Home
ಸುದ್ದಿಜಾಲ

ಒನ್‌ಪ್ಲಸ್‌ ಮೊಬೈಲ್‌ಗಳು ಇನ್ನು ಜಿಯೋಮಾರ್ಟ್‌ ಡಿಜಿಟಲ್‌ಗಳಲ್ಲಿ ಲಭ್ಯ!

ಜನಪ್ರಿಯ ಒನ್‌ಪ್ಲಸ್‌ ದೇಶಿಯ ಆಫ್‌ಲೈನ್ ಮಾರುಕಟ್ಟೆಯಲ್ಲಿ ಸಂಕಸ್ಟ ಎದುರಿಸುತ್ತಿದೆ. ಕಳೆದ ತಿಂಗಳು ಕಡಿಮೆ ಲಾಭಾಂಶಗಳು ಸಮಸ್ಯೆಯಿಂದಾಗಿ ತಮ್ಮ ಆಫ್‌ಲೈನ್ ಸ್ಟೋರ್‌ಗಳಲ್ಲಿ ಒನ್‌ಪ್ಲಸ್‌ ಮೊಬೈಲ್‌ಗಳ ಮಾರಾಟ ನಿಲ್ಲಿಸುವುದಾಗಿ ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ (AIMRA) ಘೋಷಿಸಿತು. ಆದರೆ ಈಗ ಹೊಸ ಸುದ್ದಿ ಏನೆಂದರೆ ಜಿಯೋ ಮಾರ್ಟ್‌ನಲ್ಲಿ ಇನ್ನು ಒನ್‌ಪ್ಲಸ್‌ ಫೋನ್‌ಗಳು ದೊರೆಯಲಿವೆ.

ಹೌದು, ಒನ್‌ಪ್ಲನ್‌ ಫೋನ್‌ಗಳು ಜಿಯೋ ಮಾರ್ಟ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಒನ್‌ಪ್ಲಸ್‌ ಸಂಸ್ಥೆಯು ಈಗ ಆಫ್‌ಲೈನ್ ಸೇಲ್‌ಗಾಗಿ ಜಿಯೋ ಮಾರ್ಟ್‌ ಜೊತೆಗಿನ ಪಾಲುದಾರಿಕೆ ಅನ್ನು ಸುಧಾರಿಸುತ್ತಿದೆ ಎಂದು ಘೋಷಿಸಿದೆ. ಜಿಯೋ ಮಾರ್ಟ್‌ ಸ್ಟೋರ್‌ನಲ್ಲಿ ಗ್ರಾಹಕರು ಖರೀದಿಸುವ ಮುನ್ನ ಒನ್‌ಪ್ಲಸ್‌ ಫೋನ್‌ ಅನ್ನು ಭೌತಿಕವಾಗಿ ಅನುಭವಿಸಲು ಸಾಧ್ಯವಾಗಲಿದೆ.

ಒನ್‌ಪ್ಲಸ್‌ ಮೊಬೈಲ್‌ಗಳು ಇನ್ನು ಜಿಯೋಮಾರ್ಟ್‌ ಡಿಜಿಟಲ್‌ಗಳಲ್ಲಿ ಲಭ್ಯ!

ಒನ್‌ಪ್ಲಸ್‌ ಸಂಸ್ಥೆಯು ದೇಶದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿಯೂ ಆಫ್‌ಲೈನ್‌ ಮಾರಾಟ ವಿಸ್ತರಿಸಲು ಬಯಸುತ್ತದೆ. ಇನ್ನು ಜಿಯೋ ಮಾರ್ಟ್‌ ಡಿಜಿಟಲ್‌ ಜೊತೆಗಿನ ಈ ಪಾಲುದಾರಿಕೆಯು ಅವರ ಆನ್‌ಲೈನ್ ಇ ಕಾಮರ್ಸ್ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಅಂದಹಾಗೆ ಒನ್‌ಪ್ಲಸ್‌ ಸಂಸ್ಥೆಯು ತನ್ನ ಮೊಬೈಲ್‌ ಹಾಗೂ ಸಂಸ್ಥೆಯ ಇತರೆ ಸ್ಮಾರ್ಟ್‌ ಉತ್ಪನ್ನಗಳನ್ನು ಅಮೆಜಾನ್‌.ಇನ್‌ ಮತ್ತು ಒನ್‌ಪ್ಲಸ್‌.ಇನ್‌ ತಾಣದಲ್ಲಿ ಖರೀದಿಗೆ ಲಭ್ಯ ಇರುತ್ತವೆ. ಅಮೆಜಾನ್ ಇ ಕಾಮರ್ಸ್‌ ಭಾರತದಲ್ಲಿ ಒನ್‌ಪ್ಲಸ್‌ಗೆ ನಂಬರ್‌ ಒನ್‌ ಮಾರುಕಟ್ಟೆ ಎನಿಸಿದೆ.

ಒನ್‌ಪ್ಲಸ್‌ ಇತ್ತೀಚಿಗೆ ಭಾರತದಲ್ಲಿ ಲಾಂಚ್ ಮಾಡಿರುವ ಒನ್‌ಪ್ಲಸ್‌ ನಾರ್ಡ್‌ CE4 ಸ್ಮಾರ್ಟ್‌ಫೋನ್ 2412 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಜೊತೆಗೆ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದ್ದು, ಅಡ್ರಿನೋ 720 ಜಿಪಿಯು ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ.

ಅಲ್ಲದೆ ಈ ಫೋನ್‌ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ 8GB RAM ಮತ್ತು 256 GB ROM ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಇದರ ಜೊತೆಗೆ ಸೆಲ್ಫಿ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್‌ ಸೆನ್ಸರ್‌ ಅನ್ನು ಈ ಫೋನ್‌ ಪಡೆದಿದೆ.

ಒನ್‌ಪ್ಲಸ್‌ ನಾರ್ಡ್‌ CE4 ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 100W ಸೂಪರ್‌ವೂಕ್‌ ಚಾರ್ಜರ್‌ ಸಪೋರ್ಟ್‌ ಪಡೆದುಕೊಂಡಿದೆ. ಇದು 0-100 ಪ್ರತಿಶತದಷ್ಟು ಚಾರ್ಜ್ ಕೇವಲ 29 ನಿಮಿಷಗಳಲ್ಲಿ ಒದಗಿಸಲಿದೆ ಎಂದು ಒನ್‌ಪ್ಲಸ್‌ ಹೇಳಿಕೊಂಡಿದೆ.

ಹಾಗೆಯೇ ಈ ಫೋನ್ 5G ಡ್ಯುಯಲ್ 5G ಸಿಮ್‌ ಕಾರ್ಡ್‌ಗಳು, ಬ್ಲೂಟೂತ್ ಆವೃತ್ತಿ 5.4, ಡ್ಯುಯಲ್-ಬ್ಯಾಂಡ್ ವೈ-ಫೈ , ಜಿಪಿಎಸ್‌, ಗ್ಲೋನಾಸ್, 7 5G ಬ್ಯಾಂಡ್‌ ಕನೆಕ್ಟಿವಿಟಿ ಆಯ್ಕೆ ಪಡೆದಿದ್ದು, ಕೆಳಭಾಗದಲ್ಲಿ ಯುಎಸ್‌ಬಿ 2.0 ಪೋರ್ಟ್, ಹೈ-ರೆಸ್ ಆಡಿಯೋಗೆ ಸಪೋರ್ಟ್‌ ಜೊತೆಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ರಚನೆ ಹೊಂದಿದೆ. ಇದರ ಜೊತೆಗೆ ಮೇಲ್ಭಾಗದಲ್ಲಿ ಐಆರ್‌ ಬ್ಲಾಸ್ಟರ್ ಮತ್ತು ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಆಯ್ಕೆ ಪಡೆದಿದ್ದು, ಸ್ಪ್ಲಾಶ್ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ಪ್ರಮಾಣೀಕರಿಸಲ್ಪಟ್ಟಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ 8GB RAM ಮತ್ತು 256 GB ROM ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಈ ಮೊಬೈಲ್‌ ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಆಗಲಿದೆ.

Best Mobiles in India

English summary
OnePlus Mobiles Will Be Available on JioMart Digital Stores in India. oneplus phone details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+