ಗ್ರಾಹಕರಿಗೆ ಭರ್ಜರಿ ಖುಷಿ!..ಈ ಒನ್‌ಪ್ಲಸ್ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ ಕೆಲವು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗಮನ ಸೆಳೆದಿದೆ. ಅವುಗಳಲ್ಲಿ ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಫೋನ್ ಕೂಡಾ ಒಂದಾಗಿದ್ದು, ಇದು ಬಜೆಟ್ ಪ್ರೈಸ್‌ಟ್ಯಾಗ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈಗ ಆಕರ್ಷಕ ಡಿಸ್ಕೌಂಟ್ ಸಹ ಪಡೆದಿದೆ.
ಹೌದು, ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣದಲ್ಲಿ ಒನ್‌ಪ್ಲಸ್ ಸಂಸ್ಥೆಯ ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಮೊಬೈಲ್ ಶೇ. 10% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ನ 6GB RAM + 128GB ಸ್ಟೋರೇಜ್ ಮಾಡೆಲ್ ಫೋನ್‌ನಿನ ಆಫರ್ ದರವು 17,998ರೂ. ಆಗಿದ್ದು, ಆದರೆ ಅಮೆಜಾನ್‌ನಲ್ಲಿ ಲಭ್ಯ ಇರುವ ಇತರೆ ಕೊಡುಗೆಗಳನ್ನು ಗ್ರಾಹಕರು ಪಡೆದರೆ, 16,749ರೂ. ಗಳಿಗೆ ಖರೀದಿ ಮಾಡಬಹುದು.

ಈ ಮೊಬೈಲ್ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಅಲ್ಲದೇ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದುಕೊಂಡಿದೆ. ಹಾಗಾದರೆ ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಹೀಗಿದೆ
ಒನ್‌ಪ್ಲಸ್‌ನ ಈ ಮೊಬೈಲ್ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.59 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 202ppi ಪಿಕ್ಸೆಲ್ ಸಾಂದ್ರತೆ ಅನ್ನು ಕಾಣಬಹುದಾಗಿದೆ. ಹಾಗೆಯೇ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಪಡೆದಿದ್ದು, ಗೇಮಿಂಗ್ ಗಾಗಿ 240Hz ರೀಫ್ರೆಶ್ ರೇಟ್ ಅನ್ನು ಇದು ಒಳಗೊಂಡಿದೆ. ಇದರ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಇದೆ.

ಯಾವ ಪ್ರೊಸೆಸರ್ ಲಭ್ಯ
ಒನ್‌ಪ್ಲಸ್ ಸಂಸ್ಥೆಯ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಅನ್ನು ಇದು ಕೆಲಸ ಇದೆ. ಅಲ್ಲದೇ 6GB RAM + 128 GB ಮತ್ತು 8GB RAM + 128 GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳ ಇವೆ.

ಟ್ರಿಪಲ್ ಕ್ಯಾಮೆರಾ ಸೌಲಭ್ಯ
ಒನ್‌ಪ್ಲಸ್ ಕಂಪನಿಯ ಈ ಫೋನ್ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ಪವರ್ ಮತ್ತು ಇತರೆ ಸೌಲಭ್ಯಗಳು
ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಯುಎಸ್‌ಬಿ ಟೈಪ್-ಸಿ ಮೂಲಕ 33W ಸೂಪರ್ VOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ 5.2, NFC, GPS ಮತ್ತು A-GPS ಲಭ್ಯ ಇವೆ.


Click it and Unblock the Notifications








