ಹೊಸ ಫೋನ್ ಲಾಂಚ್‌ಗೆ ಒನ್‌ಪ್ಲಸ್ ಸಜ್ಜು!..ಕುತೂಹಲ ಹೆಚ್ಚಿಸಿದ ಫೀಚರ್ಸ್!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಸಂಸ್ಥೆಯು ಗಟ್ಟಿ ಸ್ಥಾನ ಪಡೆದ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಒನ್‌ಪ್ಲಸ್ ಈಗಾಗಲೇ ಹಲವು ಸರಣಿಯ ಫೋನ್‌ಗಳನ್ನು ಪರಿಚಯಿಸಿದ್ದು, ಆ ಪೈಕಿ ಬಹುತೇಕ ಮಾಡೆಲ್‌ಗಳು ಟ್ರೆಂಡ್ ಸೃಷ್ಠಿಸಿವೆ. ಅದರ ಮುಂದುವರಿದ ಭಾಗವಾಗ ಒನ್‌ಪ್ಲಸ್ ಕಂಪನಿಯು ಇದೀಗ ಒನ್‌ಪ್ಲಸ್ ನಾರ್ಡ್ 4 (OnePlus Nord 4) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಜ್ಜಾಗುತ್ತಿದೆ.
ಹೌದು, ಒನ್‌ಪ್ಲಸ್ ಸಂಸ್ಥೆಯು ನೂತನವಾಗಿ ಒನ್‌ಪ್ಲಸ್ ನಾರ್ಡ್ 4 ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಬರಲಿರುವ ಈ ಫೋನ್ ಒನ್‌ಪ್ಲಸ್ ನಾರ್ಡ್ 3 ಫೋನಿನ ಉತ್ತರಾಧಿಕಾರಿ ಆಗಿರಲಿದೆ. ಅಂದಹಾಗೆ ಒನ್‌ಪ್ಲಸ್ ನಾರ್ಡ್ 4 ಫೋನ್ ಈ ವರ್ಷದ ಸೆಕೆಂಡ್ ಹಾಫ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಟಿಪ್‌ಸ್ಟರ್ ಮ್ಯಾಕ್ಸ್ ಜಂಬೋರ್ ಹೇಳಿಕೊಂಡಿದ್ದಾರೆ. ಅದನ್ನು "ಆಡಿ" ಎಂದು ಕೋಡ್‌ನೇಮ್ ಮಾಡಲಾಗಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಒನ್‌ಪ್ಲಸ್ ನಾರ್ಡ್ 4 ಫೋನ್ ಸಂಸ್ಥೆಯು ಏಸ್ 3V ಯ ರೀಬ್ರ್ಯಾಂಡ್ ಆಗಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7+ ಜೆನ್ 3 SoC ಪ್ರೊಸೆಸರ್ ಪವರ್ ಒಳಗೊಂಡಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಗ್ರಾಫಿಕ್ಸ್‌ಗಾಗಿ ಅಡ್ರಿನೊ GPU ಸಪೋರ್ಟ್ ಸಹ ಪಡೆದಿರಲಿದೆ.

ಹಾಗೆಯೇ ಒನ್‌ಪ್ಲಸ್ ನಾರ್ಡ್ 4 ಫೋನ್ ಡಿಸ್‌ಪ್ಲೇಯು ಉತ್ತಮ ಫೀಚರ್ಸ್‌ನೊಂದಿಗೆ ಇರಲಿದ್ದು, ಇದು 120Hz ರಿಫ್ರೆಶ್ ರೇಟ್ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 1.5K AMOLED ಮಾದರಿಯಲ್ಲಿ ಇರುವ ಸಾಧ್ಯತೆಗಳು ಅಧಿಕವಾಗಿವೆ.
ಅದೇ ರೀತಿ ಒನ್‌ಪ್ಲಸ್ ನಾರ್ಡ್ 4 ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಇರುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಹಾಗೆಯೇ ಸ್ಕೀಮ್ಯಾಟಿಕ್ಸ್ ಡ್ಯುಯಲ್ ಕ್ಯಾಮೆರಾ ಸೆನ್ಸಾರ್‌ಗಳ ರಚನೆ ಇರಲಿದೆ ಇದರ ಜೊತೆಗೆ ಎಲ್ಇಡಿ ಫ್ಲ್ಯಾಷ್ ಸೌಲಭ್ಯ ಸಹ ಇರುತ್ತದೆ ಎಂದು ಹೇಳಲಾಗಿದೆ.
ಇನ್ನು ಸಂಸ್ಥೆಯ ಒನ್‌ಪ್ಲಸ್ ನಾರ್ಡ್ 3 ಮೊಬೈಲ್ 6.74 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು ಡೈನಾಮಿಕ್ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದಲ್ಲದೆ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಮಾಲಿ -G710 MC10 GPU ಸಪೋರ್ಟ್ ಅನ್ನು ಪಡೆದಿದೆ. ಹಾಗೆಯೇ ಇದು ಆಂಡ್ರಾಯ್ಡ್ 13 ಆಧಾರಿತ OxygenOS 13 ನಲ್ಲಿ ಕೆಲಸ ನಿರ್ವಹಿಸಲಿದೆ.
ಇನ್ನು ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 80W SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಒನ್‌ಪ್ಲಸ್ ನಾರ್ಡ್ 3 ಮೊಬೈಲ್ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 8GB + 128 GB RAM ಸ್ಟೋರೇಜ್ ಹಾಗೂ 16 GB + 256 GB ಸ್ಟೋರೇಜ್ ವೇರಿಯಂಟ್ ಆಗಿವೆ.


Click it and Unblock the Notifications








