Home
ಸುದ್ದಿಜಾಲ

ನಾಳೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾದ OnePlus Nord 4 ಫೋನ್‌; ಫೀಚರ್ಸ್ ಏನು?

ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಸಂಸ್ಥೆಯ ಮೊಬೈಲ್‌ಗಳಿಗೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ನೂತನ ಮಾಡೆಲ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿರುವ ಸಂಸ್ಥೆಯು ಇದೀಗ ತನ್ನ ಮೊಬೈಲ್‌ಗಳ ಲಿಸ್ಟ್‌ಗೆ ಹೊಸ ಸೇರ್ಪಡೆ ಮಾಡಲು ಸಕಲ ಸಜ್ಜಾಗಿದೆ. ಅದುವೇ ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ ಆಗಿದೆ. ಇನ್ನು ಈ ಬಹುನಿರೀಕ್ಷಿತ ಹೊಸ ಫೋನ್‌ ನಾಳೆ (ಜುಲೈ 16 ರಂದು) ದೇಶಿಯ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಫೋನ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7+ ಜೆನ್‌ 3 ಪ್ರೊಸೆಸರ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಹೌದು, ಜನಪ್ರಿಯ ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್‌ ನಾರ್ಡ್‌ 4 ( OnePlus Nord 4) ಸ್ಮಾರ್ಟ್‌ಫೋನ್‌ ನಾಳೆ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ ನಾರ್ಡ್‌ 3 ಫೋನಿನ ಉತ್ತರಾಧಿಕಾರಿ ಆಗಿದ್ದು, ಕೆಲವು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡುವುದು ನಿಶ್ಚಿತ. ಇನ್ನು ಈ ಫೋನ್‌ ಲಾಂಚ್‌ ಕಾರ್ಯಕ್ರಮವು ಜುಲೈ 16 ರಂದು ಭಾರತೀಯ ಕಾಲಮಾನ ಸಂಜೆ 6:30 ಗಂಟೆಗೆ ಪ್ರಾರಂಭವಾಗಲಿದೆ.

ನಾಳೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾದ OnePlus Nord 4 ಫೋನ್‌; ಫೀಚರ್ಸ್ ಏನು

ಲೀಕ್‌ ಮಾಹಿತಿಗಳ ಪ್ರಕಾರ ಈ ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಇದರ ಜೊತೆಗೆ 1.5K ರೆಸಲ್ಯೂಶನ್ ಹೊಂದಿರುವ AMOLED ಸ್ಕ್ರೀನ್‌ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ನಾರ್ಡ್‌ 4 ನಿರೀಕ್ಷಿತ ಫೀಚರ್ಸ್‌

ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಈ ಡಿಸ್‌ಪ್ಲೇ 1240 x 2772 ಪಿಕ್ಸೆಲ್ ರೆಸಲ್ಯೂಶನ್‌ ಅನ್ನು ಒಳಗೊಂಡಿರಲಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಸೌಲಭ್ಯ ಕೂಡಾ ಪಡೆದಿರಲಿದ್ದು, 451ppi ಪಡೆದಿರಲಿದೆ. ಜೊತೆಗೆ HDR10+ ಸಪೋರ್ಟ್‌ ಇರಲಿದೆ ಎನ್ನಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7+ ಜೆನ್‌ 3 ಪ್ರೊಸೆಸರ್‌ ಪವರ್‌ ಒಳಗೊಂಡರುವುದು ಬಹುತೇಕ ನಿಕ್ಕಿ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ಕೆಲಸ ನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 16GB RAM ಮತ್ತು 256GB ಸ್ಟೋರೇಜ್‌ ಅನ್ನು ಒಳಗೊಂಡಿರುವ ಸಾಧ್ಯತೆ ಇವೆ.

ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನಲ್ಲಿ ಇರಲಿದೆ. ಇದರ ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಅನ್ನು ಪಡೆದುಕೊಂಡಿರಲಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.

ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರುವ ಸಾಧ್ಯತೆಗಳು ಇದ್ದು, ಇದರೊಂದಿಗೆ 100W ವೈಯರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಮಾಡುವ ನಿರೀಕ್ಷೆಗಳು ಇವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಇರಲಿವೆ.

ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ 12GB RAM + 256GB ಹಾಗೂ 16GB RAM + 512GB ಸ್ಟೋರೇಜ್‌ ಒಳಗೊಂಡಿರುವ ಸಾಧ್ಯತೆಗಳಿವೆ. ಅಲ್ಲದೇ ಈ ಫೋನ್‌
ಬ್ಲ್ಯಾಕ್‌, ವೈಟ್‌ ಹಾಗೂ ಗ್ರೇ ಕಲರ್‌ ಆಯ್ಕೆಗಳಲ್ಲಿ ಲಗ್ಗೆ ಇಡುವ ಸಾಧ್ಯತೆಗಳು ಇವೆ.

Best Mobiles in India

English summary
OnePlus Nord 4 is launching in india tomorrow. check out leak specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+