OnePlus: ಒನ್‌ಪ್ಲಸ್ ನಾರ್ಡ್ 4 ಫೋನ್ ಫೀಚರ್ಸ್ ಲೀಕ್! ಯಾವಾಗ ಲಾಂಚ್?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ (OnePlus smartphones) ವಿಶೇಷ ಬೇಡಿಕೆ ಇದ್ದು, ಈ ನಡುವೆ ಒನ್‌ಪ್ಲಸ್ ನಾರ್ಡ್ 4 (OnePlus Nord 4) ಫೋನ್‌ನ ಕೆಲವು ಫೀಚರ್ಸ್ ಲೀಕ್ ಆಗಿವೆ. ಈ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ಈ ಫೋನ್ ದೊಡ್ಡ ಸಂಚಲನ ಉಂಟು ಮಾಡಲಿದೆ ಎನ್ನಲಾಗಿದೆ.
ಹೌದು, ಒನ್‌ಪ್ಲಸ್ ನಾರ್ಡ್ 4 ಅನ್ನು ಗೀಕ್‌ಬೆಂಚ್‌ನಲ್ಲಿ ಮಾದರಿ ಸಂಖ್ಯೆ CPH2621 ನೊಂದಿಗೆ ಲಿಸ್ಟ್ ಮಾಡಲಾಗಿದೆ. ಈ ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7+ ಜನ್ 3 ಚಿಪ್‌ಸೆಟ್ ಅನ್ನು ಹೊಂದಿದೆ ಎಂದು ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಉಲ್ಲೇಖ ಮಾಡಿದ್ದಾರೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ಫೀಚರ್ಸ್ ಪಡೆದಿದೆ?, ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ನಾರ್ಡ್ 4: ಹೊಸ ಒನ್‌ಪ್ಲಸ್ ಫೋನ್ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದೆ ಮತ್ತು ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ನಾರ್ಡ್ CE 4 ಡಿವೈಸ್ ಅನ್ನು ಘೋಷಣೆ ಮಾಡಿತ್ತು. ಈಗ ವರ್ಷದ ದ್ವಿತೀಯಾರ್ಧದಲ್ಲಿ ಮೂಲ ನಾರ್ಡ್ 4 ಡಿವೈಸ್ ಅನ್ನು ಘೋಷಣೆ ಮಾಡಲಿದೆ ಎನ್ನಲಾಗಿದೆ. ಲಾಂಚ್ ಟೈಮ್‌ಲೈನ್ ಇನ್ನೂ ಬಹಿರಂಗವಾಗದಿದ್ದರೂ, ಲೀಕ್ ಮಾಹಿತಿ ಗಮನಿಸಿದರೆ ಅದು ಜೂನ್ ನಂತರ ಲಾಂಚ್ ಆಗಬಹುದು ಎನ್ನಲಾಗಿದೆ.
ಒನ್‌ಪ್ಲಸ್ ನಾರ್ಡ್ 4 ಮಾದರಿ ಸಂಖ್ಯೆ CPH2621 ನೊಂದಿಗೆ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದೆ. ಅನಾನಸ್ ಎಂಬ ಸಂಕೇತನಾಮ ಹೊಂದಿರುವ ಆಕ್ಟಾ ಕೋರ್ ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಇದನ್ನು ಲಿಸ್ಟ್ ಮಾಡಲಾಗಿದೆ. ಈ ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7+ ಜನ್ 3 ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎಂದು ಟಿಪ್‌ಸ್ಟರ್ ಯೋಗೇಶ್ ಬ್ರಾರ್ ತಿಳಿಸಿದ್ದಾರೆ.
ಗೀಕ್‌ಬೆಂಚ್‌ನಲ್ಲಿ ಒನ್‌ಪ್ಲಸ್ ನಾರ್ಡ್ 4 ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1,875 ಅಂಕಗಳನ್ನು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 4,934 ಅಂಕಗಳನ್ನು ಗಳಿಸಿದೆ. ಇದು ಬಾಕ್ಸ್ ಹೊರಗೆ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ನಲ್ಲಿ ರನ್ ಆಗಲಿದೆ. ಇದರ ಕ್ಯಾಮೆರಾವನ್ನು ಎಫ್‌ವಿ 5 ಡೇಟಾಬೇಸ್‌ನಲ್ಲಿ ಗುರುತಿಸಲಾಗಿದ್ದು, ಮುಂಬರುವ ಒನ್‌ಪ್ಲಸ್ ಫೋನ್ ಒಐಎಸ್, ಎಫ್/1.9 ಅಪರ್ಚರ್ ಮತ್ತು 26.4 ಎಂಎಂ ಫೋಕಲ್ ಲೆಂತ್ ಜೊತೆಗೆ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಎಲ್ಲಾ ಸೆನ್ಸರ್‌ಗಳ ಬಗ್ಗೆ ನಿಖರವಾದ ವಿವರಗಳು ತಿಳಿದಿಲ್ಲವಾದರೂ ಯುರೋಫಿನ್ಸ್ ಪ್ರಮಾಣೀಕರಣ ವೆಬ್‌ಸೈಟ್ 5,500mAh ಸಾಮರ್ಥ್ಯದ ಬ್ಯಾಟರಿ ಘಟಕದೊಂದಿಗೆ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಇದರ ಜೊತೆಗೆ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಫೋನ್ ಒನ್ ಪ್ಲಸ್ ಏಸ್ 3V ಡಿವೈಸ್‌ನ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು ಎಂದು ಸುಳಿವು ನೀಡುತ್ತದೆ.
ಚೀನೀ ಮಾದರಿಯನ್ನು ಗಮನಿಸಿದ್ರೆ 6.74 OLED ಫ್ಲಾಟ್ ಡಿಸ್‌ಪ್ಲೇ ಜೊತೆಗೆ 1.5K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 1,100ನಿಟ್ಸ್ HBM ಮತ್ತು 2160Hz PWM ಮಬ್ಬಾಗಿಸುವಿಕೆಯನ್ನು ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್‌ನೊಂದಿಗೆ ಕಾಣಿಸಿಕೊಂಡಿದ್ದು, 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್ ಅನ್ನು ಬೆಂಬಲಿಸಲಿದ್ದು, ಸ್ನಾಪ್‌ಡ್ರಾಗನ್ 7+ ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಫೋನ್ ಆಂಡ್ರಾಯ್ಡ್ 14 ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ProXDR ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಸೆನ್ಸರ್ ಆಯ್ಕೆ ಪಡೆದಿರಲಿದ್ದು, 8 ಮೆಗಾಪಿಕ್ಸೆಲ್ ಸೋನಿ IMX355 ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದರೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದ್ದು, 100W ವೇಗದ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲ ನೀಡಲಿದೆ.


Click it and Unblock the Notifications








