ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

|

ಒನ್‌ಪ್ಲಸ್‌ ಕಂಪನಿಯು ತನ್ನ ಬಹುನಿರೀಕ್ಷಿತ ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಒನ್‌ಪ್ಲಸ್‌ ಬುಲೆಟ್‌ ವಯರ್‌ಲೆಸ್‌ 2 ಇಯರ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈಗಾಗಲೇ ಒನ್‌ಪ್ಲಸ್‌ ಬುಲೆಟ್‌ ಇಯರ್‌ಫೋನ್‌ ಗ್ರಾಹಕರಿಗೆ ಇಷ್ಟವಾಗಿದ್ದು, ಈ ಹೊಸ ಇಯರ್‌ಫೋನ್‌ ಅದಕ್ಕಿಂತಲೂ ಅತ್ಯುತ್ತಮವಾಗಿದ್ದು, ಗ್ರಾಹಕರಿಗೆ ಆಕರ್ಷಿಸಲಿದೆ. ಹಾಗೇ ಮಾರುಕಟ್ಟೆಯಲ್ಲಿ ಮತ್ತಷ್ಟು ಸೌಂಡ್‌ ಹುಟ್ಟುಹಾಕಲಿದೆ.

ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

ಹೌದು, ಒನ್‌ಪ್ಲಸ್‌ ಕಂಪನಿಯು ನೆನ್ನೆ ಬೆಂಗಳೂರಿನಲ್ಲಿ ತನ್ನ ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳೊಂದಿಗೆ ಬುಲೆಟ್‌ ವಾಯರ್‌ಲೆಸ್‌ 2 ಇಯರ್‌ಫೋನ್‌ ಅನ್ನು ಸಹ ಬಿಡುಗಡೆ ಮಾಡಿದ್ದು, ವಾಯರ್‌ಲೆಸ್ ಇಯರ್‌ಫೋನ್ ಇಷ್ಟ ಪಡುವ ಗ್ರಾಹಕರ ಗಮನ ಸೆಳೆಯಲಿರುವ ಡಿಸೈನ್‌ ಹೊಂದಿದೆ. ಎರಡು ಬ್ಯಾಟರಿ ಮಾಡ್ಯುಲಗಳನ್ನು ಹೊಂದಿರುವ ಜೊತೆಗೆ ಯುಎಸ್‌ಬಿ ಸಿ ಟೈಪ್‌ ಚಾರ್ಜಿಂಗ್ ಕನೆಕ್ಟರ್ ಆಯ್ಕೆಯನ್ನು ಈ ಇಯರ್‌ಫೋನ್ ಒಳಗೊಂಡಿದೆ.

ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

ಒನ್‌ಪ್ಲಸ್‌ ಇಯರ್‌ಪೋನ್‌ ಗೂಗಲ್‌ ಅಸಿಸ್ಟಂಟ್ ಮತ್ತು ಸಿರಿ ವಾಯಿಸ್‌ ಕಮಾಂಡ್‌ ಆಯ್ಕೆಗಳನ್ನು ಬೆಂಬಲಿಸಲಿದ್ದು, ಧ್ವನಿ ಮೂಲಕ ಇಯರ್‌ಫೋನ್‌ ಅನ್ನು ನಿಯಂತ್ರಿಸಬಹುದಾಗಿದೆ. ಮಾಡ್ಯುಲನಲ್ಲಿ ಸೌಂಡ್‌ ನಿಯಂತ್ರಿಸುವ ಬಟನಗಳನ್ನು ಮತ್ತು ಪವರ್‌ ಬಟನ ಆಯ್ಕೆಯನ್ನು ಒದಗಿಸಲಾಗಿದೆ. ಒನ್‌ಪ್ಲಸ್‌ ಬುಲೆಟ್‌ ವಾಯರ್‌ಲೆಸ್‌ ಇಯರ್‌ಫೋನ್ ಹೇಗಿದೆ ಮತ್ತು ಇದರ ಡಿಸೈನ್‌ ಹೇಗಿದೆ ಇತರೆ ವಿಶೇಷತೆಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : 4,000ರೂ ಪ್ರೈಸ್‌ ಟ್ಯಾಗ್‌ನಲ್ಲಿ ಸದ್ಯ ಲಭ್ಯವಿರುವ 5 ಬೆಸ್ಟ ಬ್ಲೂಟೂತ್ ಇಯರ್‌ಫೋನ್‌ಗಳು!ಓದಿರಿ : 4,000ರೂ ಪ್ರೈಸ್‌ ಟ್ಯಾಗ್‌ನಲ್ಲಿ ಸದ್ಯ ಲಭ್ಯವಿರುವ 5 ಬೆಸ್ಟ ಬ್ಲೂಟೂತ್ ಇಯರ್‌ಫೋನ್‌ಗಳು!

ಡಿಸೈನ್

ಡಿಸೈನ್

ಒನ್‌ಪ್ಲಸ್‌ ಈ ಹೊಸ ವಾಯರ್‌ಲೆಸ್‌ ಇಯರ್‌ಫೋನ್ ಆಕರ್ಷಕ ರಚನೆಯನ್ನು ಹೊಂದಿದ್ದು, ನೆಕ್‌ಬ್ಯಾಂಡ್‌ನಲ್ಲಿ ಎರಡು ಮಾಡ್ಯುಲನ್ನು ನೀಡಲಾಗಿದೆ. ಅವುಗಳಲ್ಲಿ ಎಡ ಮಾಡ್ಯುಲನಲ್ಲಿ ಸೌಂಡ್‌ ಬಟನಗಳನ್ನು ನೀಡಲಾಗಿದ್ದು, ಹಾಗೂ ಆನ್‌ ಆಫ್ ಪವರ್ ಬಟನ ಸಹ ಒದಗಿಸಲಾಗಿದೆ. ಈ ಎರಡು ಮಾಡ್ಯುಲಗಳು ಸಾಫ್ಟ್ ರಚನೆಯಲ್ಲಿದ್ದು, ಇಯರ್‌ಬಡ್‌ ಕಿವಿಯಿಂದ ಜಾರದ ಆಕಾರದಲ್ಲಿವೆ.

ಸಾಫ್ಟವೇರ್

ಸಾಫ್ಟವೇರ್

ಒನ್‌ಪ್ಲಸ್‌ ಈ ಇಯರ್‌ಫೋನ್ ಆಕ್ಸಿಜನ್ ಓಸ್‌ ತಂತ್ರಾಂಶವನ್ನು ಒಳಗೊಂಡಿದ್ದು, ಉತ್ತಮವಾಗಿ ಸ್ಮಾರ್ಟ್‌ಫೋನ್‌ಗೆ ಬೆಂಬಲಿಸಲಿದೆ. ಹಾಗೇ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಬಳಸುವವರು ಈ ಇಯರ್‌ಫೋನ್‌ಗೆ ಕನೆಕಟ್ಟ್ ಮಾಡಿದರೆ ಸೌಂಡ್‌ನ ಏರಿಳಿತ ತೋರಿಸಲಿದೆ. ಒಂದು ಬಾರಿ ಫೋನಿಗೆ ಪೇರ್‌ ಮಾಡಿದರೇ ನಂತರ ಪವರ್‌ ಬಟನ ಒತ್ತಿದರೇ ಆಟೋಮ್ಯಾಟಿಕ್ ಆಗಿ ಕನೆಕ್ಟ್‌ ಆಗುವುದು.

ಸೌಂಡ್ ಕ್ವಾಲಿಟಿ

ಸೌಂಡ್ ಕ್ವಾಲಿಟಿ

ಸೌಂಡ್‌ನ ಗುಣಮಟ್ಟವು ಅತ್ಯುತ್ತಮವಾಗಿ ಕೇಳಸಲಿದ್ದು, 24 ಬಿಟ್ ಆಡಿಯೊ ಸಾಮರ್ಥ್ಯದಲ್ಲಿ ಬೆಂಬಲ ಇರಲಿದೆ. ಇಯರ್‌ಬಡ್ಸ್‌ನಲ್ಲಿ ಡೈನಾಮಿಕ್ ಡ್ರೈವ್‌ರ್‌ಗಳಿದ್ದು, ಸೌಂಡ್‌ನ ಕ್ವಾಲಿಟಿಯನ್ನು ಹೆಚ್ಚಿಸಲಿವೆ ಹಾಗೂ ಸ್ಪಷ್ಟವಾಗಿ ಕೇಳಸಲು ಸಹಕರಿಸುತ್ತವೆ. ವ್ಯಾಲ್ಯೂಮ್‌ ಕಡಿಮೆ ಮಾಡಿದರೂ ಸಹ ಸೌಂಡ್‌ನ ಕ್ವಾಲಿಟಿ ಸಹ ಉತ್ತಮವಾಗಿ ಕೇಳಿಸುತ್ತದೆ.

ಓದಿರಿ : ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಿರಾ?.ಹಾಗಿದ್ರೆ ಸ್ವಲ್ಪ ಕಾಯಿರಿ!ಓದಿರಿ : ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಿರಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಒನ್‌ಪ್ಲಸ್‌ ಬುಲೆಟ್‌ ವಾಯರ್‌ಲೆಸ್‌ ಇಯರ್ಫೋನ್ 2 ಅತ್ಯುತ್ತಮ ಬ್ಯಾಟರಿ ಲೈಫ್‌ ಅನ್ನು ಹೊಂದಿದ್ದು, 14 ಗಂಟೆಗಳ ಕಾಲ ಬ್ಯಾಟರಿ ಬೆಂಬಲ ನೀಡಲಿದೆ. Warp ಚಾರ್ಜ್‌ ತಂತ್ರಜ್ಞಾನ ಒದಗಿಸಲಾಗಿದ್ದು, ಇದರ ನೆರವಿನಿಂದ ಕೆವಲ 10 ನಿಮಿಷ ಚಾರ್ಜ್ ಮಾಡಿದರೇ ಸುಮಾರು 10ಗಂಟೆ ಇಯರ್‌ಫೋನ್‌ ಬಾಳಿಕೆ ಬರುವ ಸಾಮರ್ಥ್ಯವನ್ನು ಪಡೆದಿದೆ.

ಬೆಲೆ

ಬೆಲೆ

ಒನ್‌ಪ್ಲಸ್‌ ಕಂಪನಿಯು ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಬುಲೆಟ್‌ ಇಯರ್‌ಫೋನ್ 2 ಅನ್ನು ಸಹ ಬಿಡುಗಡೆ ಮಾಡಿದ್ದು, ಈ ಡಿವೈಸ್‌ನ ಬೆಲೆಯು $99 (5,990ರೂ.ಗಳು) ಆಗಿದೆ.

Best Mobiles in India

English summary
ONEPLUS LAUNCHES THE BULLETS WIRELESS 2 EARPHONES AT A PRICE OF RS 5,990.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X