ಒನ್‌ಪ್ಲಸ್ ನಾರ್ಡ್ 4 ಜುಲೈ ಮೂರನೇ ವಾರದಲ್ಲಿ ಲಾಂಚ್ ಸಾಧ್ಯತೆ! ಬೆಲೆ ಎಷ್ಟು?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ (OnePlus smartphone) ಭರ್ಜರಿ ಬೇಡಿಕೆ ಇದ್ದು, ಈ ನಡುವೆ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಅಂದರೆ ಇನ್ನೇನು ಕೆಲವೇ ದಿನಗಳಲ್ಲಿ ಒನ್‌ಪ್ಲಸ್ ನಾರ್ಡ್ 4 (OnePlus Nord 4) ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಈ ಫೋನ್ ಅಲ್ಲದೆ ಈ ಮುಂದಿನ ಜನ್ ಒನ್‌ಪ್ಲಸ್ ನಾರ್ಡ್ ಫೋನ್‌ನ ಬೆಲೆ 30,000 ರೂ.ಗಳಿಂದ 35,000 ರೂ.ಗಳಾಗಿರಬಹುದು ಎಂದೂ ಸಹ ಅಂದಾಜಿಸಲಾಗಿದೆ. ಅಲ್ಲದೆ ಆಕರ್ಷಕ ಫೀಚರ್ಸ್ ಅನ್ನು ಈ ಫೋನ್ ಹೊಂದಿರಲಿದೆ ಎಂದೂ ಸಹ ಹೇಳಲಾಗಿದೆ.
ಹೌದು, ಒನ್‌ಪ್ಲಸ್ ಫೋನ್‌ಗಳಿಗೆ ಇರುವ ಬೇಡಿಕೆಯನ್ನು ಈಡೇರಿಸುವ ಭಾಗವಾಗಿ ಕಂಪೆನಿಯು ಆಗಾಗ್ಗೆ ವಿಶೇಷ ಫೀಚರ್ಸ್ ಆಯ್ಕೆಯ ಪೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಲೇ ಇದೆ. ಈ ನಡುವೆ ಒನ್‌ಪ್ಲಸ್ ನಾರ್ಡ್ 4 ಜುಲೈ ಮೂರನೇ ವಾರದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆಯಾದರೂ ಸಹ ಒನ್‌ಪ್ಲಸ್ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಲೀಕ್ ಫೀಚರ್ಸ್ ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್: ಮುಂಬರುವ ಈ ಮಧ್ಯಮ ಶ್ರೇಣಿಯ 5G ಫೋನ್‌ನ ಬಿಡುಗಡೆಯನ್ನು ಕಂಪನಿಯು ಇನ್ನೂ ದೃಢೀಕರಿಸಿಲ್ಲ. ಆದರೆ, ತಾಜಾ ಲೀಕ್ ಮಾಹಿತಿ ಪ್ರಕಾರ 2 ತಿಂಗಳೊಳಗೆ ಅದನ್ನು ಘೋಷಿಸಲಾಗುವುದು ಎಂದು ತಿಳಿದುಬಂದಿದೆ. ಅಂದರೆ ಈ ಫೋನ್ ಜುಲೈ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಈವೆಂಟ್ ವಿವರಗಳೊಂದಿಗೆ ಪರಿಚಿತವಾಗಿರುವ ಜನರು ಸ್ಮಾರ್ಟ್‌ಪ್ರಿಕ್ಸ್ ಗೆ ಮಾಹಿತಿ ಹಂಚಿಕೊಂಡಿದ್ದು, ಅದನ್ನು ಸ್ಮಾರ್ಟ್‌ಪ್ರಿಕ್ಸ್ ವರದಿ ಮಾಡಿದೆ. ಮುಂಬರುವ ನಾರ್ಡ್ ಫೋನ್ ಬಿಡುಗಡೆಗಾಗಿ ಒನ್‌ಪ್ಲಸ್ ವ್ಯಕ್ತಿಗತ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದೆ ಎಂಬ ಸಹ ಮಾಹಿತಿ ಇದೆ.
2024 ರ ದ್ವಿತೀಯಾರ್ಧದಲ್ಲಿ ಬರಲಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿದ್ದು, ಇದರಿಂದಾಗಿ ಜೂನ್ ನಂತರ ಯಾವುದೇ ಸಮಯದಲ್ಲಿ ಇದು ಲಾಂಚ್ ಆಗಲಿದೆ. ಇದು ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ ಒನ್‌ಪ್ಲಸ್ ನಾರ್ಡ್ 3 ಸ್ಮಾರ್ಟ್‌ಫೋನ್‌ನ ಮುಂದುವರೆದ ಸರಣಿ ಫೋನ್ ಇದಾಗಿದೆ. ಈ ಫೋನ್ ಭಾರತದಲ್ಲಿ 33,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಾಂಚ್ ಮಾಡಲಾಗಿದೆ. ಆದರೆ ಮುಂಬರುವ ಹೊಸ ಫೋನ್‌ನ ಯಾವುದೇ ಬೆಲೆ ಲೀಕ್ ಆಗಿಲ್ಲ.
ಅದಾಗ್ಯೂ ಒನ್‌ಪ್ಲಸ್ ತನ್ನ ಮಧ್ಯಮ ಶ್ರೇಣಿಯ ಪ್ರೀಮಿಯಂ ಒನ್‌ಪ್ಲಸ್ 12R ಅನ್ನು 39,999 ರೂ.ಗೆ ಮಾರಾಸೇಲ್ ಮಾಡುತ್ತಿದ್ದು, ಪರಿಣಾಮ ಈ ಹೊಸ ಫೋನ್ 35,000 ರೂ.ಗಿಂತ ಹೆಚ್ಚಿರುವುದಿಲ್ಲ ಎಂದು ನಮಗೆ ಅಂದಾಜಿಸಬಹುದಾಗಿದೆ. ಅದರಲ್ಲೂ ಬ್ರ್ಯಾಂಡ್ ಎರಡು ಫೋನ್‌ಗಳ ನಡುವೆ ಉತ್ತಮ ಅಂತರವನ್ನು ಕಾಯ್ದುಕೊಳ್ಳುತ್ತದೆ ಅನ್ನೋದು ನಿಮಗೆ ತಿಳಿದಿರಲಿ. ಇದಕ್ಕಾಗಿಯೇ ಈ ಫೋನ್ 30,000 ರಿಂದ 35,000 ರೂ.ಗಳ ಒಳಗೆ ಲಭ್ಯ ಇರಲಿದೆ ಎಂದು ತಿಳಿಸಿರುವುದು.

ಕುತೂಹಲಕಾರಿಯಾಗಿ, 2020 ರಲ್ಲಿ ಬಿಡುಗಡೆಯಾದ ಮೊದಲ ಒನ್‌ಪ್ಲಸ್ ನಾರ್ಡ್ ಅನ್ನು 24,999 ರೂಗ.ಳಲ್ಲಿ ಲಭ್ಯಗೊಳಿಸಲಾಯಿತು. ಎರಡನೇ ತಲೆಮಾರಿನ (ಮೂಲ) ಒನ್‌ಪ್ಲಸ್ ನಾರ್ಡ್ ಮಾದರಿಯ ಬೆಲೆಯು ಸುಮಾರು 29,999 ರೂ.ಗೆ ಏರಿಕೆಯಾಗಿದೆ ಮತ್ತು ಮೂರನೇ ತಲೆಮಾರಿನ ಮಾದರಿಯು ಈಗ 33,999 ರೂ. ಗಳಲ್ಲಿ ಲಭ್ಯ ಇದ್ದು, ಕಂಪನಿಯು ವಿಭಿನ್ನ ಬೆಲೆಗಳಲ್ಲಿ ಗ್ರಾಹಕರಿಗೆ ಆಯ್ಕೆಗಳನ್ನು ನೀಡುವುದನ್ನು ಮುಂದುವರಿಸಲು CE ಮತ್ತು CE ಲೈಟ್ ಹೆಸರಿನಲ್ಲಿ ಟೋನ್-ಡೌನ್ ಆವೃತ್ತಿಗಳನ್ನು ಕಾರ್ಯತಂತ್ರವಾಗಿ ಪರಿಚಯಿಸಿದೆ. ಹಾಗೆಯೇ ಈ ನಾರ್ಡ್ ಸಿಇ ಲೈಟ್ ಮಾದರಿಯು 25,000 ರೂ.ಗಳ ಅಡಿಯಲ್ಲಿ ಬರುತ್ತದೆ ಮತ್ತು ನಾರ್ಡ್ ಸಿಇ ಮಾದರಿ ಬೆಲೆ 30,000 ರೂ.ಗಳಿಗಿಂತ ಕಡಿಮೆ ಇರುತ್ತದೆ.


Click it and Unblock the Notifications








