ಕೋರ್ಟ್​ ಆವರಣದಲ್ಲೇ ವಕೀಲರ ಜೇಬಿನಲ್ಲಿದ್ದ ಒನ್‌ಪ್ಲಸ್‌ನ ಫೋನ್ ದಿಡೀರ್ ಬ್ಲಾಸ್ಟ್!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಳಕೆದಾರರನ್ನು ಬೆಚ್ಚಿ ಬೀಳಿಸುತ್ತಿವೆ. ಚಾರ್ಜ್ ಮಾಡುವಾಗ, ಬೈಕ್ ಓಡಿಸುವಾಗ ಮೊಬೈಲ್ ಬ್ಲಾಸ್ಟ್‌ ಆಗಿರುವ ಘಟನೆಗಳು ವರದಿ ಆಗಿವೆ. ಕೆಲವು ಮೊಬೈಲ್ ಸ್ಫೋಟ ಘಟನೆಗಳಲ್ಲಿ ಬಳಕೆದಾರರಿಗೆ ಗಂಭೀರ ಗಾಯಗಳು ಆಗಿದ್ದು ಇದೆ. ಇದೀಗ ಕೋರ್ಟ್‌ ಆವರಣದಲ್ಲೇ ವಕೀಲರೊಬ್ಬರ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್‌ ಬ್ಲಾಸ್ಟ್‌ ಆಗಿರುವ ಘಟನೆ ಇತ್ತೀಚಿಗೆ ನಡೆದಿದೆ.

ಕೋರ್ಟ್​ ಆವರಣದಲ್ಲೇ ವಕೀಲರ ಜೇಬಿನಲ್ಲಿದ್ದ ಒನ್‌ಪ್ಲಸ್‌ನ ಫೋನ್ ದಿಡೀರ್ ಬ್ಲಾಸ್ಟ್!

ದೇಶದ ರಾಜಧಾನಿ ದೆಹಲಿಯಲ್ಲಿ ವಕೀಲರೊಬ್ಬರ ಜೇಬಿನಲ್ಲಿದ್ದ ವೇಳೆಯೇ ಅವರು ಹೊಸದಾಗಿ ಖರೀದಿಸಿದ ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಬ್ಲಾಸ್ಟ್‌ ಆಗಿರುವ ಘಟನೆ ವರದಿಯಾಗಿದೆ. ಈ ಘಟನೆ ಬಗ್ಗೆ ಸ್ವತಃ ವಕೀಲ ಗೌರವ್ ಗುಲಾಟಿ ಅವರೇ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಸ್ಫೋಟ ಆಗಿರುವ ಸ್ಮಾರ್ಟ್‌ಫೋನ್‌ನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಮೊಬೈಲ್ ಸ್ಫೋಟ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಸ್ಫೋಟದ ಸಂದರ್ಭದಲ್ಲಿ ನಾನು ಫೋನ್ ಬಳಸಿರಲಿಲ್ಲ. ಮೊಬೈಲ್ ಶೇ. 90 ಪರ್ಸೆಂಟ್ ಫುಲ್ ಆಗಿತ್ತು. ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ ನಾರ್ಡ್‌ 2 ಫೋನ್‌ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿದೆ. ತದ ನಂತರ ಕೆಲವೇ ಸೆಕೆಂಡುಗಳಲ್ಲಿ ಫೋನ್ ಸ್ಫೋಟಗೊಂಡಿದೆ. ಮೊಬೈಲ್ ಸ್ಫೋಟದಿಂದ ನನಗೂ ಗಾಯಗಳಾಗಿವೆ. ಇನ್ನು ಈ ಘಟನೆ ಕೋರ್ಟ್‌ ಆವರಣದಲ್ಲೇ ನಡೆಯಿತು ಎಂದು ವಕೀಲ ಗೌರವ್‌ ಗುಲಾಟಿ ಬರೆದುಕೊಂಡಿದ್ದಾರೆ.

ಕೋರ್ಟ್​ ಆವರಣದಲ್ಲೇ ವಕೀಲರ ಜೇಬಿನಲ್ಲಿದ್ದ ಒನ್‌ಪ್ಲಸ್‌ನ ಫೋನ್ ದಿಡೀರ್ ಬ್ಲಾಸ್ಟ್!

ಇನ್ನು ಮೊಬೈಲ್ ಸ್ಫೋಟ ಘಟನೆಯ ಬಗ್ಗೆ ಒನ್‌ಪ್ಲಸ್‌ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಸ್ಮಾರ್ಟ್‌ಫೋನ್‌ ತಯಾರಿಸಿದ ಕಂಪನಿಯನ್ನು ನಿಷೇಧಿಸಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಒನ್‌ಪ್ಲಸ್ ಕಂಪನಿಯು ಪ್ರತಿಕ್ರಿಯಿಸಿದ್ದು, ಸ್ಮಾರ್ಟ್‌ಫೋನ್ ಸ್ಫೋಟದ ಬಗ್ಗೆ ಸೂಕ್ತ ಪರಿಶೀಲನೆ ನಡೆಸದೆ ಪರಿಹಾರ ನೀಡುವುದಿಲ್ಲ. ಸ್ಫೋಟ ಹೇಗಾಯಿತು ಎಂದು ತಿಳಿಯಲು ವಕೀಲ ಗೌರವ್‌ ಗುಲಾಟಿ ಅವರನ್ನು ಸಂಪರ್ಕಿದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದೆ.

ಕೋರ್ಟ್​ ಆವರಣದಲ್ಲೇ ವಕೀಲರ ಜೇಬಿನಲ್ಲಿದ್ದ ಒನ್‌ಪ್ಲಸ್‌ನ ಫೋನ್ ದಿಡೀರ್ ಬ್ಲಾಸ್ಟ್!

ಅಂದಹಾಗೇ ಒನ್‌ಪ್ಲಸ್ ಸಂಸ್ಥೆಯ ಸ್ಮಾರ್ಟ್​ಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆ ಆಗಸ್ಟ್ ಮೊದಲ ವಾರದಲ್ಲಿ ಇದೇ ರೀತಿ ಫೋನ್‌ನಲ್ಲಿ ಬೆಂಕಿ ಕಾಣಿಸಿತ್ತು. ಒನ್‌ಪ್ಲಸ್ ನಾರ್ಡ್ 2 ಫೋನ್ ಮಾರುಕಟ್ಟೆಗೆ ಬಂದು ಎರಡು ವಾರ ಕಳೆದಿವೆ. ಆದರೆ, ಬೇರೆ ಕಾರಣಗಳಿಂದ ಫೋನ್ ಸ್ಫೋಟಗೊಂಡಿದೆ ಎಂದು ಒನ್‌ಪ್ಲಸ್ ಸ್ಪಷ್ಟನೆ ನೀಡಿದೆ. ಅದೇನೇ ಇದ್ದರೂ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಆದ ಕೆಲವೇ ದಿನಗಳಲ್ಲಿ ಎರಡೆರಡು ಮೊಬೈಲ್ ಬ್ಲಾಸ್ಟ್‌ ಆಗಿರುವುದು ಬಳಕೆದಾರರಲ್ಲಿ ಭಯ ಮೂಡಿಸಿರದೇ ಇರದು.

ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ತಿಳಿಸಿಕೊಳ್ಳೋಣ.

ಬೇರೆ ಚಾರ್ಜರ್ ಬಳಕೆ ಮಾಡಬೇಡಿ
ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು.ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್‌ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುತ್ತದೆ.!

ಅತೀ ಹೆಚ್ಚು ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ
ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ನ್ನು ಚಾರ್ಜ್ ಗೆ ಹಾಕಿಡುವ ಅಭ್ಯಾಸ ಬಿಟ್ಟುಬಿಡಿ. ಇದು ಸ್ಮಾರ್ಟ್ ಫೋನ್ ಅತೀ ಹೆಚ್ಚು ಬಿಸಿಯಾಗುವಂತೆ ಮಾಡುತ್ತದೆ. ನಿಮ್ಮ ಫೋನ್ ಶೇಕಡಾ 90ರಷ್ಟು ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೂಡ ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರುತ್ತದೆ.

ನೇರ ಸೂರ್ಯನ ಕಿರಣಗಳಿಗೆ ಮೊಬೈಲ್ ಒಡ್ಡಬೇಡಿ
ನೇರವಾಗಿ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಫೋನನ್ನು ಇಟ್ಟು, ಚಾರ್ಜ್ ಮಾಡಬೇಡಿ. ಅಥವಾ ಬಿಸಿಯಾಗಿರುವ ಜಾಗಗಳು ಉದಾಹರಣೆಗೆ ಕಾರಿನ ಡ್ಯಾಶ್ ಬೋರ್ಡ್ ( ಬೆಳಗಿನ ಹೊತ್ತಿನಲ್ಲಿ) ಬಳಿ ಇಟ್ಟು ಹೆಚ್ಚು ಘಂಟೆಗಳ ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ. ಫೋನ್ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ.

ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಫೋನ್ ಸರಿಪಡಿಸಿಕೊಳ್ಳಿ ಇದನ್ನು ಕೂಡ ನೀವು ಪಾಲಿಸಲೇಬೇಕು. ಅಧಿಕೃತ ಕೇಂದ್ರಗಳಲ್ಲಿ ಮಾತ್ರ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ರಿಪೇರಿ ಮಾಡಿಸಿಕೊಳ್ಳಿ. ಅಷ್ಟೇ ಅಲ್ಲ ಸ್ಮಾರ್ಟ್ ಫೋನಿನ ಸರ್ಕ್ಯೂಟ್ ಗಳು ಮತ್ತು ಯಾವುದೇ ಭಾಗಗಳು ಎಫೆಕ್ಟ್ ಗೆ ಒಳಗಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

Best Mobiles in India

English summary
Oneplus Nord 2 Caught Fire And Exploded In Delhi Lawyer Coat.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X