Home
ಸುದ್ದಿಜಾಲ

oneplus: ಒನ್‌ಪ್ಲಸ್‌ನಿಂದ ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!

ಒನ್‌ಪ್ಲಸ್‌ (OnePlus) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆದಿದ್ದು, ಈ ನಡುವೆ ಫ್ಲಿಪ್ ಫೋನ್‌ ವಿಭಾಗದಲ್ಲಿ ಒನ್‌ಪ್ಲಸ್‌ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ಹೊಸ ಅಲೆಯನ್ನು ಉಂಟು ಮಾಡಲಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಫೋನ್‌, ಮೊಟೊರೊಲಾ ರೇಜರ್‌ ಡಿವೈಸ್‌ಗಳು ಮತ್ತು ಒಪ್ಪೋ ಫೈಂಡ್‌ N3 ಫ್ಲಿಪ್‌ನಂತಹ ಕ್ಲಾಮ್‌ಶೆಲ್ ಫಾರ್ಮ್ ಫ್ಯಾಕ್ಟರ್‌ನೊಂದಿಗೆ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನಲ್ಲಿ ಒನ್‌ಪ್ಲಸ್‌ (OnePlus foldable smartphone) ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಯಾವಾಗ ಲಾಂಚ್‌ ಆಗಲಿದೆ?, ಹೇಗಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್‌ನಿಂದ ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!..

ಒನ್‌ಪ್ಲಸ್‌ ಫ್ಲಿಪ್ ಫೋನ್: ಒಪ್ಪೋ ಮತ್ತು ಒನ್‌ಪ್ಲಸ್‌ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನಲ್ಲಿ ಕ್ಲಾಮ್‌ಶೆಲ್ ಫಾರ್ಮ್ ಫ್ಯಾಕ್ಟರ್‌ನೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಈ ಮೂಲಕ ರಿಯರ್‌ನಲ್ಲಿ ಟೆಲಿಫೋಟೋ ಮತ್ತು ಮ್ಯಾಕ್ರೋ ಕ್ಯಾಮೆರಾಗಳನ್ನು ಹೊಂದಿರಲಿದೆ ಎಂದು ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಟಿಪ್‌ಸ್ಟರ್ ಉಲ್ಲೇಖ ಮಾಡಿದ್ದಾರೆ.

ಒಪ್ಪೋ ಈಗಾಗಲೇ ತನ್ನ ತೆಕ್ಕೆಯಲ್ಲಿ ಹಲವಾರು ಫೋಲ್ಡಬಲ್‌ ಫೋನ್‌ಗಳನ್ನು ಹೊಂದಿದ್ದು, ಆದರೆ ಒನ್‌ಪ್ಲಸ್‌ ಮಾತ್ರ ಇದುವರೆಗೆ ಒಂದೇ ಒಂದು ಫೋಲ್ಡಬಲ್‌ ಫೋನ್‌ ಅನ್ನು ಮಾತ್ರ ಅನಾವರಣ ಮಾಡಿದೆ. ಅದಕ್ಕೆ ಒನ್‌ಪ್ಲಸ್‌ ಓಪನ್‌ ಹೆಸರಿಡಲಾಗಿದೆ. ಆದರೆ, ಈ ಹೊಸ ಫೋನ್‌ ಅನ್ನು ಒಪ್ಪೋ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೂ ಸಹ ಎರಡೂ ಕಂಪನಿಗಳು ತಮ್ಮ ಹೊಸ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಫೋನ್‌ಗಳ ಪ್ಲ್ಯಾನ್‌ ಅನ್ನು ಇನ್ನೂ ಘೋ‍ಷಣೆ ಮಾಡಿಲ್ಲ.

ಒನ್‌ಪ್ಲಸ್‌ನಿಂದ ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!..

ಒಪ್ಪೋ ಫೈಂಡ್ N3 ಫ್ಲಿಪ್‌ನ ಉತ್ತರಾಧಿಕಾರಿಯನ್ನು ಫೈಂಡ್‌ N5 ಫ್ಲಿಪ್ ಎಂದು ಹೆಸರಿಸುವ ನಿರೀಕ್ಷೆಯಿದೆ. ಏಕೆಂದರೆ ಚೀನೀ ಸ್ಮಾರ್ಟ್‌ಫೋನ್ ತಯಾರಕರು ಸಂಖ್ಯೆ 4 ಅನ್ನು ನಿರ್ಲಕ್ಷಿಸುತ್ತಾರೆ. ಇದಕ್ಕೆ ಕಾರಣ ಆ ಸಂಖ್ಯೆ ದುರದೃಷ್ಟಕರವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಅಲ್ಲಿ ಸಾವು ಮತ್ತು ದುರದೃಷ್ಟಕ್ಕೆ ಸಂಬಂದಿಸಿದ ಸಂಖ್ಯೆ ಅದಾಗಿದೆ. ಈ ಮೇಲೆ ತಿಳಿಸಿದ ಮಾಹಿತಿ ನಿಜವೇ ಆದರೆ ಒನ್‌ಪ್ಲಸ್‌ನ ಫ್ಲಿಪ್ ಫೋನ್ ಒಪ್ಪೋನ ಫೋಲ್ಡಬಲ್‌ನಂತಹ ಫೀಚರ್ಸ್‌ ಅನ್ನು ಹೊಂದಿರಲಿದೆ. ಹಾಗಿದ್ರೆ ಬನ್ನಿ ಒಪ್ಪೋ ಫೈಂಡ್‌ N3 ಫ್ಲಿಪ್ ಫೀಚರ್ಸ್‌ ಏನು ಅನ್ನೋದನ್ನು ನೋಡೋಣ.

ಒಪ್ಪೋ ಫೈಂಡ್‌ N3 ಫ್ಲಿಪ್: ಒಪ್ಪೋ ಫೈಂಡ್ N3 ಫ್ಲಿಪ್ ಸ್ಮಾರ್ಟ್‌ಫೋನ್ ಅನ್ನು ಅಕ್ಟೋಬರ್ 2023 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 4 nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. 12 GB LPDDR5X RAM ಮತ್ತು 256GB UFS 4.0 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, . 6.8 ಇಂಚಿನ LTPO ಅಮೋಲೆಡ್‌ ಫೋಲ್ಡಬಲ್ ಸ್ಕ್ರೀನ್ ಮತ್ತು 3.2 ಇಂಚಿನ ಅಮೋಲೆಡ್‌ ಕವರ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಈ ನಡುವೆ ಮೊಟೊರೊಲಾ ಮತ್ತು ಸ್ಯಾಮ್‌ಸಂಗ್‌ನ ಫ್ಲಿಪ್ ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಒಪ್ಪೋ ಫೈಂಡ್‌ ಮಾತ್ರ ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ವಿಶೇಷವಾಗಿ ಕಾಣಿಸಿಕೊಂಡಿದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ ಪ್ರೈಮರಿ ಕ್ಯಾಮೆರಾ, 48 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಆಂಗಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್‌ ಟೆಲಿಫೋಟೋ ಕ್ಯಾಮೆರಾವನ್ನು ಕಾಣಬಹುದಾಗಿದೆ. ಹಾಗೆಯೇ ಈ ಫೋನ್ 44 W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,300 mAh ಸಾಮರ್ಥ್ಯದ ಬ್ಯಾಟರಿಯನ್ನು ಕಾಣಬಹುದು.

ಒನ್‌ಪ್ಲಸ್‌ನಿಂದ ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!..

ಒನ್‌ಪ್ಲಸ್‌ ಫೋನ್‌: ಭಾರತದಲ್ಲಿನ ಪ್ರಮುಖ ಮೊಬೈಲ್ ಚಿಲ್ಲರೆ ಸರಪಳಿಗಳು ಮೇ 1 ರಿಂದ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ವೇರಬಲ್‌ಗಳ ಸೇಲ್‌ ಅನ್ನು ನಿಲ್ಲಿಸಬಹುದು ಎಂದು ವರದಿಯೊಂದು ಹೇಳಿದ ದಿನಗಳ ನಂತರ, ಕಂಪನಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸೌತ್ ಇಂಡಿಯನ್ ಆರ್ಗನೈಸ್ಡ್ ರೀಟೇಲರ್ಸ್ ಅಸೋಸಿಯೇಷನ್ (ORA) ಇಂಡಿಯಾದ ಮಾರಾಟದ ನಿರ್ದೇಶಕ ರಂಜೀತ್ ಸಿಂಗ್ ಅವರಿಗೆ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿ, ಚಿಲ್ಲರೆ ವ್ಯಾಪಾರಿಗಳು ಕಂಪನಿಯೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

Best Mobiles in India

English summary
OnePlus is known to be working on a new foldable smartphone with a clamshell form factor similar to the Samsung Galaxy Z Flip phone, Motorola Razr devices and the Oppo Find N3 Flip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+