Home
ಸುದ್ದಿಜಾಲ

ಇಂದಿನಿಂದ ಒನ್‌ಪ್ಲಸ್‌ನ ಈ ಮಾನಿಟರ್ ಖರೀದಿಗೆ ಲಭ್ಯ; ಬೆಲೆ 11,999ರೂ.!

ಒನ್‌ಪ್ಲಸ್‌ ಕಂಪೆನಿಯು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ ಮಾನಿಟರ್‌ E 24 ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ. ಈ ಮಾನಿಟರ್ ದೇಶಿಯ ಮಾರುಕಟ್ಟೆಯಲ್ಲಿ ಇಂದಿನಿಂದ ಮಾರಾಟ ಪ್ರಾರಂಭಿಸಲಿದೆ. ಅಧಿಕೃತ ಒನ್‌ಪ್ಲಸ್ ವೆಬ್‌ಸೈಟ್‌, ಒನ್‌ಪ್ಲಸ್‌ ಸ್ಟೋರ್‌ ಆಪ್‌, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ.

ಇಂದಿನಿಂದ ಒನ್‌ಪ್ಲಸ್‌ನ ಈ ಮಾನಿಟರ್ ಖರೀದಿಗೆ ಲಭ್ಯ; ಬೆಲೆ 11,999ರೂ.!

ಹೌದು, ಒನ್‌ಪ್ಲಸ್‌ ಮಾನಿಟರ್ E 24 (OnePlus Monitor E 24) ಇಂದಿನಿಂದ ಭಾರತದಲ್ಲಿ ಮಾರಾಟ ಶುರುಮಾಡಲಿದೆ. ಈ ಮಾನಿಟರ್ ಮೆಟಲ್‌ ಸ್ಟ್ಯಾಂಡ್‌ ಅನ್ನು ಒಳಗೊಂಡಿದ್ದು, -5 ಡಿಗ್ರಿ ಯಿಂದ 15 ಡಿಗ್ರಿ ವರೆಗೂ ಅಗತ್ಯಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳಬಹುದಾಗದ ಆಯ್ಕೆ ಇದೆ. ಹಾಗೆಯೇ ಈ ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಅಂದಹಾಗೆ ಈ ಮಾನಿಟರ್ ಬೆಲೆಯು 11,999ರೂ. ಆಗಿದೆ. ಹಾಗಾದರೇ ಈ ಮಾನಿಟರ್ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದಿನಿಂದ ಒನ್‌ಪ್ಲಸ್‌ನ ಈ ಮಾನಿಟರ್ ಖರೀದಿಗೆ ಲಭ್ಯ; ಬೆಲೆ 11,999ರೂ.!

ಒನ್‌ಪ್ಲಸ್‌ ಮಾನಿಟರ್ E 24 : ಡಿಸ್‌ಪ್ಲೇ ಹಾಗೂ ಇತರೆ ಫೀಚರ್ಸ್‌

ಒನ್‌ಪ್ಲಸ್‌ ಮಾನಿಟರ್ E 24 ಸ್ಮಾರ್ಟ್‌ ಮಾನಿಟರ್‌ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 75 Hz ರಿಫ್ರೆಶ್ ರೇಟ್‌ ಮತ್ತು ಡೈನಾಮಿಕ್ ಫ್ರೇಮ್ ರೇಟ್‌ ನಿರ್ವಹಣೆಯನ್ನು ನೀಡುವ ಅಡಾಪ್ಟಿವ್ ಸಿಂಕ್ ಟೆಕ್ನಾಲಜಿಯನ್ನು ನೀಡಲಿದೆ. ಇದಲ್ಲದೆ ಈ ಮಾನಿಟರ್‌ TUV ರೈನ್‌ಲ್ಯಾಂಡ್ ಪ್ರಮಾಣೀಕರಣ, ನಯವಾದ ಮತ್ತು ಕನಿಷ್ಠ ವಿನ್ಯಾಸ, ಗಟ್ಟಿಮುಟ್ಟಾದ ಹೊಂದಾಣಿಕೆಯ ಲೋಹದ ಸ್ಟ್ಯಾಂಡ್ ಅನ್ನು ಕೂಡ ಹೊಂದಿದೆ. ಇದಲ್ಲದೆ ಇನ್‌ಬಿಲ್ಟ್‌ ಕೇಬಲ್ ಮ್ಯಾನೇಜ್‌ ಫೀಚರ್ಸ್‌, ಟೈಪ್-ಸಿ ಪೋರ್ಟ್ ಸಂಪರ್ಕದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಇಂದಿನಿಂದ ಒನ್‌ಪ್ಲಸ್‌ನ ಈ ಮಾನಿಟರ್ ಖರೀದಿಗೆ ಲಭ್ಯ; ಬೆಲೆ 11,999ರೂ.!

ಒನ್‌ಪ್ಲಸ್‌ ಮಾನಿಟರ್ E 24 : ಬೆಲೆ ಮಾಹಿತಿ

ಭಾರತದಲ್ಲಿ ಒನ್‌ಪ್ಲಸ್‌ ಮಾನಿಟರ್ E 24 ಡಿವೈಸ್‌ ಬೆಲೆಯು 11,999ರೂ. ಆಗಿದ್ದು, ಇಂದಿನಿಂದ ಮಾರಾಟ ಶುರು ಮಾಡಲಿದೆ. ಈ ಮಾನಿಟರ್ ಅಧಿಕೃತ ಒನ್‌ಪ್ಲಸ್ ವೆಬ್‌ಸೈಟ್‌, ಒನ್‌ಪ್ಲಸ್‌ ಸ್ಟೋರ್‌ ಆಪ್‌, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ.

ಒನ್‌ಪ್ಲಸ್‌ ಮಾನಿಟರ್‌ X 27 : ಫೀಚರ್ಸ್‌

ಒನ್‌ಪ್ಲಸ್‌ ಸಂಸ್ಥೆಯು ಒನ್‌ಪ್ಲಸ್‌ ಮಾನಿಟರ್ E 24 ಮಾನಿಟರ್ ಜೊತೆಗೆ ಒನ್‌ಪ್ಲಸ್‌ ಮಾನಿಟರ್‌ X 27 ಅನ್ನು ಬಿಡುಗಡೆ ಮಾಡಿದೆ. ಇದು 27 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಮಾನಿಟರ್‌ 165Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದು ವೇಗವಾದ 1ms ಪ್ರೊಸೆಸರ್‌ ಟೈಂ ನೀಡಲಿದೆ. ಇದು ವೃತ್ತಿಪರ-ಮಟ್ಟದ ಗೇಮಿಂಗ್ ಅನುಭವವನ್ನು ನೀಡಲಿದೆ. ಇದಕ್ಕಾಗಿ AMD ಫ್ರೀಸಿಂಕ್ ಪ್ರೀಮಿಯಂ, 2K QHD ವಿಶ್ಯುಯಲ್‌ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಜೊತೆಗೆ ವಿಶಾಲವಾದ DCI-P3 95% ಕಲರ್‌ ಗ್ಯಾಮಟ್‌, TÜV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

ಇಂದಿನಿಂದ ಒನ್‌ಪ್ಲಸ್‌ನ ಈ ಮಾನಿಟರ್ ಖರೀದಿಗೆ ಲಭ್ಯ; ಬೆಲೆ 11,999ರೂ.!

ಮೆಟಲ್ ಸ್ಟ್ಯಾಂಡ್ ಮತ್ತು ಮೆಟಲ್ ಫಿನಿಶ್ ರಚನೆ

ಇನ್ನು ಒನ್‌ಪ್ಲಸ್‌ ಮಾನಿಟರ್‌ X 27 ಪ್ರೀಮಿಯಂ ಹಾರ್ಡ್‌ವೇರ್ ಸ್ಪೋರ್ಟಿಂಗ್ ಮೆಟಲ್ ಸ್ಟ್ಯಾಂಡ್ ಮತ್ತು ಮೆಟಲ್ ಫಿನಿಶ್ ಅನ್ನು ಹೊಂದಿದೆ. ಇದರ ಮಲ್ಟಿ ಆಂಗಲ್‌ ಸೆಟ್ಟಿಂಗ್‌ ಸ್ಟ್ಯಾಂಡ್ ಕೂಡ ಹೊಂದಿದೆ. ಇದರಿಂದ ಮಾನಿಟರ್‌ ಅನ್ನು ಬಳಕೆದಾರರಿಗೆ ಅಗತ್ಯವಿರುವಂತೆ ಓರೆಯಾಗಿಸಬಹುದು ಮತ್ತು ತಿರುಗಿಸಬಹುದು. ಇದರೊಂದಿಗೆ ಮಾನಿಟರ್‌ ಸ್ಟ್ಯಾಂಡರ್ಡ್ ಮೋಡ್, ಮೂವೀ ಮೋಡ್, ಪಿಕ್ಚರ್ ಮೋಡ್, ವೆಬ್ ಮೋಡ್ ಮತ್ತು ಗೇಮ್ ಮೋಡ್ ಸೇರಿದಂತೆ ಐದು ವಿಭಿನ್ನ ಮೋಡ್‌ಗಳೊಂದಿಗೆ ಬರುತ್ತದೆ.

ಇಂದಿನಿಂದ ಒನ್‌ಪ್ಲಸ್‌ನ ಈ ಮಾನಿಟರ್ ಖರೀದಿಗೆ ಲಭ್ಯ; ಬೆಲೆ 11,999ರೂ.!

ಒನ್‌ಪ್ಲಸ್‌ ಮಾನಿಟರ್‌ X 27 ನಾಲ್ಕು ಆಪ್ಟಿಮೈಸ್ಡ್ ಸಬ್‌-ಮೋಡ್ಸ್‌ಗಳನ್ನು ನೀಡಲಿದೆ. ಇವುಗಳನ್ನು MOBA ಮೋಡ್, FPS ಮೋಡ್, RTS ಮೋಡ್ ಮತ್ತು RPG ಮೋಡ್ ಎಂದು ಹೆಸರಿಸಲಾಗಿದೆ. ಇದಲ್ಲದೆ ಈ ಮಾನಿಟರ್ ಡ್ಯುಯಲ್ PbP ಮತ್ತು PiP ಸ್ಪ್ಲಿಟ್-ಸ್ಕ್ರೀನ್ ಮೋಡ್‌ಗಳನ್ನು ಸಹ ಒಳಗೊಂಡಿದೆ. ಇದು ಬಳಕೆದಾರರಿಗೆ ಮಲ್ಟಿ ಫಂಕ್ಷನ್‌ ಅನ್ನು ಎಫೆಕ್ಟಿವ್‌ ಆಗಿ ಬಳಸುವುದಕ್ಕೆ ಅನುಮತಿಸಲಿದೆ. ಇದರಿಂದ ಎರಡು ವಿಭಿನ್ನ ಡಿವೈಸ್‌ಗಳಲ್ಲಿರುವ ಡಾಕ್ಯುಮೆಂಟ್‌ಗಳನ್ನು ಅಕ್ಕಪಕ್ಕದಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ.

Best Mobiles in India

English summary
OnePlus Monitor E 24 will go on first sale today in the country.The monitor will cost the buyers Rs 11,999 and will be available via OnePlus.in, Flipkart, Amazon. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+