Home
ಸುದ್ದಿಜಾಲ

OnePlus ನಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌: ವಿಶೇಷತೆ ಏನು?, ಬೆಲೆ ಎಷ್ಟು?

ಸ್ಮಾರ್ಟ್‌ ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹಾಗೂ ಹೆಚ್ಚು ಜನಪ್ರಿಯ ಆಗಿರುವ ಒನ್‌ಪ್ಲಸ್ ಸಂಸ್ಥೆಯು ವಿಶೇಷವಾದ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ. ಈ ಡಿವೈಸ್ 38 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಅನ್ನು ನೀಡಲಿದೆ ಎಂದು ತಿಳಿದುಬಂದಿದೆ.

ಹೌದು, ಒನ್‌ಪ್ಲಸ್ (OnePlus) ಭಾರತದಲ್ಲಿ ನಾರ್ಡ್‌ 3 5G ಹಾಗೂ ನಾರ್ಡ್‌ CE 3 5G ಫೋನ್‌ಗಳನ್ನು ಲಾಂಚ್‌ ಮಾಡಿದ್ದು, ಈ ಫೋನ್‌ಗಳು ವಿಶೇಷ ಹಾಗೂ ಆಕರ್ಷಕ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿವೆ. ಅದರಲ್ಲೂ ಕೆಲವು ಪ್ರೀಮಿಯಂ ಹಾರ್ಡ್‌ವೇರ್‌ನೊಂದಿಗೆ ಒನ್‌ಪ್ಲಸ್‌ ಈ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿರುವುದು ಮತ್ತಷ್ಟು ವಿಶೇಷ. ಇದರ ಜೊತೆಗೆ ನಾರ್ಡ್ ಬಡ್ಸ್ 2R (OnePlus Nord Buds 2R) ಅನ್ನು ಸಹ ಅನಾವರಣ ಮಾಡಲಾಗಿದ್ದು, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ ಬನ್ನಿ.

OnePlus ನಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌: ವಿಶೇಷತೆ ಏನು?, ಬೆಲೆ ಎಷ್ಟು?

ಒನ್‌ಪ್ಲಸ್‌ ನಾರ್ಡ್ ಬಡ್ಸ್ 2R ವಿನ್ಯಾಸ: ಈ ಇಯರ್‌ಬಡ್ಸ್‌ ಸ್ವಲ್ಪ ಉದ್ದವಾಗಿ ಬಾಗಿದಂತಿವೆ. ಇದರೊಂದಿಗೆ ಸಿಲಿಕೋನ್ ಇಯರ್ ಟಿಪ್ಸ್ ಅನ್ನು ಹೊಂದಿದ್ದು, ಇದು ಕಿವಿಯಲ್ಲಿ ಉತ್ತಮ ಹಿಡಿತ ಮತ್ತು ನಿಷ್ಕ್ರಿಯ ಸುತ್ತುವರಿದ ಧ್ವನಿ ರದ್ದತಿಯನ್ನು ಆಯ್ಕೆಯನ್ನು ನೀಡುತ್ತದೆ. ಅದರಲ್ಲೂ ಕಳೆದ ವರ್ಷ ಬಿಡುಗಡೆಯಾದ ನಾರ್ಡ್ ಬಡ್ಸ್‌ಗಿಂತ ಇದು ಸ್ವಲ್ಪ ಹೆಚ್ಚು ದುಂಡಾದ ಆಕಾರ ಪಡೆದುಕೊಂಡಿದೆ.

ಒನ್‌ಪ್ಲಸ್‌ ನಾರ್ಡ್ ಬಡ್ಸ್ 2R ಫೀಚರ್ಸ್: ಈ ಬಡ್ಸ್‌ 12.4mನ ದೊಡ್ಡ ಡ್ರೈವರ್‌ಗಳನ್ನು ಹೊಂದಿದ್ದು, ಟೈಟಾನಿಯಂ-ಲೇಪಿತ ಡೈನಾಮಿಕ್ ಡ್ರೈವರ್‌ಗಳು ಥಂಪಿಂಗ್ ಬೇಸ್‌ ಮತ್ತು ಕ್ರಿಸ್ಪ್, ಡೈನಾಮಿಕ್ ವೋಕಲ್‌ಗಳನ್ನು ನೀಡುತ್ತವೆ ಎನ್ನಲಾಗಿದೆ. ಜೊತೆಗೆ ಡಾಲ್ಬಿ ಅಟ್ಮಾಸ್ ಮತ್ತು ಡೈರಾಕ್ ಆಡಿಯೊ ಟ್ಯೂನರ್‌ನೊಂದಿಗೆ ಟ್ಯೂನ್ ಮಾಡಲಾಗಿದ್ದು, ಇವುಗಳನ್ನು ಸಂಯೋಜಿಸಿ, ಒನ್‌ಪ್ಲಸ್‌ ಫೋನ್‌ನೊಂದಿಗೆ ಕನೆಕ್ಟ್‌ ಮಾಡಿದಾಗ ಅತ್ಯುತ್ತಮವಾದ ಆಡಿಯೊ ಅನುಭವವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಈ ಇಯರ್‌ಬಡ್‌ಗಳು ಎರಡು ಮೈಕ್ರೊಫೋನ್‌ಗಳನ್ನು ಹೊಂದಿದ್ದು ಇವು ಒನ್‌ಪ್ಲಸ್‌ನ ಎಐ ಕ್ಲಿಯರ್ ಕಾಲ್ ಅಲ್ಗಾರಿದಮ್ ನೊಂದಿಗೆ ಪ್ಯಾಕ್‌ ಆಗಿವೆ. ಈ ಮೂಲಕ ಕರೆಗಳನ್ನು ಹೆಚ್ಚು ಸ್ಪಷ್ಟವಾಗಿಡಲು ಹಿನ್ನೆಲೆ ಶಬ್ದವನ್ನು ನಿಖರವಾಗಿ ನಿರ್ಬಂಧಿಸಲು ಸಹಾಯ ಮಾಡುತ್ತದೆ. ಜೊತೆಗೆ ನಾರ್ಡ್ ಬಡ್ಸ್ 2R ತನ್ನ 94ms ಕಡಿಮೆ ಲೇಟೆನ್ಸಿ ಆಯ್ಕೆ ಹೊಂದಿದ್ದು, ಬ್ಲೂಟೂತ್ ಆವೃತ್ತಿ 5.3 ಗೆ ಬೆಂಬಲದೊಂದಿಗೆ ಗೇಮಿಂಗ್ ಆಡುವಾಗ ಹಾಗೂ ಇನ್ನಿತರೆ ಚಟುವಟಿಕೆಯಲ್ಲಿ ಉತ್ತಮ ಅನುಭವ ನೀಡುತ್ತದೆ.

ಒನ್‌ಪ್ಲಸ್‌ ನಾರ್ಡ್ ಬಡ್ಸ್ 2R ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 8 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅಥವಾ ನಾಲ್ಕು ಗಂಟೆಗಳ ನಿರಂತರ ಕರೆ ಆಯ್ಕೆಯ ಬ್ಯಾಟರಿ ಬ್ಯಾಕಪ್‌ ಪಡೆದುಕೊಂಡಿದೆ. ಚಾರ್ಜಿಂಗ್ ಕೇಸ್‌ನೊಂದಿಗೆ, ಬಳಕೆದಾರರು ಕನಿಷ್ಟ 20 ಗಂಟೆಗಳ ಕರೆ ಸಮಯ ಅಥವಾ 38 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ನಿರೀಕ್ಷಿಸಬಹುದು. ಇನ್ಉ ಪ್ರತಿ ಇಯರ್‌ಬಡ್ 36mAh ಸಾಮರ್ಥ್ಯದ ಸೆಲ್ ಅನ್ನು ಹೊಂದಿದ್ದು, ಚಾರ್ಜಿಂಗ್‌ ಕೇಸ್‌ 480mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ಒನ್‌ಪ್ಲಸ್‌ ನಾರ್ಡ್ ಬಡ್ಸ್ 2R ಬೆಲೆ ಹಾಗೂ ಲಭ್ಯತೆ: ಬೆಲೆ ಹಾಗೂ ಲಭ್ಯತೆ: ಈ ಇಯರ್‌ಬಡ್ಸ್‌ ಭಾರತದಲ್ಲಿ 2,199 ರೂ.ಗಳ ಬೆಲೆ ಹೊಂದಿದೆ. ಹಾಗೆಯೇ ಡೀಪ್ ಗ್ರೇ ಮತ್ತು ಟ್ರಿಪಲ್ ಬ್ಲೂ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಇಯರ್‌ಬಡ್ಸ್‌ ಭಾರತದಲ್ಲಿ 2,199 ರೂ.ಗಳ ಬೆಲೆ ಹೊಂದಿದೆ. ಹಾಗೆಯೇ ಡೀಪ್ ಗ್ರೇ ಮತ್ತು ಟ್ರಿಪಲ್ ಬ್ಲೂಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದ್ದು, ಜುಲೈ 15 ರಿಂದ ಒನ್‌ಪ್ಲಸ್‌ ಇ-ಸ್ಟೋರ್, ಅಮೆಜಾನ್ ಮತ್ತು ಒನ್‌ಪ್ಲಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳ ಒನ್‌ಪ್ಲಸ್‌ ಪ್ರಿಯರು ಈ ಡಿವೈಸ್‌ ಅನ್ನು ಖರೀದಿ ಮಾಡಬಹುದಾಗಿದೆ.

OnePlus ನಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌: ವಿಶೇಷತೆ ಏನು?, ಬೆಲೆ ಎಷ್ಟು?

ಇದರೊಂದಿಗೆ ಬುಲೆಟ್ಸ್ Z2 ANC ಅನ್ನು ಸಹ ಸದ್ದಿಲ್ಲದೆ ಅನಾವರಣ ಮಾಡಲಾಗಿದೆ. ಇದು ಹೊಸ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್‌ಗಳಾಗಿದ್ದು, 45dB ವರೆಗೆ ಸಕ್ರಿಯ ಶಬ್ದ ರದ್ದತಿ (ANC) ಆಯ್ಕೆ ಪಡೆದುಕೊಂಡಿದ್ದು, ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳು ಎಐ ಕ್ಲಿಯರ್ ಕಾಲ್ ಅಲ್ಗಾರಿದಮ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಸ್ಪಷ್ಟ ಕರೆ ಅನುಭವಕ್ಕಾಗಿ ಮೂರು ಮೈಕ್ರೊಫೋನ್‌ಗಳನ್ನು ಹೊಂದಿದೆ.

ಇದರೊಂದಿಗೆ IP55 ರೇಟಿಂಗ್ ಅನ್ನು ಸಹ ಹೊಂದಿದೆ. ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುವ ಈ ಡಿವೈಸ್‌ 10 ನಿಮಿಷಗಳಲ್ಲಿ 20 ಗಂಟೆಗಳವರೆಗೆ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಎಲ್ಲಾ ಫೀಚರ್ಸ್‌ನೊಂದಿಗೆ ಇದು 2,299 ರೂ. ಗಳ ಬೆಲೆ ಹೊಂದಿದ್ದು, ಬೂಮಿಂಗ್ ಬ್ಲಾಕ್ ಮತ್ತು ಗ್ರ್ಯಾಂಡ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಸಹ ಮೇಲೆ ತಿಳಿಸಿದ ಆನ್‌ಲೈನ್‌ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದು.

Best Mobiles in India

English summary
OnePlus has launched the Nord 3 5G and Nord CE 3 5G phones in India, along with the Nord Buds 2R earbuds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+