ಒನ್‌ಪ್ಲಸ್ ನಾರ್ಡ್ 3 ಫೋನ್‌ನ ಬೆಲೆ ಲೀಕ್: ಫೀಚರ್ಸ್ ಏನೇನಿದೆ?
ಒನ್‌ಪ್ಲಸ್ ಫೋನ್‌ಗಳು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈ ಕಾರಣಕ್ಕೆ ಬಹುಪಾಲು ಮಂದಿ ತಮ್ಮ ಸ್ಮಾರ್ಟ್‌ಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಮುಂದಾದಾಗ ಯಾವಾಗ ಒನ್‌ಪ್ಲಸ್ ಹೊಸ ಫೋನ್ ಲಾಂಚ್ ಮಾಡುತ್ತದೆ ಎಂದು ಕಾದು ಕುಳಿತಿರುತ್ತಾರೆ. ಅದರಂತೆ ಒನ್‌ಪ್ಲಸ್ ನಾರ್ಡ್ 3 ಸ್ಮಾರ್ಟ್‌ಫೋನ್ ಅನ್ನು ಮುಂದಿನ ದಿನಗಳಲ್ಲಿ ಲಾಂಚ್ ಮಾಡಲಾಗುತ್ತಿದ್ದು, ಲಾಂಚ್ ಆಗುವ ಮುನ್ನವೇ ಇದರ ಬೆಲೆ ವಿವರ ತಿಳಿದುಬಂದಿದೆ.
ಹೌದು, ಭಾರತದಲ್ಲಿ ಒನ್‌ಪ್ಲಸ್ ಫೋನ್‌ಗೆ ಅಗಾಧವಾದ ಕ್ರೇಜ್ ಇದೆ. ಅದರಲ್ಲೂ ಬಹುಪಾಲು ಮಂದಿ ಒನ್‌ಪ್ಲಸ್ ನಾರ್ಡ್ 3 (OnePlus Nord 3) ಯಾವಾಗ ಲಾಂಚ್ ಆಗಲಿದೆ ಎಂದು ಕಾದು ಕುಳಿತಿದ್ದು, ಈ ನಡುವೆ ಈ ಫೋನ್‌ನ ಬೆಲೆ ವಿವರ ಬಹಿರಂಗ ಆಗಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್‌ನ ಪ್ರಮುಖ ಲೀಕ್ ಫೀಚರ್ಸ್ ಹಾಗೂ ಇದರ ಬೆಲೆ ಎಷ್ಟಿರಲಿದೆ ಎಂದು ತಿಳಿಯೋಣ.

ಒನ್‌ಪ್ಲಸ್ ನಾರ್ಡ್ 3 ಡಿಸ್‌ಪ್ಲೇ ವಿವರ: ಈ ಫೋನ್‌ನ ಬೆಲೆ ವಿವರವನ್ನು ತಿಳಿಯುವ ಮುನ್ನ ಲೀಕ್ ಮಾಹಿತಿ ಪ್ರಕಾರ ಇದು ಏನೆಲ್ಲಾ ಪ್ರಮುಖ ಫೀಚರ್ಸ್ ಪಡೆದಿದೆ ಎಂದು ತಿಳಿದುಕೊಂಡರೆ ಉತ್ತಮ. ಅದರಂತೆ ಈ ಫೋನ್ 1.5K ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 6.74 ಇಂಚಿನ ಡಿಸ್‌ಪ್ಲೇ ಯನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ. ಜೊತೆಗೆ ಈ ಡಿಸ್‌ಪ್ಲೇ ಅಮೋಲೆಡ್ ಆಗಿರಬಹುದು ಎಂದು ನಂಬಲಾಗಿದೆ. ಇನ್ನುಳಿದಂತೆ 120Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿರಬಹುದು.
ಒನ್‌ಪ್ಲಸ್ ನಾರ್ಡ್ 3 ಪ್ರೊಸೆಸರ್ ಮಾಹಿತಿ: ಕೆಲವು ಮೂಲ ಮಾಹಿತಿ ಪ್ರಕಾರ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಬಲ ಹೊಂದಿರಬಹುದು ಎನ್ನಲಾಗಿದ್ದು, ಇದು ಫ್ಲ್ಯಾಗ್‌ಶಿಪ್-ಗ್ರೇಡ್ ಚಿಪ್‌ಸೆಟ್ ಆಗಿರಲಿದೆ. ಜೊತೆಗೆ ಕಂಪೆನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಒನ್‌ಪ್ಲಸ್ ಪ್ಯಾಡ್‌ನಲ್ಲೀ ಇದೇ ಬಲ ನೀಡಲಾಗಿದೆ. ಅದಾಗ್ಯೂ ಇದೇ ಪ್ರೊಸೆಸರ್ ಇರಲಿದೆಯಾ ಎಂಬ ನಿಖರ ಮಾಹಿತಿ ತಿಳಿದುಬಂದಿಲ್ಲ.
ಒನ್‌ಪ್ಲಸ್ ನಾರ್ಡ್ 3 ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮರಾ ರಚನೆ ಪಡೆದುಕೊಂಡಿದ್ದು, 8 ಮೆಗಾಪಿಕ್ಸೆಲ್ ಸೆಕೆಂಡರಿ ಹಾಗೂ 2 ಮೆಗಾಪಿಕ್ಸೆಲ್ ಸಾಮಾನ್ಯ ಕ್ಯಾಮೆರಾ ಹೊಂದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದು ಕಂಪನಿಯ ಸಿಗ್ನೇಚರ್ ಅಲರ್ಟ್ ಸ್ಲೈಡರ್ ಫೀಚರ್ಸ್ ಅನ್ನು ಪಡೆದುಕೊಳ್ಳಲಿದೆ ಎಂದೂ ತಿಳಿದುಬಂದಿದೆ.

ಒನ್‌ಪ್ಲಸ್ ನಾರ್ಡ್ ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿರಲಿದ್ದು, ಫೋನ್ ಜೊತೆಗೆ ಚಾರ್ಜರ್ ಅನ್ನು ಸಹ ಬಂಡಲ್ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ 80W ವೇಗದ ಚಾರ್ಜಿಂಗ್ ತಂತ್ರಜ್ಞಾನ ಇದರಲ್ಲಿ ಇರಲಿದ್ದು, ಬೇಗನೇ ಈ ಸ್ಮಾರ್ಟ್‌ಫೋನ್ ಅನ್ನು ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ.
ಒನ್‌ಪ್ಲಸ್ ನಾರ್ಡ್ 3 ಬೆಲೆ ವಿವರ: ಪ್ರಮುಖ ವಿಷಯಕ್ಕೆ ಬರುವುದಾದರೆ ಈ ಫೋನ್ ಭಾರತದಲ್ಲಿ ಜೂನ್‌ನಲ್ಲಿ ಲಾಂಚ್ ಆಗಲಿದ್ದು, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಮೂಲಕ ಈ ಮಾಹಿತಿ ತಿಳಿದುಬಂದಿದೆ. ಅದರಂತೆ ಈ ಫೋನ್ 30,000ರೂ.ಗಳು ಅಥವಾ 32,000ರೂ.ಗಳು ಎಂದು ತಿಳಿದುಬಂದಿದೆ. ಅದರಲ್ಲೂ ಕೆಲವು ವರದಿಗಳ ಪ್ರಕಾರ ಈ ಫೋನ್ 30,000ರೂ.ಗಳ ಬೆಲೆ ಮೀರುವುದಿಲ್ಲ ಎಂದೂ ಸಹ ಹೇಳಲಾಗುತ್ತಿದೆ.

ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಒನ್‌ಪ್ಲಸ್‌ಗೆ ಸ್ಪರ್ಧೆ ನೀಡುತ್ತಿರುವ ಐಕ್ಯೂ ಇತ್ತೀಚೆಗೆ ಐಕ್ಯೂ ನಿಯೋ 7 ಹಾಗೂ ಪೊಕೊ ಕಂಪೆನಿಯು ಪೊಕೊ F5 5G ಸ್ಮಾರ್ಟ್‌ಫೋನ್ ಅನ್ನು ಇದೇ ಶ್ರೇಣಿಯ ಬೆಲೆಯಲ್ಲಿ ಘೋಷಣೆ ಮಾಡಲಾಗಿದೆ. ಈ ಕಾರಣಕ್ಕೆ ಒನ್‌ಪ್ಲಸ್ ತನ್ನ ಮಿಡ್ ರೇಂಜ್ ಫೋನ್ ಆಗಿರುವ ಈ ಫೋನ್ ಅನ್ನು ಈ ಎರಡೂ ಫೋನ್‌ಗಳು ಹೊಂದಿರುವ ಬೆಲೆಗಿಂತ ಅಧಿಕ ಬೆಲೆಯಲ್ಲಿ ಖಂಡಿತಾ ಮಾರಾಟ ಮಾಡುವುದಿಲ್ಲ ಎಂದು ವರದಿಗಳು ತಿಳಿಸಿವೆ.


Click it and Unblock the Notifications








