ಒನ್‌ಪ್ಲಸ್ ಮೊಬೈಲ್ ಖರೀದಿಸುವ ಗ್ರಾಹಕರೇ, ಈ ಆಫರ್ ಗಮನಿಸಿ!
ಒನ್‌ಪ್ಲಸ್ ಮೊಬೈಲ್ ಟೆಕ್ ವಲಯದಲ್ಲಿ ಭಿನ್ನ ಸ್ಥಾನ ಪಡೆದಿದ್ದು, ಸಂಸ್ಥೆಯ ಫೋನ್‌ಗಳಿಗೆ ಬೇಡಿಕೆ ಇದೆ. ಒನ್‌ಪ್ಲಸ್ ಸಂಸ್ಥೆಯ ನಾರ್ಡ್ ಸರಣಿಯಲ್ಲಿ ಒನ್‌ಪ್ಲಸ್ ನಾರ್ಡ್ 2T 5G ಫೋನ್ ಸಹ ಜನಪ್ರಿಯವಾಗಿದ್ದು, ಸದ್ಯ ಈ ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಸಖತ್ ಡಿಸ್ಕೌಂಟ್ ಪಡೆದಿದೆ. ಈ ಮೂಲಕ ಗ್ರಾಹಕರನ್ನು ತನ್ನತ್ತ ಹಿಂದಿರುಗಿ ನೋಡುವಂತೆ ಮಾಡಿದೆ.
ಹೌದು, ಒನ್‌ಪ್ಲಸ್ ಸಂಸ್ಥೆಯು ಒನ್‌ಪ್ಲಸ್ ನಾರ್ಡ್ 2T 5G ಫೋನ್ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. 8GB RAM + 128GB ಸ್ಟೋರೇಜ್ ವೇರಿಯಂಟ್ 28,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳ ರಿಯಾಯಿತಿ ಸಹ ಖರೀದಿದಾರರಿಗೆ ಲಭ್ಯವಾಗಲಿದೆ.

ಇನ್ನು ಈ ಫೋನ್ 4500 mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, 80W ಸೂಪರ್‌ವೂಕ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಈ ಫೋನ್ 12 GB RAM ಮತ್ತು 256 GB ವೇರಿಯಂಟ್ ಆಯ್ಕೆಯಲ್ಲಿಯೂ ಲಭ್ಯ. ಹಾಗಾದರೆ ಒನ್‌ಪ್ಲಸ್ ನಾರ್ಡ್ 2T 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ ನಾರ್ಡ್ 2T 5G ಡಿಸ್‌ಪ್ಲೇ ರಚನೆ: ಒನ್‌ಪ್ಲಸ್ ನಾರ್ಡ್ 2T 5G ಸ್ಮಾರ್ಟ್‌ಫೋನ್ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 90Hz ರಿಫ್ರೆಶ್ ರೇಟ್ ಪಡೆದಿದ್ದು, HDR 10+ ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.
ಒನ್‌ಪ್ಲಸ್ ನಾರ್ಡ್ 2T 5G ಪ್ರೊಸೆಸರ್ ಬಲ : ಒನ್‌ಪ್ಲಸ್ ನಾರ್ಡ್ 2T 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಅನ್ನು ಆಕ್ಷಿಜನ್ OS 12.1 ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8 GB RAM + 128 GB ಮತ್ತು 12 GB RAM ಮತ್ತು 256 GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯ.
ಒನ್‌ಪ್ಲಸ್ ನಾರ್ಡ್ 2T 5G ಕ್ಯಾಮೆರಾ ಸೆನ್ಸಾರ್ : ಒನ್‌ಪ್ಲಸ್ ನಾರ್ಡ್ 2T 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX615 ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.
ಒನ್‌ಪ್ಲಸ್ ನಾರ್ಡ್ 2T 5G ಬ್ಯಾಟರಿ ಮತ್ತು ಇತರೆ : ಒನ್‌ಪ್ಲಸ್ ನಾರ್ಡ್ 2T 5G ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಅಲ್ಲದೇ ಇದು 80W SuperVOOC ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಜೊತೆಗೆ ಈ ಮೊಬೈಲ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.


Click it and Unblock the Notifications








