ಒನ್‌ಪ್ಲಸ್‌ನ ಈ ಜನಪ್ರಿಯ ಫೋನಿಗೆ ಭರ್ಜರಿ ಡಿಸ್ಕೌಂಟ್; ಆದರೆ ಖರೀದಿಗೆ ಯೋಗ್ಯವೇ?
ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಒನ್‌ಪ್ಲಸ್ ಬ್ರ್ಯಾಂಡ್‌ನ ಫೋನ್‌ಗಳಲ್ಲಿ ಒನ್‌ಪ್ಲಸ್ ನಾರ್ಡ್ 3 ( OnePlus Nord 3 ) ಸಹ ಒಂದು. ಈ ಫೋನ್ ಇದೀಗ ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣದಲ್ಲಿ ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಗ್ರಾಹಕರು ಸುಮಾರು 20000ರೂ. ಗಳ ಒಳಗೆ ಈ ಫೋನ್ ಅನ್ನು ಖರೀದಿಸಬಹುದು. ಅಂದಹಾಗೆ ಸದ್ಯ ಸಖತ್ ಆಫರ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿರುವ ಒನ್‌ಪ್ಲಸ್ ನಾರ್ಡ್ 3 ಮೊಬೈಲ್ ಖರೀದಿಗೆ ಈ ಫೋನ್ ಯೋಗ್ಯವೇ?
ಹೌದು, ಅಮೆಜಾನ್ ತಾಣದಲ್ಲಿ ಒನ್‌ಪ್ಲಸ್ ನಾರ್ಡ್ 3 ಮೊಬೈಲ್ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸದ್ಯ ಲಭ್ಯ ಇರುವ ಎಲ್ಲ ರಿಯಾಯಿತಿ ಸೇರಿ ಈ ಫೋನ್ ಅನ್ನು ಗ್ರಾಹಕರು 20,000 ರೂ. ಒಳಗೆ ಖರೀದಿಸಬಹುದು. ಅಂದಹಾಗೆ ಈ ಫೋನ್ ಕಳೆದ ವರ್ಷ 33,999ರೂ. ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್ ನಲ್ಲಿ ಕೆಲಸ ಮಾಡುತ್ತದೆ.

ಆಫರ್ ಬಗ್ಗೆ ಇಲ್ಲಿದೆ ಮಾಹಿತಿ
ಒನ್‌ಪ್ಲಸ್ ನಾರ್ಡ್ 3 ಮೊಬೈಲ್‌ನ 8GB RAM + 128GB ವೇರಿಯಂಟ್ 20,999ರೂ. ಗಳ ರಿಯಾಯಿತಿ ದರದಲ್ಲಿ ಲಿಸ್ಟ್ ಮಾಡಲಾಗಿದೆ. ಇದರೊಂದಿಗೆ ಅಮೆಜಾನ್‌ನಲ್ಲಿ 1,000 ರೂ. ಗಳ ಕೂಪನ್ ಲಭ್ಯವಿದ್ದು, ಆ ಮೂಲಕ ಈ ಫೋನ್ ಅನ್ನು 19,999ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಆಯ್ದ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಮತ್ತಷ್ಟು ಡಿಸ್ಕೌಂಟ್ ಖಚಿತ ಎನ್ನಲಾಗಿದೆ. ಇನ್ನು ಈ ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ ನಾರ್ಡ್ 3 ಫೀಚರ್ಸ್
ಒನ್‌ಪ್ಲಸ್ ನಾರ್ಡ್ 3 ಮೊಬೈಲ್ 6.74 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 40Hz - 120Hz ಮತ್ತು 450ppi ಪಿಕ್ಸೆಲ್ ಸಾಂದ್ರತೆಯ ಜೊತೆ ಡೈನಾಮಿಕ್ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದ್ದು, ಇದರೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿದೆ.
ಒನ್‌ಪ್ಲಸ್ ನಾರ್ಡ್ 3 ಮೊಬೈಲ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಮಾಲಿ -G710 MC10 GPU ಸಪೋರ್ಟ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 13 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB RAM ಮತ್ತು 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಅನ್ನು ಒಳಗೊಂಡಿದೆ.
ಒನ್‌ಪ್ಲಸ್ ನಾರ್ಡ್ 3 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ Sony IMX890 ಸೆನ್ಸಾರ್ ಅನ್ನು ಹೊಂದಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಒನ್‌ಪ್ಲಸ್ ನಾರ್ಡ್ 3 ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 80W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.


Click it and Unblock the Notifications








