OnePlus: ಒನ್‌ಪ್ಲಸ್‌ನ ಈ ಫೋನ್‌ಗೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್!
ಒನ್‌ಪ್ಲಸ್ (OnePlus) ಫೋನ್‌ಗಳಿಗೆ ಭಾರತದಲ್ಲಿ ಬಹಳ ಬೇಡಿಕೆ ಇದೆ. ಈ ಫೋನ್‌ಗಳು ಪ್ರೀಮಿಯಂ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತಿದ್ದು, ಇದೀಗ ಈ ಒನ್‌ಪ್ಲಸ್ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಬೃಹತ್ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಒನ್‌ಪ್ಲಸ್ ನಾರ್ಡ್ 3 ಸ್ಮಾರ್ಟ್‌ಫೋನ್‌ಗೆ (OnePlus Nord 3 smartphone) ಇದೀಗ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಆಫರ್ ನೀಡಲಾಗಿದೆ. ಈ ಮೂಲಕ ಗ್ರಾಹಕರು ಈ ಫೋನ್ ಖರೀದಿ ಮೇಲೆ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಹೆಚ್ಚಿನ ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, ಈ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ಏನು?, ಈ ಫೋನ್ ಅನ್ನು ಈ ಬೆಲೆಗೆ ಖರೀದಿ ಮಾಡಲು ಯೋಗ್ಯವೇ ಎಂಬ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ನಾರ್ಡ್ 3 ಗೆ ಆಫರ್: ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 33,999 ರೂ.ಗಳಾಗಿದ್ದು, ಇದೀಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ (Amazon, Flipkart) ಎರಡರಲ್ಲೂ ಆಫರ್ ನೀಡಲಾಗಿದೆ. ಈ ಮೂಲಕ ನೀವು ಇದನ್ನು ಕೇವಲ 29,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ 4,000ರೂ.ಗಳ ಹಣ ಉಳಿತಾಯ ಮಾಡಬಹುದು.
ಇನ್ನು ಈ ಸ್ಮಾರ್ಟ್‌ಫೋನ್ ಕಲಾತ್ಮಕವಾಗಿದ್ದು, ಸೊಗಸಾದ ವಿನ್ಯಾಸವನ್ನು ಹೊಂದಿದೆ. ಇದು ಫ್ಲಾಟ್ 6.7 ಇಂಚಿನ 120Hz ಅಮೋಲೆಡ್ ಡಿಸ್‌ಪ್ಲೇ (AMOLED display) ಆಯ್ಕೆ ಪಡೆದಿದ್ದು, ಈ ಮೂಲಕ ಉತ್ತಮ ವೀಕ್ಷಣಾ ಅನುಭವವನ್ನು ನೀಡಲಿದೆ. ಇದರೊಂದಿಗೆ ಸ್ಲೈಡರ್ ಫೀಚರ್ಸ್‌ನೋಟಿಫೀಕೇಶನ್ ವಿಭಾಗದಲ್ಲಿ ನಿಮಗೆ ಭಿನ್ನ ಅನುಭವವನ್ನು ನೀಡಲಿದೆ.
ಈ ಫೋನ್‌ನ ಮೂಲ ಮಾದರಿಯು 8GB RAM ಅನ್ನು ಹೊಂದಿದ್ದು, ಈ ಮೂಲಕ ಉತ್ತಮ ಕಾರ್ಯನಿರ್ವಹಣೆಯ ಕೆಲಸ ಮಾಡುತ್ತದೆ. ಇದರೊಂದಿಗೆ ಆಕ್ಸಿಜನ್ ಓಎಸ್ 13 ಅನ್ನು ಈ ಫೋನ್ ರನ್ ಮಾಡಲಿದ್ದು, ಬಳಕೆ ಮಾಡಲು ಹೆಚ್ಚು ಮೋಜು ಎನಿಸುತ್ತದೆ. ಅಷ್ಟೇ ಅಲ್ಲದೆ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಮೂಲಕ ದೀರ್ಘ ಬ್ಯಾಕಪ್ ಅನ್ನು ಪಡೆಯಬಹುದಾಗಿದೆ. ಇದರೊಂದಿಗೆ ಈ ಬ್ಯಾಟರಿ 80W ಚಾರ್ಜರ್ ಬೆಂಬಲ ಪಡೆದಿದೆ.

ಈ ಬೆಲೆ ಕಡಿತದಿಂದಾಗಿ ಮಿಡ್‌ರೇಂಜ್ ಬೆಲೆಯ ಫೋನ್ ಖರೀದಿದಾರರಿಗೆ ಅತ್ಯುತ್ತಮ ಆಯ್ಕೆ ಆಗಿರಲಿದೆ. ಅದರಲ್ಲೂ ಈ ಫೋನ್‌ನ ಕಾರ್ಯಕ್ಷಮತೆ, ಶೈಲಿ ಹಾಗೂ ಕ್ಯಾಮೆರಾ ಫೀಚರ್ಸ್ ಎಲ್ಲವನ್ನು ಒಟ್ಟುಗೂಡಿಸಿ ನೋಡಿದರೆ ಈ ಬೆಲೆಗೆ ಈ ಫೋನ್ ಯೋಗ್ಯ ಎಂದು ಹೇಳಬಹುದು. ಮಿಗಿಲಾಗಿ ದೀರ್ಘ ಬ್ಯಾಕಪ್ ನೀಡುವ ವಿಶೇಷ ಸಾಮರ್ಥ್ಯ ಈ ಫೋನ್‌ನಲ್ಲಿದ್ದು, ಬ್ಯಾಟರಿ ಕೇಂದ್ರಿತ ಗ್ರಾಹಕರಿಗೂ ಇದು ಉತ್ತಮ ಆಯ್ಕೆಯಾಗಿದೆ.
ಈ ಆಫರ್ ಬೆಲೆ ಖುಷಿಯೊಂದಿಗೆ ಒನ್‌ಪ್ಲಸ್ ಪ್ರಿಯರು ಖುಷಿಪಡಬಹುದಾದ ಮತ್ತೊಂದು ವಿಷಯ ಸಹ ಇದೆ. ಅದುವೇ ಒನ್‌ಪ್ಲಸ್ ಏಸ್ 3 ಸ್ಮಾರ್ಟ್‌ಫೋನ್‌ನ (OnePlus Ace 3 smartphone) ಫೀಚರ್ಸ್ ಬಹಿರಂಗ ಆಗಿರುವುದು. ಈ ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿರಲಿದ್ದು, 4500ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ 8T LTPO ಸರ್ಕ್ಯೂಟ್ ವಿನ್ಯಾಸವನ್ನು ಈ ಫೋನ್ ಹೊಂದಿರಲಿದೆ ಎನ್ನುವ ಮಾಹಿತಿ ಇದೆ.

ಇದರೊಂದಿಗೆ ಈ ಫೋನ್ ಮುಂದಿನ ವಾರ ಜನವರಿ 4 ರಂದು ಚೀನಾದಲ್ಲಿ ಲಾಂಚ್ ಆಗಲಿದ್ದು, ಟೀಸರ್ ಚಿತ್ರಗಳು ಈಗಾಗಲೇ ಫೋನ್‌ನ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ಬಹಿರಂಗಪಡಿಸಿವೆ. ಅದರಲ್ಲೂ ಈ ಒನ್‌ಪ್ಲಸ್ ಏಸ್ 3 ಒನ್‌ಪ್ಲಸ್ ಏಸ್ 2ನ ಉತ್ತರಾಧಿಕಾರಿಯಾಗಿದೆ ಮತ್ತು ಭಾರತವನ್ನು ಒಳಗೊಂಡಂತೆ ಜಾಗತಿಕ ಮಾರುಕಟ್ಟೆಗಳಿಗೆ ಒನ್‌ಪ್ಲಸ್ 12R (OnePlus 12R) ಎಂದು ಮರುಬ್ರಾಂಡ್ ಮಾಡುವ ನಿರೀಕ್ಷೆಯಿದೆ ಎಂದೂ ಸಹ ಹೇಳಲಾಗಿದೆ.


Click it and Unblock the Notifications








