷ ಸೇಲ್‌ನಲ್ಲಿ 49,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ಫೋನ್ 120Hz ರಿಫ್ರೆಶ್ ರೇಟ್ ಇರುವ QHD+ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲ ಪಡೆದಿದೆ. ಜೊತೆಗೆ 50MP ಮುಖ್ಯ ಕ್ಯಾಮೆರಾದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಬೆಂಬಲವನ್ನು ಈ ಫೋನ್‌ ಹೊಂದಿದೆ.

ಒನ್‌ಪ್ಲಸ್‌ 11R 5G: ಈ ವರ್ಷದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ ಆಗಿರುವ ಒನ್‌ಪ್ಲಸ್‌ 11R ಗೂ ಸಹ ರಿಯಾಯಿತಿ ನೀಡಲಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರು ಇದನ್ನು 37,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದು. ಇದು 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ ಜನ್‌ 1 ಪ್ರೊಸೆಸರ್ ಮತ್ತು 16GB RAM ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
OnePlus is now offering 100 percent off on select accessories and a major discount on smartphones as part of its Diwali sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+